ಆರ್ಯವೀರ್ ಆರ್ಭಟ… ಭರ್ಜರಿ ಸೆಂಚುರಿ ಸಿಡಿಸಿದ ಜೂನಿಯರ್ ಸೆಹ್ವಾಗ್

ಭಾರತ ಕಿರಿಯರ ತಂಡದ ಆರ್ಯವೀರ್ ಸೆಹ್ವಾಗ್ ಅವರ ಆರ್ಭಟ ಮುಂದುವರೆದಿದೆ. ತಂದೆ ವೀರೇಂದ್ರ ಸೆಹ್ವಾಗ್ ಶೈಲಿಯಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಆರ್ಯವೀರ್, ಯುಎಇ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಸ್ಫೋಟಕ ಪ್ರದರ್ಶನದ ಮೂಲಕ ಜೂನಿಯರ್ ಸೆಹ್ವಾಗ್, ತಮ್ಮ ಅದ್ಭುತ ಬ್ಯಾಟಿಂಗ್ ಸಾಮರ್ಥ್ಯದಿಂದ ಕ್ರಿಕೆಟ್ ವಲಯದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆರ್ಯವೀರ್ ಆರ್ಭಟ... ಭರ್ಜರಿ ಸೆಂಚುರಿ ಸಿಡಿಸಿದ ಜೂನಿಯರ್ ಸೆಹ್ವಾಗ್
Aaryavir Sehwag
Image Credit source: x.com

Updated on: Nov 10, 2026 | 1:47 PM

ಅಂಡರ್-19 ಏಷ್ಯಾಕಪ್ ಟೂರ್ನಿಯ 11ನೇ ಪಂದ್ಯದಲ್ಲಿ ಆರ್ಯವೀರ್ ಸೆಹ್ವಾಗ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಒಮಾನ್​ ಅಲ್ ಅಮೆರತ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ನಾಯಕ ಲಕ್ಷ್ಯ ರೈಚಂದಾನಿ ಕೇವಲ 17 ರನ್​ಗಳಿಸಿ ಔಟಾಗಿದ್ದರು. ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ ಆರ್ಯವೀರ್ ಸೆಹ್ವಾಗ್ ಭರ್ಜರಿ ಬ್ಯಾಟಿಂಗ್ ನಡೆಸಿದರು.

ಆರಂಭದಲ್ಲಿ ತುಸು ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ ಆರ್ಯವೀರ್ ಆ ಬಳಿಕ ತಂದೆ ಸೆಹ್ವಾಗ್ ಶೈಲಿಯಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 131 ಎಸೆತಗಳಲ್ಲಿ ಶತಕ ಮೂಡಿಬಂತು. ಸೆಂಚುರಿ ಪೂರ್ಣಗೊಂಡ ಬೆನ್ನಲ್ಲೇ ಗೇರ್ ಬದಲಿಸಿದ ಆರ್ಯವೀರ್ ಕೇವಲ 26 ಎಸೆತಗಳಲ್ಲಿ 50 ರನ್ ಚಚ್ಚಿದರು. ಈ ಮೂಲಕ ಕೇವಲ 157 ಎಸೆತಗಳಲ್ಲಿ 150 ರನ್ ಪೂರೈಸಿದರು.

Loading...

ಆದರೆ ಈ ಹಂತದಲ್ಲಿ ತಿರುಗಿಬಿದ್ದ ಯುಎಇ ಬೌಲರ್‌ಗಳು, ಸತತ ಪ್ರಯತ್ನದ ನಂತರ ಕೊನೆಗೂ ಯಶಸ್ಸು ಕಂಡರು. ಪರಿಣಾಮ, ಕ್ರೀಸ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದ ಆರ್ಯವೀರ್ ಸೆಹ್ವಾಗ್ 168 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 17 ಮನಮೋಹಕ ಫೋರ್‌ಗಳೊಂದಿಗೆ 160 ರನ್ ಚಚ್ಚಿ ವಿಕೆಟ್ ಒಪ್ಪಿಸಿದರು.

ಆರ್ಯವೀರ್ ಸೆಹ್ವಾಗ್ ಅವರ ಈ ಭರ್ಜರಿ ಶತಕದ ನೆರವಿನೊಂದಿಗೆ ಭಾರತ ಎ ತಂಡ 45 ಓವರ್​ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 258 ರನ್ ಕಲೆಹಾಕಿದೆ.

ಭಾರತ U19 ಪ್ಲೇಯಿಂಗ್ 11: ಲಕ್ಷ್ಯ ರೈಚಂದಾನಿ (ನಾಯಕ ), ಆರ್ಯವೀರ್ ಸೆಹ್ವಾಗ್ , ವಿ ಕೆ ವಿನೀತ್ , ಯಶ್ವರ್ಧನ್ ಚೌಹಾಣ್ , ಅರ್ಜುನ್ ರಜಪೂತ್ , ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್) , ಮನಲ್ ಚೌಹಾಣ್ , ಆರ್ಯನ್ ಸವ್ಸಾನಿ , ಕಾವ್ಯ ಪಟೇಲ್ ,
ಮೋಹಿತ್ ಉಲ್ವಾ , ಇಶಾನ್ ಸೂದ್.

ಇದನ್ನೂ ಓದಿ: 100 ಗ್ರ್ಯಾಂಡ್‌ಮಾಸ್ಟರ್ಸ್​: ಚೆಸ್ ಲೋಕದಲ್ಲಿ ಭಾರತದ ‘ಸೆಂಚುರಿ’

ಯುಎಇ U19 ಪ್ಲೇಯಿಂಗ್ 11:  ಮುಹಮ್ಮದ್ ಸಾದ್,  ಅಯಾನ್ ಮಿಸ್ಬಾ (ನಾಯಕ) , ಅಹ್ಮದ್ ಖುದಾದಾದ್ , ಯಾಯಿನ್ ರೈ , ಮೊಹಮ್ಮದ್ ನಫೀಸ್ , ಹದಯತುಲ್ಲಾ ಖಾನ್ , ಬಿಲಾಲ್ ಖಾನ್ , ನಸೀಮ್ ಖಾನ್ , ನೂರುಲ್ಲಾ ಅಯೋಬಿ , ಜೈನುಲ್ಲಾ ರೆಹಮಾನಿ , ಉದ್ದೀಶ್ ಸೂರಿ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us