Sourav Ganguly: ಮೆಂಟರ್ ಆಗಿ ಧೋನಿಯನ್ನು ಆಯ್ಕೆ ಮಾಡಿದ್ದು ಯಾಕೆ ಗೊತ್ತಾ?: ಮಾಸ್ಟರ್ ಪ್ಲಾನ್ ವಿವರಿಸಿದ ಗಂಗೂಲಿ

TV9 Digital Desk

| Edited By: Vinay Bhat

Updated on: Sep 14, 2021 | 8:47 AM

MS Dhoni: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ಟೀಮ್ ಇಂಡಿಯಾಗೆ ಎಂಎಸ್ ಧೋನಿಯನ್ನು ಮೆಂಟರ್ ಆಗಿ ಆಯ್ಕೆ ಮಾಡಿದ ಬಗ್ಗೆ ಸೌರವ್ ಗಂಗೂಲಿ ಮಾತನಾಡಿದ್ದಾರೆ.

Sourav Ganguly: ಮೆಂಟರ್ ಆಗಿ ಧೋನಿಯನ್ನು ಆಯ್ಕೆ ಮಾಡಿದ್ದು ಯಾಕೆ ಗೊತ್ತಾ?: ಮಾಸ್ಟರ್ ಪ್ಲಾನ್ ವಿವರಿಸಿದ ಗಂಗೂಲಿ
MS Dhoni Sourav Ganguly

ಅಕ್ಟೋಬರ್​ನಲ್ಲಿ ಆರಂಭವಾಗಲಿರುವ ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ (ICC T20 World Cup 2021) ಟೂರ್ನಿಗೆ ಇತ್ತೀಚೆಗಷ್ಟೆ ಟೀಮ್ ಇಂಡಿಯಾವನ್ನು (Team India) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಿಸಿತ್ತು. ಕೆಲವೊಂದಿಷ್ಟು ಅಚ್ಚರಿಯ ಆಯ್ಕೆಯ ಜೊತೆಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರನ್ನು ಮೆಂಟರ್ ಆಗಿ ನೇಮಕ ಮಾಡಿದ್ದು ವಿಶೇಷವಾಗಿತ್ತು. ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಅವರು ಧೋನಿಯನ್ನು ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಮೆಂಟರ್ ಆಗಿ ಆಯ್ಕೆ ಮಾಡಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಿ ಯಶಸ್ವಿಯಾದರು. ಆದರೆ, ಈ ಬಗ್ಗೆ ಅನೇಕ ಕ್ರಿಕೆಟ್ ಪಂಡಿತರೇ ಪ್ರಶ್ನೆ ಮಾಡಿದರು. ಈಗಾಗಲೇ ಭಾರತ ತಂಡದಲ್ಲಿ ಮುಖ್ಯ ಕೋಚ್‌ ಆಗಿ ರವಿಶಾಸ್ತ್ರಿ (Ravi Shastri) ಇರುವಾಗ ಮೆಂಟರ್‌ ಅಗತ್ಯವಿದೆಯೇ ಎಂಬ ಮಾತುಗಳು ಕೇಳಿಬಂದಿದ್ದವು. ಸದ್ಯ ಈ ಬಗ್ಗೆ ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ವಿವರಣೆ ನೀಡಿದ್ದಾರೆ. ಧೋನಿಯನ್ನು ಆಯ್ಕೆ ಮಾಡಿದ ಹಿಂದಿನ ಮಾಸ್ಟರ್ ಪ್ಲಾನ್ ಏನು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ಟೀಮ್ ಇಂಡಿಯಾಗೆ ಎಂಎಸ್ ಧೋನಿಯನ್ನು ಮೆಂಟರ್ ಆಗಿ ಆಯ್ಕೆ ಮಾಡಿರುವುದರ ಕುರಿತು ಮನಬಿಚ್ಚಿ ಮಾತನಾಡಿರುವ ಗಂಗೂಲಿ, ವಿಶ್ವಕಪ್‌ ಟೂರ್ನಿಯಲ್ಲಿ ತಂಡಕ್ಕೆ ನೆರವಾಗಲಿ ಎಂಬುದು ನಮ್ಮ ಪ್ರಮುಖ ಉದ್ದೇಶ ಎಂದಿದ್ದಾರೆ.

“ಬಹಳಷ್ಟು ಯೋಚನೆಗಳನ್ನು ಮಾಡಿ ಹಾಗೂ ಸಾಕಷ್ಟು ಚರ್ಚೆಗಳನ್ನು ನಡೆಸಿದ ಧೋನಿಯನ್ನು ಮೆಂಟರ್ ಆಗಿ ಆಯ್ಕೆ ಮಾಡಲು ತೀರ್ಮಾನ ಮಾಡಿದೆವು. ತಂಡಕ್ಕೆ ಧೋನಿಯ ಅವಶ್ಯಕತೆ ಮತ್ತು ಸಹಾಯದ ಅಗತ್ಯತೆ ಇದೆ ಎಂದು ತಿಳಿದುಕೊಂಡ ನಂತರವೇ ಆಯ್ಕೆ ಮಾಡಲಾಯಿತು. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಧೋನಿ ಅತ್ಯುತ್ತಮ ಅನುಭವ ಹೊಂದಿದ್ದಾರೆ. ಈ ನಡೆಯ ಹಿಂದೆ ದೊಡ್ಡ ಆಲೋಚನೆಗಳೇ ಇವೆ. ಮಂಡಳಿ ಸಭೆಯಲ್ಲಿ ಸಾಕಷ್ಟು ಚರ್ಚೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ”, ಎಂಬುದು ಗಂಗೂಲಿ ಮಾತು.

“2019ರಲ್ಲಿ ಆಸ್ಟ್ರೇಲಿಯಾ ತಂಡ ಆಷಸ್‌ ಟೆಸ್ಟ್‌ ಸರಣಿ ಸಲುವಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಮುಖ್ಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಹೊರತಾಗಿಯೂ ಮೆಂಟರ್‌ ಸ್ಥಾನದಲ್ಲಿ ಸ್ಟೀವ್‌ ವಾ ಅವರನ್ನು ಆಸೀಸ್‌ ಪಡೆಯೊಂದಿಗೆ ಕಳುಹಿಸಲಾಗಿತ್ತು. ಈಗ ಧೋನಿ ಆಯ್ಕೆ ಕೂಡ ಇಂಥದ್ದೇ ಒಂದು ರಣತಂತ್ರವಾಗಿದೆ. ಅಂತರರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಭಾರತದ ಪರ ಮತ್ತು ಐಪಿಎಲ್ ಇತಿಹಾಸದಲ್ಲಿ ಉತ್ತಮ ದಾಖಲೆಗಳನ್ನು ಧೋನಿ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಹೀಗಾಗಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಎಂಎಸ್ ಧೋನಿಯಿಂದ ಸಹಾಯವಾಗಲಿದೆ ಎಂಬ ಕಾರಣಕ್ಕೆ ಈ ಆಯ್ಕೆಯನ್ನು ಮಾಡಲಾಯಿತು”, ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಟೀಮ್ ಇಂಡಿಯಾ ಕೊನೆಯದಾಗಿ ಐಸಿಸಿ ಟ್ರೋಫಿಯನ್ನು ಗೆದ್ದಿದ್ದು 2013ರಲ್ಲಿ ಎಂದು ಉಲ್ಲೇಖಿಸಿದ್ದಾರೆ. 2013ರ ನಂತರ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ, ನಾಯಕನಾಗಿ 2 ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ ಎಂ ಎಸ್ ಧೋನಿಯ ಅಗತ್ಯತೆ ಟೀಮ್ ಇಂಡಿಯಾಗಿದೆ ಎಂದು ಇದೇವೇಳೆ ಸೌರವ್ ಗಂಗೂಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಯುಎಇ ಮತ್ತು ಒಮಾನ್‌ ಆತಿಥ್ಯದಲ್ಲಿ ನಡೆಯಲಿರುವ ಈ ಟೂರ್ನಿ, ಅಕ್ಟೋಬರ್‌ 17ರಿಂದ ನವೆಂಬರ್‌ 15ರವರೆಗೆ ನಡೆಯಲಿದೆ.

AB de Villiers: ಅಭ್ಯಾಸಕ್ಕಿಳಿದ ಡಿವಿಲಿಯರ್ಸ್: ಹೊಡೆದ ಶಾಟ್​ಗಳೆಲ್ಲಾ ಮೈದಾನದಿಂದ ಹೊರಕ್ಕೇ

Brendan Taylor Retirement: ಅಂತರರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ವಿದಾಯ ಘೋಷಿಸಿದ ಬ್ರೆಂಡನ್ ಟೇಲರ್

(Sourav Ganguly Reveals Why We Selected MS Dhoni as India mentor for ICC T20 World Cup 2021)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada