
ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ (U19 World Cup) ಫೆಬ್ರವರಿ 1 ರಂದು ಹೈವೋಲ್ಟೇಜ್ ಕದನ ನಡೆಯಲಿದೆ. ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾರತ ಅಂಡರ್-19 ಮತ್ತು ಪಾಕಿಸ್ತಾನ ಅಂಡರ್-19 (India vs Pakistan) ತಂಡಗಳು ಮುಖಾಮುಖಿಯಾಗಲಿವೆ. ಸೆಮಿಫೈನಲ್ ಸ್ಪರ್ಧೆಯನ್ನು ಪರಿಗಣಿಸಿ ಎರಡೂ ತಂಡಗಳಿಗೆ ಈ ಪಂದ್ಯದ ಗೆಲುವು ನಿರ್ಣಾಯಕವಾಗಿದೆ. ಆದಾಗ್ಯೂ, ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ಆಘಾತ ಎದುರಾಗಿದ್ದು, ಗಾಯದಿಂದಾಗಿ ತಂಡದ ಸ್ಟಾರ್ ಆಟಗಾರನೊಬ್ಬನನ್ನು ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
2026 ರ ಅಂಡರ್-19 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ತಂಡ ಭಾರಿ ಹಿನ್ನಡೆ ಅನುಭವಿಸಿದೆ. ಭಾರತದ ವಿರುದ್ಧದ ಸೂಪರ್ ಸಿಕ್ಸ್ ಪಂದ್ಯಕ್ಕೂ ಮುನ್ನ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ಶಯಾನ್ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. 18 ವರ್ಷದ ಶಯಾನ್ ಅಭ್ಯಾಸದ ಸಮಯದಲ್ಲಿ ಗಾಯಗೊಂಡಿದ್ದರು. ವಿಕೆಟ್ ಕೀಪಿಂಗ್ ಮಾಡುವಾಗ, ವೇಗಿಯೊಬ್ಬರ ಎಸೆತ ಅವರ ಮೂಗಿಗೆ ಬಡಿಯಿತು. ಸ್ಕ್ಯಾನ್‌ನಲ್ಲಿ ಮೂಗಿನ ಮೂಳೆ ಮುರಿತವಾಗಿರುವುದು ದೃಢಪಟ್ಟಿದ್ದು, ಅವರನ್ನು ಟೂರ್ನಿಯಿಂದ ಹೊರಗಿಡಲಾಗಿದೆ. ಬದಲಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಪ್ರಕಟಿಸಿದೆ.
ಪಾಕಿಸ್ತಾನಕ್ಕೆ ಒಳ್ಳೆಯ ಸುದ್ದಿ ಏನೆಂದರೆ, ಆರಂಭಿಕ ಆಟಗಾರ ಹಮ್ಜಾ ಜಹೂರ್ ಕೂಡ ವಿಕೆಟ್ ಕೀಪರ್ ಆಗಿರುವುದರಿಂದ ಅವರಿಗೆ ತಕ್ಷಣ ವಿಕೆಟ್ ಕೀಪರ್ ಅಗತ್ಯವಿಲ್ಲ. ಹಮ್ಜಾ, ಭಾರತ ವಿರುದ್ಧದ ಪಂದ್ಯ ಮತ್ತು ಮುಂದಿನ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಶಯಾನ್ ಪ್ರಸ್ತುತ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನ ಪರ ಎರಡು ಪಂದ್ಯಗಳನ್ನು ಆಡಿದ್ದು, ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಏಳು ರನ್ ಗಳಿಸಿದರೆ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಅವರು ಬ್ಯಾಟಿಂಗ್ ಮಾಡಿರಲಿಲ್ಲ.
ಟಿ20 ವಿಶ್ವಕಪ್‌ನಲ್ಲಿ ಒಂದೇ ತಂಡದ ಪರವಾಗಿ ಆಡಲಿದ್ದಾರೆ ಭಾರತ- ಪಾಕ್ ಮೂಲದ ಆಟಗಾರರು
ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧ ಸೋಲಿನೊಂದಿಗೆ ಟೂರ್ನಿಯನ್ನು ಆರಂಭಿಸಿತು, ಆದರೆ ನಂತರ ಸ್ಕಾಟ್ಲೆಂಡ್ ತಂಡವನ್ನು 6 ವಿಕೆಟ್‌ಗಳಿಂದ, ಜಿಂಬಾಬ್ವೆ ತಂಡವನ್ನು 8 ವಿಕೆಟ್‌ಗಳಿಂದ ಮತ್ತು ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಉತ್ತಮ ಆರಂಭ ಕಂಡುಕೊಂಡಿತು. ಈಗ ಸೂಪರ್ ಸಿಕ್ಸ್ ಹಂತಕ್ಕೆ ಕಾಲಿಡಬೇಕೆಂದರೆ ಭಾರತದ ವಿರುದ್ಧದ ಪಂದ್ಯ ಪಾಕ್ ತಂಡಕ್ಕೆ ನಿರ್ಣಾಯಕವಾಗಿದೆ. ಸೆಮಿಫೈನಲ್ ತಲುಪಲು ಪಾಕಿಸ್ತಾನ ಈ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ