Brendan Taylor Retirement: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ಬ್ರೆಂಡನ್ ಟೇಲರ್
ನನ್ನ ಪ್ರೀತಿಯ ದೇಶಕ್ಕೆ ನನ್ನ ಕೊನೆಯ ಪಂದ್ಯ ಎಂದು ಘೋಷಿಸಲು ನನ್ನ ಹೃದಯ ಭಾರವಾಗಿದೆ. 17 ವರ್ಷಗಳ ವೃತ್ತಿಜೀವನದಲ್ಲಿ ಹಲವು ಏರಿಳಿತಗಳಿವೆ. ಇದು ನನಗೆ ವಿನಮ್ರವಾಗಿರಲು ಕಲಿಸಿದೆ ಎಂದು ಟ್ವೀಟ್ನಲ್ಲಿ ಟೇಲರ್ ಬರೆದುಕೊಂಡಿದ್ದಾರೆ.
ಜಿಂಬಾಬ್ವೆ ಕ್ರಿಕೆಟ್ (Zimbabwe Cricket) ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬ್ರೆಂಡನ್ ಟೇಲರ್ (Brendan Taylor) ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದೊಂದಿಗೆ ಟೇಲರ್ ತಮ್ಮ ನಿವೃತ್ತಿಯನ್ನು ಘೋಷಿಸಿದರು. ಈ ಬಗ್ಗೆ ಟ್ವೀಟ್ ಮಾಡಿದ್ದ ತಿಳಿಸಿರುವ ಅವರು ಐರ್ಲೆಂಡ್ ವಿರುದ್ಧ ಬೆಲ್ ಫಾಸ್ಟ್ ನಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ ನಂತರ ನಾನು ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತನಾಗುತ್ತೇನೆ ಎಂದಿದ್ದರು.
ನನ್ನ ಪ್ರೀತಿಯ ದೇಶಕ್ಕೆ ನನ್ನ ಕೊನೆಯ ಪಂದ್ಯ ಎಂದು ಘೋಷಿಸಲು ನನ್ನ ಹೃದಯ ಭಾರವಾಗಿದೆ. 17 ವರ್ಷಗಳ ವೃತ್ತಿಜೀವನದಲ್ಲಿ ಹಲವು ಏರಿಳಿತಗಳಿವೆ. ಇದು ನನಗೆ ವಿನಮ್ರವಾಗಿರಲು ಕಲಿಸಿದೆ ಎಂದು ಟ್ವೀಟ್ನಲ್ಲಿ ಟೇಲರ್ ಬರೆದುಕೊಂಡಿದ್ದಾರೆ.
ಬ್ರೆಂಡನ್ ಟೇಲರ್ 2004ರಲ್ಲಿ ಶ್ರೀಲಂಕಾ ವಿರುದ್ಧ ಬುಲವಾಯೊದಲ್ಲಿ ನಡೆದ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಅಂತrರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಂದಿನಿಂದ ಇಂದಿನವರೆಗೂ ಜಿಂಬಾಬ್ವೆ ತಂಡದ ಪ್ರಮುಖ ಸದಸ್ಯನಾಗಿ ಉಳಿದಿದ್ದರು. ಒಡಿಐ ಕ್ರಿಕೆಟ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿರುವ ಟೇಲರ್ 205 ಪಂದ್ಯಗಳಿಂದ ಒಟ್ಟಾರೆ 6684 ರನ್ ಗಳಿಸಿದ್ದಾರೆ. ಈ ಮೂಲಕ ಜಿಂಬಾಬ್ವೆ ಪರ ಎರಡನೇ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಮಾಜಿ ಕ್ರಿಕೆಟಿಗ ಆಂಡಿ ಫ್ಲವರ್ ಜಿಂಬಾಬ್ವೆ (6786 ರನ್) ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.
ಇನ್ನೂ ಒಟ್ಟು 34 ಟೆಸ್ಟ್ ಪಂದ್ಯಗಳನ್ನು ಆಡಿರುವ ಟೇಲರ್ 2320 ರನ್ ಗಳಿಸಿದ್ದಾರೆ. ಜೊತೆಗೆ 45 ಅಂತರರಾಷ್ಟ್ರೀಯ ಟಿ20 ಪಂದ್ಯಗಳಿಂದ 934 ರನ್‌ಗಳನ್ನು ಬಾರಿಸಿದ್ದಾರೆ. ಮುಂಬರುವ ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಜಿಂಬಾಬ್ವೆ ತಂಡ ಅರ್ಹತೆ ಪಡೆಯಲು ವಿಫಲವಾಗಿದೆ. ಈ ಕಾರಣಕ್ಕೆ ಐರ್ಲೆಂಡ್ ವಿರುದ್ಧದ ಸರಣಿಯಲ್ಲೇ ಟೇಲರ್ ನಿವೃತ್ತಿ ತೆಗೆದುಕೊಂಡಿದ್ದಾರೆ. ಒಟ್ಟು 17 ಅಂತರರಾಷ್ಟ್ರೀಯ ಶತಕಗಳು 35 ವರ್ಷದ ಬಲಗೈ ಬ್ಯಾಟ್ಸ್‌ಮನ್ ಟೇಲರ್ ಹೆಸರಿನಲ್ಲಿದೆ.
Forever grateful for the journey. Thank you ? pic.twitter.com/tOsYzoE5eH
— Brendan Taylor (@BrendanTaylor86) September 12, 2021
“ನಾನು ನನ್ನ ಪ್ರೀತಿಯ ದೇಶದ ಪರ ಕೊನೆಯ ಪಂದ್ಯವನ್ನಾಡಲಿದ್ದೇನೆ. 17 ವರ್ಷಗಳ ವೃತ್ತಿಜೀವನದಲ್ಲಿ ನಾನು ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಇಷ್ಟು ದೀರ್ಘಕಾಲ ರಾಷ್ಟ್ರವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. 2004ರಲ್ಲಿ ನಾನು ತಂಡ ಕೂಡಿಕೊಂಡಿದ್ದಾಗ ನಾನು ಹಾಕಿಕೊಂಡ ಗುರಿಯೆಂದರೆ, ನನ್ನ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯಬೇಕು ಎನ್ನುವುದಾಗಿತ್ತು. ಜಿಂಬಾಬ್ವೆ ತಂಡಕ್ಕೆ ಮುಂದಿನ ದಿನಗಳಲ್ಲಿ ನನ್ನಿಂದ ಸಾಧ್ಯವಾದುದ್ದನ್ನು ಹಿಂದಿರುಗಿಸಲಿದ್ದೇನೆ. ಈಗ ನನ್ನ ಕುಟುಂಬದವರ ಜೊತೆಗೆ ಸಮಯ ಕಳೆಯುವುದನ್ನು ಬಯಸುತ್ತೇನೆ. ಕ್ರಿಕೆಟ್ ನನ್ನ ಹೃದಯಕ್ಕೆ ಸದಾ ಹತ್ತಿರವಾದದ್ದು ಎಂದು ಭಾವನಾತ್ಮಕವಾಗಿ ಬ್ರೆಂಡನ್ ಟೇಲರ್ ಟ್ವೀಟ್ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ರದ್ದತಿ ಕುರಿತು ಕೊನೆಗೂ ಮೌನ ಮುರಿದ ಕೊಹ್ಲಿ!
(Brendan Taylor retirement: Zimbabwe great Brendan Taylor announces retirement from international cricket)