2024ನೇ ಸಾಲಿನ ಟಿ20 ವಿಶ್ವಕಪ್ನ ಸೂಪರ್ 8ನಲ್ಲಿ ಭಾರತ ಮೊದಲ ಪಂದ್ಯವನ್ನಾಡಿದೆ. ಲೀಗ್ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದ ಅಪ್ಘಾನಿಸ್ತಾನ ತಂಡವನ್ನು ರೋಹಿತ್ ಶರ್ಮಾ (Rohit Sharma) ಪಡೆ ಮಣಿಸಿದೆ. ಈ ಮೂಲಕ ಮೊದಲ ಪಂದ್ಯದಲ್ಲೇ ಗೆಲುವಿನ ನಗೆ ಬೀರಿದೆ. ಈ ಪಂದ್ಯದ ವೇಳೆ ಸೂರ್ಯಕುಮಾರ್ ಹಾಗೂ ರಶೀದ್ ಖಾನ್ ಮಧ್ಯೆ ಕಿರಿಕ್ ಆಗಿತ್ತು. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಶೀದ್ ಖಾನ್ ಅವರು ಎಕಾನಮಿ ಬೌಲರ್ ಎನಿಸಿಕೊಂಡಿದ್ದಾರೆ. ಅವರು ನಾಲ್ಕು ಓವರ್ನಲ್ಲಿ ನೀಡಿದ್ದು ಕೇವಲ 26 ರನ್ಗಳು. ಇಷ್ಟೇ ಅಲ್ಲ ರಿಷಭ್ ಪಂತ್, ವಿರಾಟ್ ಕೊಹ್ಲಿ, ಶಿವಮ್ ದೂಬೆ ವಿಕೆಟ್ನ ಪಡೆದು ತಂಡಕ್ಕೆ ನೆರವಾದರು. ಸೂರ್ಯಕುಮಾರ್ ಯಾದವ್ಗೆ ಬೌಲ್ ಹಾಕುವಾಗ ಮಾತ್ರ ರಶೀದ್ ಖಾನ್ ವಿಫಲರಾಗುತ್ತಿದ್ದರು.
ರಶೀದ್ ಖಾನ್ ಅವರು ಎಸೆದ ಬಾಲ್ಗಳಲ್ಲಿ ಆರು ಬೌಲ್ಗಳನ್ನು ಸೂರ್ಯ ಅವರು ಎದುರಿಸಿದರು. ಈ ಪೈಕಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸ್ ಬಾರಿಸಿದರು. ಎಲ್ಲವೂ ಸ್ವೀಪ್ ಶಾಟ್ನಲ್ಲೇ ಹೊಡೆದರು. ಹೀಗಾಗಿ, ಪಂದ್ಯದ ಮಧ್ಯೆ ಇಬ್ಬರೂ ಮಾತುಕತೆ ನಡೆಸಿಕೊಂಡಿದ್ದಾರೆ.
ಇದನ್ನೂ ಓದಿ: Afghanistan: ಅಫ್ಘಾನಿಸ್ತಾನ್ ಟೆಸ್ಟ್ ತಂಡ ಪ್ರಕಟ: ರಶೀದ್ ಖಾನ್ ಔಟ್..!
ಈ ವಿಡಿಯೋನ ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಕೆಲವರು ಇದನ್ನು ಮಾತಿನ ಚಕಮಕಿ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಇದನ್ನು ಗೆಳೆತನದಲ್ಲಿ ನಡೆದ ಮಾತುಕತೆ ಎಂದಿದ್ದಾರೆ. ರಶೀದ್ ಖಾನ್ಗೆ ಭಾರತೀಯ ಆಟಗಾರರ ಜೊತೆ ಒಳ್ಳೆಯ ಬಾಂಧವ್ಯ ಇದೆ. ಇದಕ್ಕೆ ಕಾರಣ ಆಗಿರುವುದು ಐಪಿಎಲ್. ಹೀಗಾಗಿ, ಇಬ್ಬರೂ ಫ್ರೆಂಡ್ಶಿಪ್ನಲ್ಲಿ ಮಾತನಾಡಿಕೊಂಡಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.