ಇಂದಿನಿಂದ ಆರಂಭವಾಗಿರುವ ಆಶಸ್ (Ashes 2023) ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಆಸೀಸ್ ತಂಡ (Australia playing XI) ಪ್ರಕಟವಾಗಿದ್ದು, ತಂಡದ ಆಡುವ ಹನ್ನೊಂದರ ಬಳಗದಿಂದ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ (Mitchell Starc) ಅವರನ್ನು ಕೈಬಿಡಲಾಗಿದೆ. ಅವರ ಜಾಗದಲ್ಲಿ ಜೋಶ್ ಹ್ಯಾಜಲ್ವುಡ್ಗೆ (Josh Hazelwood) ಅವಕಾಶ ನೀಡಲಾಗಿದೆ. ಸ್ಟಾರ್ಕ್ ಈ ಹಿಂದೆ ವಿಶ್ವ ಟೆಸ್ಟ್ ಚಾಂಪಿಯನ್ ಆಡಿದ್ದ ಆಸೀಸ್ ತಂಡದ ಬಾಗವಾಗಿದ್ದರು. ಇದಾದ ನಂತರ ಆಶಸ್ ಸರಣಿಯಲ್ಲೂ ಕಾಣಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೊದಲ ಟೆಸ್ಟ್‌ನಲ್ಲೇ ಆಸ್ಟ್ರೇಲಿಯಾ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಈ ಪಂದ್ಯದ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮ್ಮಿನ್ಸ್ ಟಾಸ್ ಬಳಿಕ ತಾವೂ ಕೂಡ ಮೊದಲು ಬ್ಯಾಟಿಂಗ್ ಮಾಡಲು ಇಚ್ಚಿಸಿದ್ದೇವು ಎಂದರು. ಇಂಗ್ಲೆಂಡ್ ಈ ಹಿಂದೆ, ಅಂದರೆ 2 ದಿನಗಳ ಹಿಂದೆಯೇ ತನ್ನ ಆಡುವ ಹನ್ನೊಂದರ ಬಳಗವನ್ನು ಹೆಸರಿಸಿತ್ತು. ಆದರೆ ಆಸೀಸ್ ಮಾತ್ರ ಟಾಸ್ವರೆಗೂ ಕುತೂಹಲವನ್ನು ಹಾಗೆಯೇ ಉಳಿಸಿಕೊಂಡಿತ್ತು. ಇದೀಗ ಆಸೀಸ್ ತಂಡದ ಪ್ಲೇಯಿಂಗ್ ಇಲೆವೆನ್ ಹೊರಬಿದ್ದಿದ್ದು, ಸ್ಟಾರ್ಕ್ ಅವರನ್ನು ಆಸೀಸ್ ಕೈಬಿಟ್ಟಿರುವುದು ಅಚ್ಚರಿ ತಂದಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಟಾರ್ಕ್ ಒಟ್ಟು 4 ವಿಕೆಟ್ ಪಡೆದಿದ್ದರು. ಅಲ್ಲದೆ, ಎರಡನೇ ಇನ್ನಿಂಗ್ಸ್‌ನಲ್ಲಿ 41 ರನ್ ಸಹ ಬಾರಿಸಿದ್ದರು.
MLC: ಭಾರತ ಕ್ರಿಕೆಟ್ಗೆ ಗುಡ್ಬೈ ಹೇಳಿ ವಿದೇಶಿ ಲೀಗ್ಗಳತ್ತ ಮುಖ ಮಾಡಿದ ಸಿಎಸ್ಕೆ ಸೂಪರ್ಸ್ಟಾರ್..!
ಪ್ಲೇಯಿಂಗ್ ಇಲೆವೆನ್ ಹೆಸರಿಸಿದ ಬಳಿಕ ಮಾತನಾಡಿದ ಕಮ್ಮಿನ್ಸ್, ಆಸ್ಟ್ರೇಲಿಯಾ ಒಂದೇ ಒಂದು ಬದಲಾವಣೆ ಮಾಡಿದೆ. ಕಳೆದ ಪಂದ್ಯದಲ್ಲಿ ಸ್ಟಾರ್ಕ್ ಅದ್ಬುತ ಪ್ರದರ್ಶನ ನೀಡಿದರೂ ಹ್ಯಾಜಲ್ವುಡ್ರಂತಹ ಬೌಲರ್ಗಳು ತಂಡದಲ್ಲಿ ಇರುವುದು ಒಳ್ಳೆಯದು. ಕೆಲಸದ ಹೊರೆಯನ್ನು ನಿರ್ವಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗೆಯೇ ಆಶಸ್ ಸರಣಿ ಜಯಿಸಲು ಉತ್ತಮ ತಯಾರಿ ನಡೆದಿದೆ ಎಂದು ಹೇಳಿದರು.
ಟಾಸ್ ಗೆದ್ದ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ವಿಕೆಟ್ ಅದ್ಭುತವಾಗಿದೆ. ಇದು ತನಗೆ ಮತ್ತು ತನ್ನ ತಂಡಕ್ಕೆ ಅತ್ಯಂತ ವಿಶೇಷವಾದ ಕ್ಷಣವಾಗಿದೆ. ಮೊಯಿನ್ ಅಲಿ ಮತ್ತೆ ಟೆಸ್ಟ್ ತಂಡಕ್ಕೆ ಮರಳಿರುವುದು ಸಂತಸ ತಂದಿದೆ. ಅವರು ಏನು ಮಾಡಬಹುದು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.
ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೂರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್, ಸ್ಕಾಟ್ ಬೋಲ್ಯಾಂಡ್.
ಇಂಗ್ಲೆಂಡ್ ತಂಡ: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಮೊಯಿನ್ ಅಲಿ, ಓಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:37 pm, Fri, 16 June 23