ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಆಟಗಾರರ ಪಟ್ಟಿ ಬಿಡುಗಡೆ: ರಾಜ್ಯ ತಂಡದಲ್ಲಿ ರಾಹುಲ್, ಮಯಾಂಕ್

Karnataka Cricket: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಒಟ್ಟು 35 ಆಟಗಾರರ ಪಟ್ಟಿಮಾಡಿದ್ದು, ಇದರಲ್ಲಿ ಕೆ. ಎಲ್ ರಾಹುಲ್ ಹಾಗು ಮಯಾಂಕ್ ಅಗರ್ವಾಲ್ ಹೆಸರು ಕಾಣಿಸಕೊಂಡಿದೆ.

ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಆಟಗಾರರ ಪಟ್ಟಿ ಬಿಡುಗಡೆ: ರಾಜ್ಯ ತಂಡದಲ್ಲಿ ರಾಹುಲ್, ಮಯಾಂಕ್
KL Rahul Mayank Agarwal

ಇದೇ ವರ್ಷ ನವೆಂಬರ್‌ 4 ರಿಂದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 (Syed Mushtaq Ali) ಚಾಂಪಿಯನ್‌ಷಿಪ್‌ ಟೂರ್ನಿ ಮತ್ತು ವಿಜಯ್ ಹಜಾರೆ (Vijay Hazare) ಟ್ರೋಫಿಗೆ ರಾಜ್ಯದ ಸಂಭಾವ್ಯ ಆಟಗಾರರ ಪಟ್ಟಿ ಬಿಡುಗಡೆಗೊಂಡಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KCA) ಒಟ್ಟು 35 ಆಟಗಾರರ ಪಟ್ಟಿಮಾಡಿದ್ದು, ಇದರಲ್ಲಿ ಕೆ. ಎಲ್ ರಾಹುಲ್ (KL Rahul) ಹಾಗು ಮಯಾಂಕ್ ಅಗರ್ವಾಲ್ (Mayank Agarwal) ಹೆಸರು ಕಾಣಿಸಕೊಂಡಿದೆ.

ಅಂದಹಾಗೆ, ಈ ಬಾರಿಯ ರಣಜಿಯಲ್ಲಿ ಕರ್ನಾಟಕ, ದಿಲ್ಲಿ ಹಾಗೂ ಮುಂಬೈ ಬಲಿಷ್ಠ ತಂಡಗಳ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ದೇಶಿ ಮಟ್ಟದಲ್ಲಿ ಈ ಮೂರು ಅತ್ಯಂತ ಬಲಿಷ್ಠ ತಂಡಗಳಾಗಿವೆ. ಈ ತಂಡಗಳ ಜೊತೆಗೆ ಹೈದರಾಬಾದ್‌, ಉತ್ತರಾಖಂಡ್‌ ಹಾಗೂ ಮಹರಾಷ್ಟ್ರ ತಂಡಗಳು ಎಲೈಟ್‌ ಗ್ರೂಪ್‌ ‘ಸಿ’ಯಲ್ಲಿ ಸ್ಥಾನ ಪಡೆದಿವೆ. ಇನ್ನು ಹಾಲಿ ಚಾಂಪಿಯನ್ಸ್ ಸೌರಾಷ್ಟ್ರ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ರೈಲ್ವೇಸ್‌ ಹಾಗೂ ಗೋವಾ ತಂಡಗಳು ಎಲೈಟ್‌ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿವೆ.

ಈ ಬಾರಿ ಫೈನಲ್‌ ಪಂದ್ಯವನ್ನು 2022ರ ಮಾರ್ಚ್‌ 16 ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲದೆ, ಈ ಮೈದಾನದಲ್ಲಿಯೇ ನಾಕೌಟ್‌ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

ಕೋವಿಡ್ 19 ಪಿಡುಗಿನಿಂದಾಗಿ ದೇಶಿ ಕ್ರಿಕೆಟ್‌ ಟೂರ್ನಿ ಆಯೋಜಿಸಲು ಬಿಸಿಸಿಐ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ದೇಶಿ ಟೂರ್ನಿಯನ್ನು ಆಯೋಜಿಸಲು ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕೋವಿಡ್‌-19 ಮುಂಜಾಗ್ರತಾ ಕ್ರಮವಾಗಿ ದೇಶಿ ಕ್ರಿಕೆಟ್‌ ಆವೃತ್ತಿಯಲ್ಲಿ ಪ್ರತಿಯೊಂದು ತಂಡವೂ ಕನಿಷ್ಠ 20 ಆಟಗಾರರು ಹಾಗೂ 10 ಮಂದಿ ಸಹಾಯಕ ಸಿಬ್ಬಂದಿಯನ್ನು ಹೊಂದಿರಬೇಕೆಂದು ತಿಳಿಸಿದೆ.

ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಕಟಿಸಿರುವ 35 ಆಟಗಾರರ ಪಟ್ಟಿ:

ರಾಹುಲ್, ಮಯಂಕ್ ಮತ್ತು ದೇವದತ್ತ ಕ್ರಮವಾಗಿ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್‌, ಜವಾ‌ನ್ಸ್‌ ಕ್ರಿಕೆಟ್ ಕ್ಲಬ್ ಮತ್ತು ಕೇಂಬ್ರಿಜ್ ಕ್ರಿಕೆಟ್ ಕ್ಲಬ್‌ಗಳನ್ನು ಪ್ರತಿನಿಧಿಸುತ್ತಿದ್ದಾರೆ. ಜವಾನ್ಸ್ ಕ್ರಿಕೆಟ್ ಕ್ಲಬ್‌ನ ಮನೀಷ್ ಪಾಂಡೆ, ವಲ್ಚರ್ಸ್‌ ಕ್ರಿಕೆಟ್ ಕ್ಲಬ್‌ನ ಅಭಿಮನ್ಯು ಮಿಥುನ್‌, ಅನಿರುದ್ಧ ಜೋಶಿ, ಕರುಣ್ ನಾಯರ್‌, ಜೆ.ಸುಚಿತ್‌, ಪ್ರವೀಣ್ ದುಬೆ, ರೋನಿತ್ ಮೋರೆ, ಸ್ವಸ್ತಿಕ್ ಯೂನಿಯನ್‌ನ ಆರ್‌.ಸಮರ್ಥ್‌, ಕೆ.ಗೌತಮ್‌, ಶ್ರೇಯಸ್ ಗೋಪಾಲ್‌, ಮಾಡರ್ನ್ ಸಿಸಿಯ ಮೊಹಮ್ಮದ್ ಆಖಿಬ್‌, ಬೆಂಗಳೂರು ಯುನೈಟೆಡ್‌ನ ರೋಹನ್ ಕದಂ, ಮೌಂಟ್ ಜಾಯ್ ಕ್ಲಬ್‌ನ ಪ್ರಸಿದ್ಧ ಕೃಷ್ಣ ಕೂಡ ಆಯ್ಕೆಯಾಗಿದ್ದಾರೆ.

ಪಟ್ಟಿಯಲ್ಲಿರುವ ಇತರ ಆಟಗಾರರು: ರೋಹನ್ ಪಾಟೀಲ್, ಮನೋಜ್ ಭಾಂಡಗೆ, ಕುಶಾಲ್ ವಾಧ್ವಾನಿ (ಸರ್ ಸೈಯದ್), ಅಭಿನವ್ ಮನೋಹರ್‌ (ಬೆಂಗಳೂರು ಯುನೈಟೆಡ್‌), ಕೆ.ವಿ.ಸಿದ್ಧಾರ್ಥ್, ಪ್ರತೀಕ್ ಜೈನ್‌ (ಸ್ವಸ್ತಿಕ್ ಯೂನಿಯನ್‌), ಕೆ.ಸಿ.ಕಾರ್ಯಪ್ಪ (ಜವಾಹರ್‌), ಶ್ರೀಜಿತ್ ಕೆ.ಎಲ್‌, ದರ್ಶನ್ ಎಂ.ಬಿ, ವಿಕೆಟ್ ಕೀಪರ್ ಬಿ.ಆರ್.ಶರತ್ (ವಲ್ಚರ್ಸ್‌ನ), ಆದಿತ್ಯ ಸೋಮಣ್ಣ (ಮೌಂಟ್‌ ಜಾಯ್‌), ವಿದ್ಯಾಧರ ಪಾಟೀಲ, ವಿಕೆಟ್ ಕೀಪರ್ ಶರತ್ ಶ್ರೀನಿವಾಸ್‌ (ಬೆಂಗಳೂರು ಯುನೈಟೆಡ್‌), ನಿಹಾಲ್ ಉಳ್ಳಾಲ್, ನಿಶ್ಚಿತ್ ರಾವ್ (ರಾಜಾಜಿನಗರ ಕ್ರಿಕೆಟರ್ಸ್‌), ಶುಭಾಂಗ್ ಹೆಗ್ಡೆ (ಕೇಂಬ್ರಿಜ್‌), ವೈಶಾಖ್‌ ವಿಜಯಕುಮಾರ್, ಅನೀಶ್ ಕೆ.ವಿ (ಸೋಷಿಯಲ್ ಕ್ರಿಕೆಟರ್ಸ್‌).

IPL 2021: ಈ ಬಾರಿ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್​ಸಿಬಿ: ರಿವೀಲ್ ಮಾಡಿತು ಫ್ರಾಂಚೈಸಿ

Sourav Ganguly: ಮೆಂಟರ್ ಆಗಿ ಧೋನಿಯನ್ನು ಆಯ್ಕೆ ಮಾಡಿದ್ದು ಯಾಕೆ ಗೊತ್ತಾ?: ಮಾಸ್ಟರ್ ಪ್ಲಾನ್ ವಿವರಿಸಿದ ಗಂಗೂಲಿ

(KL Rahul and Mayank Agarwal named in Karnataka probable squad for Syed Mushtaq Ali and Vijay Hazare Trophy)

Click on your DTH Provider to Add TV9 Kannada