ಹಿಂದಿನ ಏಷ್ಯಾಕಪ್ ವೇಳಾಪಟ್ಟಿಯಂತೆ, ಸೂಪರ್-4 ರ ಘಟಕ್ಕೆ ಪ್ರವೇಶಿಸಿದ ತಂಡವು ಪ್ರತಿ ತಂಡದ ವಿರುದ್ಧ ಒಂದೊಂದು ಪಂದ್ಯಗಳನ್ನು ಆಡುತ್ತದೆ. ಅಂದರೆ ಸೂಪರ್-4ರ ಹಂತಕ್ಕೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಎಂಟ್ರಿಕೊಟ್ಟರೆ ಇಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಆ ಬಳಿಕ ಈ ಎರಡು ತಂಡಗಳು ಸೂಪರ್-4ರ ಹಂತದಲ್ಲಿ ಮೊದಲೆರಡು ಸ್ಥಾನ ಪಡೆದರೆ, ಮತ್ತೊಮ್ಮೆ, ಅಂದರೆ ಮೂರನೇ ಬಾರಿಗೆ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ.