Adil Rashid: ಇಂಗ್ಲೆಂಡ್ ಪರ ಹೊಸ ಇತಿಹಾಸ ನಿರ್ಮಿಸಿದ ಆದಿಲ್ ರಶೀದ್

| Updated By: ಝಾಹಿರ್ ಯೂಸುಫ್

Updated on: Dec 13, 2023 | 3:15 PM

Adil Rashid Records: ಈ 2 ವಿಕೆಟ್​ಗಳೊಂದಿಗೆ ಇಂಗ್ಲೆಂಡ್ ಪರ ಟಿ20 ಕ್ರಿಕೆಟ್​ನಲ್ಲಿ 100 ವಿಕೆಟ್​ ಕಬಳಿಸಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಚುಟುಕು ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ವಿಕೆಟ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Adil Rashid: ಇಂಗ್ಲೆಂಡ್ ಪರ ಹೊಸ ಇತಿಹಾಸ ನಿರ್ಮಿಸಿದ ಆದಿಲ್ ರಶೀದ್
Adil Rashid
Follow us on

ಬಾರ್ಬಡೋಸ್​ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್​ ಸ್ಪಿನ್ನರ್ ಆದಿಲ್ ರಶೀದ್ (Adil Rashid) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ನಾಲ್ಕು ಓವರ್​ಗಳನ್ನು ಬೌಲ್​ ಮಾಡಿದ್ದ ಆದಿಲ್ ಕೇವಲ 25 ರನ್ ನೀಡಿ 2 ವಿಕೆಟ್ ಪಡೆದಿದ್ದರು.

ಈ 2 ವಿಕೆಟ್​ಗಳೊಂದಿಗೆ ಇಂಗ್ಲೆಂಡ್ ಪರ ಟಿ20 ಕ್ರಿಕೆಟ್​ನಲ್ಲಿ 100 ವಿಕೆಟ್​ ಕಬಳಿಸಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಚುಟುಕು ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ವಿಕೆಟ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಜೋರ್ಡನ್ ಹೆಸರಿನಲ್ಲಿತ್ತು. ಇಂಗ್ಲೆಂಡ್​ ಆಲ್​ರೌಂಡರ್ ಜೋರ್ಡನ್ 88 ಪಂದ್ಯಗಳಿಂದ 96 ವಿಕೆಟ್​ ಕಬಳಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಪರ ಟಿ20 ಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.

ಇದೀಗ 100 ಪಂದ್ಯಗಳಿಂದ 100 ವಿಕೆಟ್ ಕಬಳಿಸುವ ಮೂಲಕ ಆದಿಲ್ ರಶೀದ್ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ. ಈ ಮೂಲಕ ಇಂಗ್ಲೆಂಡ್ ಪರ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಆಂಗ್ಲರ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್​ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಇನ್ನು ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ನ್ಯೂಝಿಲೆಂಡ್​ನ ಟಿಮ್ ಸೌಥಿ ಹೆಸರಿನಲ್ಲಿತ್ತು. ಕಿವೀಸ್ ವೇಗಿ 114 ಟಿ20 ಪಂದ್ಯಗಳಿಂದ ಒಟ್ಟು 144 ವಿಕೆಟ್ ಕಬಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಸೂರ್ಯಕುಮಾರ್ ಯಾದವ್

ಕುತೂಹಲಕಾರಿ ವಿಷಯ ಎಂದರೆ ಟಿ20 ಕ್ರಿಕೆಟ್​ನಲ್ಲಿ ಭಾರತದ ಯಾವುದೇ ಬೌಲರ್​ 100 ವಿಕೆಟ್​ಗಳ ಸಾಧನೆ ಮಾಡಿಲ್ಲ. 80 ಪಂದ್ಯಗಳಿಂದ 96 ವಿಕೆಟ್ ಕಬಳಿಸಿರುವ ಯುಜ್ವೇಂದ್ರ ಚಹಲ್​ ನೂರು ವಿಕೆಟ್​ಗಳ ದಾಖಲೆಯ ಹೊಸ್ತಿಲಲ್ಲಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಟಾಪ್-5 ಬೌಲರ್​ಗಳು:

  1. ಟಿಮ್ ಸೌಥಿ (ನ್ಯೂಝಿಲೆಂಡ್)- 144 ವಿಕೆಟ್​ಗಳು
  2. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ್)- 140 ವಿಕೆಟ್​ಗಳು
  3. ರಶೀದ್ ಖಾನ್ (ಅಫ್ಘಾನಿಸ್ತಾನ್)- 130 ವಿಕೆಟ್​ಗಳು
  4. ಇಶ್ ಸೋಧಿ (ನ್ಯೂಝಿಲೆಂಡ್)- 126 ವಿಕೆಟ್​ಗಳು
  5. ಲಸಿತ್ ಮಾಲಿಂಗ (ಶ್ರೀಲಂಕಾ)- 107 ವಿಕೆಟ್​ಗಳು.