IPL 2023 Points Table
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಟೂರ್ನಿಯಲ್ಲಿ 66 ಪಂದ್ಯಗಳು ಮುಕ್ತಾಯಗೊಂಡಿದೆ. ಅಂತಿಮ ಘಟ್ಟದತ್ತ ಟೂರ್ನಿ ಸಾಗುತ್ತಿದ್ದು ಪ್ಲೇ ಆಫ್ ಗೇರಲು ಕೆಲವು ತಂಡಗಳು ಹರಸಾಹಸ ಪಡುತ್ತಿದೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇಂದು ಎರಡು ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ (DC vs CSK) ಅನ್ನು ಎದುರಿಸಲಿದೆ. ದ್ವಿತೀಯ ಪಂದ್ಯದಲ್ಲಿ ಕೋಲ್ಕತ್ತಾ- ಲಖನೌ ಮುಖಾಮುಖಿ ಆಗಲಿದೆ. ಸದ್ಯ ಐಪಿಎಲ್ 2023 ಪಾಯಿಂಟ್ಸ್ ಟೇಬಲ್ ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.
- ಗುಜರಾತ್ ಟೈಟಾನ್ಸ್ ತಂಡ ಅಗ್ರಸ್ಥಾನದಲ್ಲಿ ಭದ್ರವಾಗಿದ್ದು ಪ್ಲೇ ಆಫ್ಗೆ ಕಾಲಿಟ್ಟಿದೆ. ಆಡಿದ 13 ಪಂದ್ಯಗಳಲ್ಲಿ 9 ಗೆಲುವು, ನಾಲ್ಕು ಸೋಲುಂಡು +0.835 ರನ್ರೇಟ್ನೊಂದಿಗೆ 18 ಅಂಕ ಸಂಪಾದಿಸಿದೆ.
- ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಸ್ಥಾನದಲ್ಲಿದ್ದು ಪ್ಲೇ ಆಫ್ಗೆ ಹತ್ತಿರದಲ್ಲಿದೆ. ಆಡಿದ 13 ಪಂದ್ಯಗಳ ಪೈಕಿ ಏಳರಲ್ಲಿ ಗೆಲುವು ಐದರಲ್ಲಿ ಸೋಲು ಕಂಡು ಒಟ್ಟು 15 ಅಂಕ ಸಂಪಾದಿಸಿದೆ. +0.381 ರನ್ರೇಟ್ ಹೊಂದಿದೆ.
- ಲಖನೌ ಸೂಪರ್ ಜೇಂಟ್ಸ್ ತಂಡ ಮೂರನೇ ಸ್ಥಾನದಲ್ಲಿದೆ. ಆಡಿದ 13 ಪಂದ್ಯಗಳಲ್ಲಿ ಏಳು ಗೆಲುವು, ಐದು ಸೋಲು ಕಂಡು 15 ಅಂಕ ಸಂಪಾದಿಸಿ +0.304 ರನ್ರೇಟ್ ಹೊಂದಿದೆ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ಆಡಿದ ಹದಿಮೂರು ಪಂದ್ಯಗಳ ಪೈಕಿ ಏಳರಲ್ಲಿ ಗೆಲುವು ಆರರಲ್ಲಿ ಸೋಲು ಕಂಡು 14 ಅಂಕ ಸಂಪಾದಿಸಿ +0.180 ರನ್ರೇಟ್ ಹೊಂದಿದೆ.
- ರಾಜಸ್ಥಾನ್ ರಾಯಲ್ಸ್ ತಂಡ ಪಾಯಿಂಟ್ ಟೇಬಲ್ನಲ್ಲಿ ಐದನೇ ಸ್ಥಾನಕ್ಕೆ ಏರಿದೆ. ಆಡಿದ 14 ಪಂದ್ಯಗಳಲ್ಲಿ ಏಳು ಗೆಲುವು, ಏಳು ಸೋಲುಂಡು +0.148ರನ್ರೇಟ್ನೊಂದಿಗೆ 14 ಅಂಕ ಸಂಪಾದಿಸಿದೆ.
- ಮುಂಬೈ ಇಂಡಿಯನ್ಸ್ ತಂಡ ಆರನೇ ಸ್ಥಾನದಲ್ಲಿದೆ. ಇವರು ಆಡಿದ 13 ಪಂದ್ಯದಲ್ಲಿ 6 ಸೋಲು, ಏಳು ಗೆಲುವು ಕಂಡು 14 ಅಂಕ ಸಂಪಾದಿಸಿ -0.128 ರನ್ರೇಟ್ ಹೊಂದಿದೆ.
- ಕೆಕೆಆರ್ ಪಾಯಿಂಟ್ ಟೇಬಲ್ನಲ್ಲಿ ಏಳನೇ ಸ್ಥಾನದಲ್ಲಿದೆ. ಆಡಿದ 13 ಪಂದ್ಯಗಳಲ್ಲಿ ಆರು ಗೆಲುವು, ಏಳು ಪಂದ್ಯಗಳಲ್ಲಿ ಸೋಲುಂಡು -0.256ರನ್ರೇಟ್ನೊಂದಿಗೆ 12 ಅಂಕ ಸಂಪಾದಿಸಿದೆ.
- ಪಂಜಾಬ್ ಕಿಂಗ್ಸ್ ಆಡಿದ 14 ಪಂದ್ಯಗಳಲ್ಲಿ ಏಳು ಸೋಲು- ಏಳು ಜಯ ಕಂಡು 12 ಅಂಕ ಹೊಂದಿ -0.304ರನ್ರೇಟ್ನೊಂದಿಗೆ ಎಂಟನೇ ಸ್ಥಾನದಲ್ಲಿದ್ದು ಟೂರ್ನಿಯಿಂದ ಹೊರಬಿದ್ದಾಗಿದೆ.
- ಡೆಲ್ಲಿ ಕ್ಯಾಪಿಟಲ್ಸ್ ಕೂಡ ಟೂರ್ನಿಯಿಂದ ಔಟ್ ಆಗಿದೆ. ಆಡಿದ 13 ಪಂದ್ಯಗಳ ಪೈಕಿ ಐದರಲ್ಲಿ ಜಯ ಸಾಧಿಸಿ, ಎಂಟು ಪಂದ್ಯಗಳಲ್ಲಿ ಸೋಲುಂಡು 10 ಅಂಕ ಸಂಪಾದಿಸಿ -0.572 ರನ್ರೇಟ್ ಹೊಂದಿದೆ.
- ಸನ್ರೈಸರ್ಸ್ ಹೈದರಾಬಾದ್ ತಂಡ ಕೊನೆಯ ಸ್ಥಾನದಲ್ಲಿದೆ. ಆಡಿದ 13 ಪಂದ್ಯದಲ್ಲಿ 9 ಸೋಲು ನಾಲ್ಕರಲ್ಲಿ ಜಯ ಕಂಡು 8 ಅಂಕ ಸಂಪಾದಿಸಿ -0558 ರನ್ರೇಟ್ ಹೊಂದಿದೆ.
PBKS vs RR Highlights IPL 2023: ಗೆದ್ದ ರಾಜಸ್ಥಾನ್; ಆದರೂ ಆರ್ಸಿಬಿ ಸ್ಥಾನಕ್ಕೆ ಭಂಗವಿಲ್ಲ
ಆರೆಂಜ್ ಕ್ಯಾಪ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಇವರು ಆಡಿದ 13 ಪಂದ್ಯಗಳಲ್ಲಿ ಎಂಟು ಅರ್ಧಶತಕ ಸಿಡಿಸಿ ಒಟ್ಟು 702 ರನ್ ಗಳಿಸಿದ್ದಾರೆ. ರಾಜಸ್ಥಾನ್ ತಂಡದ ಯಶಸ್ವಿ ಜೈಸ್ವಾಲ್ ಆಡಿದ 14 ಪಂದ್ಯಗಳಲ್ಲಿ ಐದು ಅರ್ಧಶತಕ, 1 ಶತಕ ಸಿಡಿಸಿ ಒಟ್ಟು 625 ರನ್ ಕಲೆಹಾಕಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಗುಜರಾತ್ ತಂಡದ ಶುಭ್ಮನ್ ಗಿಲ್ ಮೂರನೇ ಸ್ಥಾನದಲ್ಲಿದ್ದು 13 ಪಂದ್ಯಗಳಿಂದ 576 ರನ್ ಗಳಿಸಿದ್ದಾರೆ.
ಪರ್ಪಲ್ ಕ್ಯಾಪ್:
ಗುಜರಾತ್ ಟೈಟಾನ್ಸ್ ತಂಡದ ಮೊಹಮ್ಮದ್ ಶಮಿ ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಇವರು ಆಡಿದ 13 ಪಂದ್ಯಗಳಲ್ಲಿ 23 ವಿಕೆಟ್ ಪಡೆದುಕೊಂಡಿದ್ದಾರೆ. ಇದೇ ತಂಡದ ರಶೀದ್ ಖಾನ್ ಕೂಡ 13 ಪಂದ್ಯಗಳಲ್ಲಿ 23 ವಿಕೆಟ್ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್ 14 ಪಂದ್ಯಗಳಿಂದ 21 ವಿಕೆಟ್ ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ