BPL 2024-2025: ಕೇವಲ 17 ಎಸೆತಗಳಲ್ಲಿ 82 ರನ್ ಚಚ್ಚಿದ ಅಲೆಕ್ಸ್ ಹೇಲ್ಸ್; ವಿಡಿಯೋ ನೋಡಿ

|

Updated on: Jan 06, 2025 | 9:21 PM

Alex Hales Explosive Century: ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ, ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ ಅವರು ರಂಗ್‌ಪುರ್ ರೈಡರ್ಸ್ ಪರ ಅದ್ಭುತವಾದ ಆಟ ಪ್ರದರ್ಶಿಸಿದ್ದಾರೆ. ಕೇವಲ 56 ಎಸೆತಗಳಲ್ಲಿ ಅಜೇಯ 113 ರನ್ ಗಳಿಸಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 7 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಬಾರಿಸಿ, ಅವರು ತಮ್ಮ ತಂಡಕ್ಕೆ ಸತತ ನಾಲ್ಕನೇ ಗೆಲುವನ್ನು ಗಳಿಸಿಕೊಟ್ಟಿದ್ದಾರೆ. ಇದರಿಂದ ರಂಗ್‌ಪುರ್ ರೈಡರ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದ

BPL 2024-2025: ಕೇವಲ 17 ಎಸೆತಗಳಲ್ಲಿ 82 ರನ್ ಚಚ್ಚಿದ ಅಲೆಕ್ಸ್ ಹೇಲ್ಸ್; ವಿಡಿಯೋ ನೋಡಿ
ಅಲೆಕ್ಸ್ ಹೇಲ್ಸ್
Follow us on

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ರಂಗ್​ಪುರ್ ರೈಡರ್ಸ್ ಪರ ಆಡುತ್ತಿರುವ ಹೇಲ್ಸ್ ಕೇವಲ 56 ಎಸೆತಗಳಲ್ಲಿ ಅಜೇಯ 113 ರನ್​ಗಳ ತೂಫಾನ್ ಶತಕ ಸಿಡಿಸಿದ್ದಾರೆ. ಅವರ ಬಿರುಸಿನ ಇನ್ನಿಂಗ್ಸ್‌ನ ಸಹಾಯದಿಂದ ರಂಗ್‌ಪುರ್ ರೈಡರ್ಸ್​ ತಂಡ, ಸಿಲ್ಹೆಟ್ ಸ್ಟ್ರೈಕರ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಗೆಲ್ಲಲು 20 ಓವರ್‌ಗಳಲ್ಲಿ 206 ರನ್‌ಗಳ ಗುರಿ ಪಡೆದಿದ್ದ ರಂಗ್‌ಪುರ್ ರೈಡರ್ಸ್​ ತಂಡ ಅಲೆಕ್ಸ್ ಹೇಲ್ಸ್ ಮತ್ತು ಸೈಫ್ ಹಸನ್ ಅವರ ಸ್ಫೋಟಕ ಇನ್ನಿಂಗ್ಸ್​ನಿಂದಾಗಿ ಇನ್ನೊಂದು ಓವರ್ ಬಾಕಿ ಇರುವಂತೆಯೇ ಗುರಿ ಮುಟ್ಟಿತು.

ಹೇಲ್ಸ್ ಸಿಕ್ಸರ್, ಬೌಂಡರಿಗಳ ಸುರಿಮಳೆ

ಅಲೆಕ್ಸ್ ಹೇಲ್ಸ್ ಅವರ ಇನ್ನಿಂಗ್ಸ್‌ನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯಾಯಿತು. ಈ ಬಲಗೈ ಬ್ಯಾಟ್ಸ್‌ಮನ್ ತಮ್ಮ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಬಾರಿಸಿದರು. ಇದರರ್ಥ ಹೇಲ್ಸ್ ಕೇವಲ ಬೌಂಡರಿಗಳಿಂದಲೇ 82 ರನ್ ಗಳಿಸಿದರು. ಹೇಲ್ಸ್ ಅವರ ಸ್ಟ್ರೈಕ್ ರೇಟ್ ಕೂಡ 200ಕ್ಕಿಂತ ಹೆಚ್ಚಿದ್ದು ಅವರ ಇನ್ನಿಂಗ್ಸ್​ನ ವಿಶೇಷವಾಗಿತ್ತು. ರಂಗ್‌ಪುರ್ ರೈಡರ್ಸ್ ಕೇವಲ 2 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತ್ತು ಆದರೆ ಇದಾದ ನಂತರ ಸೈಫ್ ಹಸನ್ ಜೊತೆಗೂಡಿ ಹೇಲ್ಸ್ 186 ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಜಯ ತಂದುಕೊಟ್ಟರು.

ರಂಗ್‌ಪುರ ರೈಡರ್ಸ್‌ಗೆ ಸತತ ನಾಲ್ಕನೇ ಗೆಲುವು

ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ರಂಗ್‌ಪುರ ರೈಡರ್ಸ್‌ಗೆ ಇದು ಸತತ ನಾಲ್ಕನೇ ಗೆಲುವು. ನಾಲ್ಕೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ರಂಗ್‌ಪುರ ಅಗ್ರಸ್ಥಾನದಲ್ಲಿದೆ. ಖುಲ್ನಾ ಟೈಗರ್ಸ್ ಕೂಡ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಅಲೆಕ್ಸ್ ಹೇಲ್ಸ್ ಈ ಟೂರ್ನಿಯಲ್ಲಿ ಇದುವರೆಗೆ 4 ಪಂದ್ಯಗಳಲ್ಲಿ 86.50 ಸರಾಸರಿಯಲ್ಲಿ 173 ರನ್ ಗಳಿಸಿದ್ದಾರೆ. ಇದರಲ್ಲಿ 10 ಸಿಕ್ಸರ್ ಮತ್ತು 16 ಬೌಂಡರಿಗಳಳು ಸೇರಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ