Asia Cup 2023: ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಡೆದ ಏಷ್ಯಾಕಪ್ನ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಶ್ರೀಲಂಕಾ ತಂಡವು 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಬಾಂಗ್ಲಾದೇಶ್ ನೀಡಿದ 165 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಲಂಕಾ ಪರ ಚರಿತ್ ಅಸಲಂಕಾ ಹಾಗೂ ಸದೀರ ಸಮರವಿಕ್ರಮ ಅರ್ಧಶತಕ ಬಾರಿಸಿ ಮಿಂಚಿದರು. ಈ ಮೂಲಕ ಶ್ರೀಲಂಕಾ ತಂಡವನ್ನು 39 ಓವರ್ಗಳಲ್ಲಿ ಗುರಿ ಮುಟ್ಟಿಸಿದರು.
ಬಾಂಗ್ಲಾದೇಶ್- 164 (42.4)
ಶ್ರೀಲಂಕಾ- 165/5 (39)
ಬಾಂಗ್ಲಾದೇಶ್ (ಪ್ಲೇಯಿಂಗ್ XI): ಮೊಹಮ್ಮದ್ ನಯಿಮ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದಯ್, ಶಕೀಬ್ ಅಲ್ ಹಸನ್(ನಾಯಕ), ಮುಶ್ಫಿಕರ್ ರಹೀಮ್(ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರಹಮಾನ್.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಾಣ.
ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ(ನಾಯಕ), ದುಶನ್ ಹೇಮಂತ, ಮಹೇಶ್ ತೀಕ್ಷಣ, ಮಥೀಶ ಪತಿರಾಣ, ಕಸುನ್ ರಜಿತ, ಕುಸಲ್ ಪೆರೇರಾ ದುನಿತ್ ವೆಳ್ಳಾಲಗೆ, ಬಿನೂರ ಫೆರ್ನಾಂಡೋ
ಬಾಂಗ್ಲಾದೇಶ ತಂಡ: ತಂಝಿದ್ ಹಸನ್, ಮೊಹಮ್ಮದ್ ನಯಿಮ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದಯ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್(ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರಹಮಾನ್, ಶೊಫ್ರಿಫುಲ್ ಇಸ್ಲಾಂ, ಅನಾಮುಲ್ ಹಕ್, ನಸುಮ್ ಅಹ್ಮದ್, ಶಮೀಮ್ ಹೊಸೈನ್, ತಂಝಿಮ್ ಹಸನ್ ಸಾಕಿಬ್.
ಬಾಂಗ್ಲಾದೇಶ್ ನೀಡಿದ 165 ರನ್ಗಳ ಟಾರ್ಗೆಟ್ ಅನ್ನು 39 ಓವರ್ಗಳಲ್ಲಿ ಚೇಸ್ ಮಾಡಿದ ಶ್ರೀಲಂಕಾ. ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ಲಂಕಾ ತಂಡದ ಶುಭಾರಂಭ. ಶ್ರೀಲಂಕಾ ಪರ ಸದೀರ ಸಮರವಿಕ್ರಮ (62) ಹಾಗೂ ಚರಿತ್ ಅಸಲಂಕಾ (62) ಉತ್ತಮ ಬ್ಯಾಟಿಂಗ್.
ಮಹದಿ ಹಸನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಚರಿತ್ ಅಸಲಂಕಾ. ಇದು ಈ ಪಂದ್ಯದ ಮೊದಲ ಸಿಕ್ಸ್. ಬಾಂಗ್ಲಾದೇಶ್ ಇನಿಂಗ್ಸ್ನಲ್ಲಿ ಯಾವುದೇ ಬ್ಯಾಟರ್ ಸಿಕ್ಸ್ ಬಾರಿಸಿರಲಿಲ್ಲ. ಇದೀಗ ಶ್ರೀಲಂಕಾ ಪರ ಚರಿತ್ ಅಸಲಂಕಾ ಮೊದಲ ಸಿಕ್ಸ್ ಸಿಡಿಸಿದ್ದಾರೆ.
85 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಚರಿತ್ ಅಸಲಂಕಾ. ಇದು ಅಸಲಂಕಾ ಅವರ 9ನೇ ಏಕದಿನ ಫಿಫ್ಟಿ. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತ್ಯುತ್ತಮ ಇನಿಂಗ್ಸ್ ಆಡಿದ ಚರಿತ್ ಅಸಲಂಕಾ.
35 ಓವರ್ಗಳ ಅಂತ್ಯಕ್ಕೆ ಶ್ರೀಲಂಕಾ ತಂಡವು 5 ವಿಕೆಟ್ ನಷ್ಟಕ್ಕೆ 143 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ದಸುನ್ ಶಾನಕ ಬ್ಯಾಟಿಂಗ್ ಮಾಡುತ್ತಿದ್ದು, ಗೆಲ್ಲಲು 15 ಓವರ್ಗಳಲ್ಲಿ 22 ರನ್ಗಳ ಅವಶ್ಯಕತೆಯಿದೆ.
BAN 164 (42.4)
ಶಕೀಬ್ ಅಲ್ ಹಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಧನಂಜಯ ಡಿಸಿಲ್ವಾ (2). ಬಾಂಗ್ಲಾದೇಶ್ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಯಶಸ್ಸು. ಶ್ರೀಲಂಕಾ ತಂಡಕ್ಕೆ ಗೆಲ್ಲಲು 37 ರನ್ಗಳ ಅವಶ್ಯಕತೆಯಿದೆ. ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಮೆಹದಿ ಹಸನ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ಹೊರನಡೆದ ಸದೀರ ಸಮರವಿಕ್ರಮ. 77 ಎಸೆತಗಳಲ್ಲಿ 59 ರನ್ ಬಾರಿಸಿ ನಿರ್ಗಮಿಸಿದ ಸದೀರ. ಶ್ರೀಲಂಕಾ ತಂಡಕ್ಕೆ ಗೆಲ್ಲಲು ಇನ್ನು ಕೇವಲ 44 ರನ್ಗಳ ಅವಶ್ಯಕತೆಯಿದೆ. ಇತ್ತ ಬಾಂಗ್ಲಾದೇಶ್ ತಂಡವು 6 ವಿಕೆಟ್ ಕಬಳಿಸಿದರೆ ಮಾತ್ರ ಜಯ ಸಾಧಿಸಬಹುದು.
59 ಎಸೆತಗಳಲ್ಲಿ 6 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ಸದೀರ ಸಮರವಿಕ್ರಮ. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶ್ರೀಲಂಕಾ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ ಸದೀರ. ಇದೀಗ ಏಕದಿನ ಕ್ರಿಕೆಟ್ನಲ್ಲಿ ತಮ್ಮ 4ನೇ ಅರ್ಧಶತಕ ಪೂರೈಸಿದ್ದಾರೆ.
ಮೆಹದಿ ಹಸನ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸ್ವೀಪ್ ಶಾಟ್ ಫೋರ್ ಬಾರಿಸಿದ ಚರಿತ್ ಅಸಲಂಕಾ. ತಂಡದ ಖಾತೆಗೆ 4 ರನ್ಗಳ ಸೇರ್ಪಡೆ. ಗೆಲುವಿನತ್ತ ಮುನ್ನಡೆಯುತ್ತಿರುವ ಶ್ರೀಲಂಕಾ ತಂಡ. ಕ್ರೀಸ್ನಲ್ಲಿ ಚರಿತ್ ಅಸಲಂಕಾ (26) ಹಾಗೂ ಸದೀರ (43) ಬ್ಯಾಟಿಂಗ್.
4ನೇ ವಿಕೆಟ್ಗೆ 50 ರನ್ಗಳ ಜೊತೆಯಾಟವಾಡಿದ ಸದೀರ ಹಾಗೂ ಚರಿತ್ ಅಸಲಂಕಾ. 70 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ ಚರಿತ್-ಸದೀರ. ಶ್ರೀಲಂಕಾ ತಂಡಕ್ಕೆ ಗೆಲ್ಲಲು 72 ರನ್ಗಳ ಅವಶ್ಯಕತೆ.
ಚಿತ್ರದುರ್ಗ: ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೊಟ್ಟಿಗೆಹಳ್ಳಿ ಬಳಿಯ ಬೆಸ್ಕಾಂ ಕಚೇರಿ ಎದುರು ರೈತರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ವಿವಿಧ ಗ್ರಾಮಗಳ ರೈತರು ಆಗಮಿಸಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಬೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
20 ಓವರ್ ಮುಕ್ತಾಯದ ವೇಳೆಗೆ 90 ರನ್ ಕಲೆಹಾಕಿದ ಶ್ರೀಲಂಕಾ. ಚರಿತ್ ಅಸಲಂಕಾ ಹಾಗೂ ಸದೀರ ನಡುವೆ 47 ರನ್ಗಳ ಉತ್ತಮ ಜೊತೆಯಾಟ. ಇನ್ನು 30 ಓವರ್ಗಳಲ್ಲಿ ಕೇವಲ 75 ರನ್ಗಳ ಗುರಿ. ಗೆಲುವಿನತ್ತ ಶ್ರೀಲಂಕಾ ತಂಡ.
15 ಓವರ್ ಮುಕ್ತಾಯದ ವೇಳೆಗೆ 61 ರನ್ ಕಲೆಹಾಕಿದ ಶ್ರೀಲಂಕಾ. ಆರಂಭದಲ್ಲಿ ಮೂರು ವಿಕೆಟ್ ಕಬಳಿಸಿದ ಬಾಂಗ್ಲಾದೇಶ್. ಇದೀಗ ಚರಿತ್ ಅಸಲಂಕಾ ಹಾಗೂ ಸದೀರ ಉತ್ತಮ ಜೊತೆಯಾಟದ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ದಾರೆ. ಅಲ್ಲದೆ 23 ರನ್ಗಳ ಜೊತೆಯಾಟದೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ.
12 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಶ್ರೀಲಂಕಾ ತಂಡ. ಬಾಂಗ್ಲಾದೇಶ್ ತಂಡದಿಂದ ಉತ್ತಮ ಬೌಲಿಂಗ್. ಸದ್ಯ ಕ್ರೀಸ್ನಲ್ಲಿ ಸದೀರ ಹಾಗೂ ಚರಿತ್ ಅಸಲಂಕಾ ಬ್ಯಾಟಿಂಗ್. ಶ್ರೀಲಂಕಾ ತಂಡಕ್ಕೆ ಗೆಲ್ಲಲು ಇನ್ನೂ 111 ರನ್ಗಳ ಅವಶ್ಯಕತೆ. ಬಾಂಗ್ಲಾದೇಶ್ ತಂಡಕ್ಕೆ 7 ವಿಕೆಟ್ಗಳ ಅಗತ್ಯತೆ.
ಶಕೀಬ್ ಅಲ್ ಹಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದ ಕುಸಾಲ್ ಮೆಂಡಿಸ್. 21 ಎಸೆತಗಳಲ್ಲಿ 5 ರನ್ಗಳಿಸಿ ಹೊರನಡೆದ ಮೆಂಡಿಸ್. ಬಾಂಗ್ಲಾದೇಶ್ ತಂಡಕ್ಕೆ 3ನೇ ಯಶಸ್ಸು ತಂದುಕೊಟ್ಟ ನಾಯಕ ಶಕೀಬ್ ಅಲ್ ಹಸನ್.
ತಸ್ಕಿನ್ ಅಹ್ಮದ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಸದೀರ. ಮೊದಲ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಮೂಲಕ ಗಮನ ಸೆಳೆದ ಲಂಕಾ ಬ್ಯಾಟರ್. ಆರಂಭಿಕ ಆಘಾತದಿಂದ ಕಂಬ್ಯಾಕ್ ಮಾಡುವ ಯತ್ನದಲ್ಲಿ ಶ್ರೀಲಂಕಾ ತಂಡ.
ಶೊರಿಫುಲ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಪಾತುಮ್ ನಿಸ್ಸಂಕಾ. 13 ಎಸೆತಗಳಲ್ಲಿ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ನಿಸ್ಸಂಕಾ. ಬಾಂಗ್ಲಾದೇಶ್ ತಂಡಕ್ಕೆ ಆರಂಭಿಕ ಯಶಸ್ಸು.
ತಸ್ಕಿನ್ ಅಹ್ಮದ್ ಮಾರಕ ಎಸೆತಕ್ಕೆ ದಿಮುತ್ ಕರುಣರತ್ನೆ (1) ಕ್ಲೀನ್ ಬೌಲ್ಡ್. 3ನೇ ಓವರ್ನ ಮೊದಲ ಎಸೆತದಲ್ಲೇ ಬಾಂಗ್ಲಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟ ತಸ್ಕಿನ್. ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
ದೆಹಲಿ: ಸುಪ್ರೀಂಕೋರ್ಟ್ನಲ್ಲಿ ನಾಳೆ ಕಾವೇರಿ ಅರ್ಜಿ ವಿಚಾರಣೆ ಹಿನ್ನೆಲೆ ತಮಿಳುನಾಡು ಸರ್ಕಾರದಿಂದ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಕೆಯಾಗಿದೆ. ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ 80 ಟಿಎಂಸಿ ನೀರು ಹರಿಸಬೇಕಿತ್ತು. ಕೇವಲ 30 ಟಿಎಂಸಿ ನೀರು ಮಾತ್ರ ಹರಿಸಲಾಗಿದೆ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ.
ಶ್ರೀಲಂಕಾ ತಂಡದ ಮಾರಕ ಬೌಲಿಂಗ್ಗೆ ತತ್ತರಿಸಿದ ಬಾಂಗ್ಲಾದೇಶ್. ಕೇವಲ 164 ರನ್ಗಳಿಗೆ ಆಲೌಟ್. ಬಾಂಗ್ಲಾದೇಶ್ ಪರ ನಜ್ಮುಲ್ ಶಾಂಟೊ (89) ಗರಿಷ್ಠ ಸ್ಕೋರರ್. 7.4 ಓವರ್ಗಳಲ್ಲಿ 32 ರನ್ ನೀಡಿ 4 ವಿಕೆಟ್ ಕಬಳಿಸಿದ ಮಥೀಶ ಪತಿರಾಣ.
ಮಹೀಶ್ ತೀಕ್ಷಣ ಎಸೆತದಲ್ಲಿ ನಜ್ಮುಲ್ ಶಾಂಟೊ ಕ್ಲೀನ್ ಬೌಲ್ಡ್. 122 ಎಸೆತಗಳಲ್ಲಿ 7 ಫೋರ್ಗಳೊಂದಿಗೆ 89 ರನ್ಗಳಿಸಿ ಔಟಾದ ಶಾಂಟೊ. ಶ್ರೀಲಂಕಾ ತಂಡಕ್ಕೆ 8ನೇ ಯಶಸ್ಸು. ಪಂದ್ಯದ ಮೇಲೆ ಹಿಡಿತ ಸಾಧಿಸಿದ ಲಂಕಾ ಬೌಲರ್ಗಳು.
ದುನಿಲ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಮಹದಿ ಹಸನ್. 16 ಎಸೆತಗಳಲ್ಲಿ 6 ರನ್ಗಳಿಸಿ ನಿರ್ಗಮಿಸಿದ ಮಹದಿ. ಶ್ರೀಲಂಕಾ ತಂಡಕ್ಕೆ 7ನೇ ಯಶಸ್ಸು. ಕ್ರೀಸ್ನಲ್ಲಿ ನಜ್ಮುಲ್ ಶಾಂಟೊ (89) ಏಕಾಂಗಿ ಹೋರಾಟ.
ಬಾಂಗ್ಲಾದೇಶ್ ಇನಿಂಗ್ಸ್ನ 40 ಓವರ್ಗಳು ಮುಕ್ತಾಯವಾಗಿದೆ. ಈ ವೇಳೆಗೆ ಬಾಂಗ್ಲಾ ತಂಡ 160 ರನ್ ಕಲೆಹಾಕಿದರೆ, ಅತ್ತ ಶ್ರೀಲಂಕಾ ತಂಡ 6 ವಿಕೆಟ್ ಕಬಳಿಸಿದೆ. ಇದಾಗ್ಯೂ ಬಾಂಗ್ಲಾದೇಶ್ ತಂಡದ ಎಡಗೈ ದಾಂಡಿಗ ನಜ್ಮುಲ್ ಶಾಂಟೊ (89) ಏಕಾಂಗಿ ಹೋರಾಟ ಮುಂದುವರೆಸಿದ್ದಾರೆ.
ನಜ್ಮುಲ್ ಶಾಂಟೊ ಹಾಗೂ ಮೆಹದಿ ಹಸನ್ ನಡುವೆ ಹೊಂದಾಣಿಕೆಯ ಕೊರತೆ. ರನ್ ಕರೆ ಮಾಡಿ ಓಡಲು ಹಿಂಜರಿದ ಮೆಹದಿ ಹಸನ್. ಅಷ್ಟರಲ್ಲಾಗಲೇ ಸ್ಟ್ರೈಕರ್ ಕ್ರೀಸ್ಗೆ ತಲುಪಿದ ಶಾಂಟೊ. ನಾನ್ ಸ್ಟ್ರೈಕ್ನಲ್ಲಿ ರನೌಟ್ ಮಾಡಿದ ಕಸುನ್ ರಂಜಿತ. ಸ್ಟ್ರೈಕರ್ ಭಾಗದ ಕ್ರೀಸ್ನಿಂದ ಹೊರಗುಳಿದಿದ್ದ ಮೆಹದಿ ಹಸನ್ (5) ಔಟ್.
ಧನಂಜಯ ಡಿಸಿಲ್ವಾ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಶಾಂಟೊ. ಬರೋಬ್ಬರಿ 52 ಎಸೆತಗಳ ಬಳಿಕ ಮೂಡಿಬಂದ ಫೋರ್. ಶ್ರೀಲಂಕಾ ಬೌಲರ್ಗಳ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ನಜ್ಮುಲ್ ಶಾಂಟೊ. 109 ಎಸೆತಗಳಲ್ಲಿ 75 ರನ್ ಬಾರಿಸಿ ಬ್ಯಾಟಿಂಗ್ ಮುಂದುವರೆಸಿರುವ ಶಾಂಟೊ.
ಪತಿರಾಣ ಬೌನ್ಸರ್ ಎಸೆತವನ್ನು ಥರ್ಡ್ ಮ್ಯಾನ್ ಬೌಂಡರಿಯತ್ತ ಬಾರಿಸಲು ಹೋಗಿ ಕ್ಯಾಚ್ ನೀಡಿದ ಮುಶ್ಫಿಕುರ್ ರಹೀಮ್. 22 ಎಸೆತಗಳಲ್ಲಿ 13 ರನ್ಗಳಿಸಿ ಹೊರನಡೆದ ರಹೀಮ್. ಶ್ರೀಲಂಕಾ ತಂಡಕ್ಕೆ 5ನೇ ಯಶಸ್ಸು. ಕ್ರೀಸ್ನಲ್ಲಿ ಶಾಂಟೊ ಹಾಗೂ ಮೆಹದಿ ಹಸನ್ ಬ್ಯಾಟಿಂಗ್.
30 ಓವರ್ಗಳ ಮುಕ್ತಾಯದ ವೇಳೆಗೆ ಬಾಂಗ್ಲಾದೇಶ್ ತಂಡ 121 ರನ್ ಕಲೆಹಾಕಿದೆ. ಅತ್ತ ಶ್ರೀಲಂಕಾ ತಂಡವು 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಕ್ರೀಸ್ನಲ್ಲಿ ಅರ್ಧಶತಕ ಪೂರೈಸಿರುವ ನಜ್ಮುಲ್ ಶಾಂಟೊ (62) ಹಾಗೂ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮುಶ್ಪಿಕುರ್ ರಹೀಮ್ (12) ಬ್ಯಾಟಿಂಗ್ ಮಾಡುತ್ತಿದ್ದು, ಬಾಂಗ್ಲಾದೇಶ್ ತಂಡವು ಸ್ಪರ್ಧಾತ್ಮಕ ಮೊತ್ತ ಪೇರಿಸುವ ನಿರೀಕ್ಷೆಯಿದೆ.
ದುನಿತ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಮೂಲಕ ಫೋರ್ ಬಾರಿಸಿದ ಮುಶ್ಫಿಕುರ್ ರಹೀಮ್. 26ನೇ ಓವರ್ನಲ್ಲಿ ಶತಕ ಪೂರೈಸಿದ ಬಾಂಗ್ಲಾದೇಶ್ ತಂಡ. ಸದ್ಯ ಕ್ರೀಸ್ನಲ್ಲಿ ನಜ್ಮುಲ್ ಶಾಂಟೊ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್.
ಮೊದಲ 25 ಓವರ್ಗಳಲ್ಲಿ ಶ್ರೀಲಂಕಾ ತಂಡವು ಮೇಲುಗೈ ಸಾಧಿಸಿದೆ. ಕೇವಲ 97 ರನ್ ಬಿಟ್ಟು ಕೊಟ್ಟಿರುವ ಲಂಕಾ ಬೌಲರ್ಗಳು 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇನ್ನುಳಿದ 25 ಓವರ್ಗಳ ಮೂಲಕ ಬೃಹತ್ ಮೊತ್ತ ಪೇರಿಸುವ ವಿಶ್ವಾಸದಲ್ಲಿದ್ದಾರೆ ಬಾಂಗ್ಲಾ ಬ್ಯಾಟರ್ಗಳು. ಸದ್ಯ ಕ್ರೀಸ್ನಲ್ಲಿ ಅರ್ಧಶತಕ ಬಾರಿಸಿರುವ ನಜ್ಮುಲ್ ಶಾಂಟೊ ಹಾಗೂ ಅನುಭವಿ ಬ್ಯಾಟರ್ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ದಸುನ್ ಶಾನಕ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ತೌಹಿದ್ ಹೃದೋಯ್. 41 ಎಸೆತಗಳಲ್ಲಿ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ತೌಹಿದ್. ಸದ್ಯ ಕ್ರೀಸ್ನಲ್ಲಿ ನಜ್ಮುಲ್ ಶಾಂಟೊ (52) ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್. 24 ಓವರ್ಗಳಲ್ಲಿ 95 ರನ್ಗಳಿಸಿದ ಬಾಂಗ್ಲಾದೇಶ್. ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್ಮನ್ ಔಟ್.
ಆಕರ್ಷಕ ಫೋರ್ ಬಾರಿಸುವ ಮೂಲಕ 66 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನಜ್ಮುಲ್ ಶಾಂಟೊ. ತಮ್ಮ ಇನಿಂಗ್ಸ್ನಲ್ಲಿ 4 ಫೋರ್ಗಳೊಂದಿಗೆ ಹಾಫ್ ಸೆಂಚುರಿ ಬಾರಿಸಿದ ಬಾಂಗ್ಲಾ ತಂಡದ ಯುವ ಬ್ಯಾಟರ್.
20 ಓವರ್ಗಳು ಮುಕ್ತಾಯವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಬಾಂಗ್ಲಾದೇಶ್ 20 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 75 ರನ್ಗಳು ಮಾತ್ರ. ಅತ್ತ ಶ್ರೀಲಂಕಾ ತಂಡವು ಆರಂಭದಲ್ಲೇ 3 ವಿಕೆಟ್ ಕಬಳಿಸಿ ಬಾಂಗ್ಲಾ ಬ್ಯಾಟರ್ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಕ್ರೀಸ್ನಲ್ಲಿ ನಜ್ಮುಲ್ ಶಾಂಟೊ (40) ಹಾಗೂ ತೌಹಿದ್ (12) ಬ್ಯಾಟಿಂಗ್ ಮಾಡುತ್ತಿದ್ದಾರೆ.
15 ಓವರ್ ಮುಕ್ತಾಯದ ವೇಳೆಗೆ 62 ರನ್ ಕಲೆಹಾಕಿದ ಬಾಂಗ್ಲಾದೇಶ್. 3 ವಿಕೆಟ್ ಕಬಳಿಸಿ ಮೇಲುಗೈ ಸಾಧಿಸಿದ ಶ್ರೀಲಂಕಾ. ಕ್ರೀಸ್ನಲ್ಲಿ ನಜ್ಮುಲ್ ಶಾಂಟೊ (32) ಹಾಗೂ ತೌಹಿದ್ ಹೃದೊಯ್ (8) ಬ್ಯಾಟಿಂಗ್.
ಶ್ರೀಲಂಕಾ ಪರ ತಲಾ ಒಂದೊಂದು ವಿಕೆಟ್ ಪಡೆದ ಮಹೀಶ್ ತೀಕ್ಷಣ. ಪತಿರಾಣ ಹಾಗೂ ಧನಂಜಯ ಡಿಸಿಲ್ವಾ.
ಪತಿರಾಣ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಶಾಂಟೊ. ಈ ಮೂಲಕ ಅರ್ಧಶತಕ ಪೂರೈಸಿದ ಬಾಂಗ್ಲಾದೇಶ್ ತಂಡ. ಕ್ರೀಸ್ನಲ್ಲಿ ನಜ್ಮುಲ್ ಶಾಂಟೊ (22) ಹಾಗೂ ತೌಹಿದ್ ಹೃದೋಯ್ (5) ಬ್ಯಾಟಿಂಗ್.
ಮಥೀಶ ಪತಿರಾಣ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರ ನಡೆದ ಶಕೀಬ್ ಅಲ್ ಹಸನ್. 11 ಎಸೆತಗಳಲ್ಲಿ 4 ರನ್ಗಳಿಸಿ ವಿಕೆಟ್ ಒಪ್ಪಿಸಿದ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್. ಕೇವಲ 36 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಬಾಂಗ್ಲಾದೇಶ್. ಕ್ರೀಸ್ನಲ್ಲಿ ಶಾಂಟೊ ಹಾಗೂ ತೌಹಿದ್ ಬ್ಯಾಟಿಂಗ್.
ಧನಂಜಯ ಡಿಸಿಲ್ವಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್ ನೀಡಿದ ಮೊಹಮ್ಮದ್ ನಯಿಮ್. 23 ಎಸೆತಗಳಲ್ಲಿ 16 ರನ್ಗಳಿಸಿ ನಿರ್ಗಮಿಸಿದ ನಯಿಮ್. ಶ್ರೀಲಂಕಾ ತಂಡದ ಉತ್ತಮ ಬೌಲಿಂಗ್ ಮುಂದುವರಿಕೆ. ಕ್ರೀಸ್ನಲ್ಲಿ ಶಾಂಟೊ ಹಾಗೂ ಶಕೀಬ್ ಅಲ್ ಹಸನ್ ಬ್ಯಾಟಿಂಗ್.
ಕಸುನ್ ರಂಜಿತ ಎಸೆದ 7ನೇ ಓವರ್ನ 3ನೇ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಬಾರಿಸಿದ ಮೊಹಮ್ಮದ್ ನಯಿಮ್….ಫೋರ್. ಬಾಂಗ್ಲಾದೇಶ್ ತಂಡದ ಖಾತೆಗೆ 4 ರನ್ಗಳ ಸೇರ್ಪಡೆ. ಕ್ರೀಸ್ನಲ್ಲಿ ನಯಿಮ್ ಹಾಗೂ ಶಾಂಟೋ ಬ್ಯಾಟಿಂಗ್.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಬಾಂಗ್ಲಾದೇಶ್ ತಂಡವು 5 ಓವರ್ಗಳಲ್ಲಿ ಕೇವಲ 12 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಶ್ರೀಲಂಕಾ ತಂಡಕ್ಕೆ ಮಹೇಶ್ ತೀಕ್ಷಣ ಮೊದಲ ಯಶಸ್ಸು ತಂದುಕೊಟ್ಟಿದ್ದು, ಇದೀಗ ಕ್ರೀಸ್ನಲ್ಲಿ ಮೊಹಮ್ಮದ್ ನಯಿಮ್ ಹಾಗೂ ಶಾಂಟೋ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಮಹೇಶ್ ತೀಕ್ಷಣ ಎಸೆತದಲ್ಲಿ ತಂಝಿದ್ ಹಸನ್ ಎಲ್ಬಿಡಬ್ಲ್ಯೂ. ಶ್ರೀಲಂಕಾ ತಂಡಕ್ಕೆ ಮೊದಲ ಯಶಸ್ಸು. ಚೊಚ್ಚಲ ಪಂದ್ಯದಲ್ಲೇ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ ತಂಝಿದ್ ಹಸನ್.
ಬಾಂಗ್ಲಾದೇಶ್ ಪರ ಆರಂಭಿಕರಾಗಿ ಮೊಹಮ್ಮದ್ ನಯಿಮ್ ಹಾಗೂ ತಂಝಿದ್ ಹಸನ್ ಕಣಕ್ಕಿಳಿದಿದ್ದಾರೆ. ಇನ್ನು ಕಸುನ್ ರಂಜಿತ ಎಸೆದ ಮೊದಲ ಓವರ್ನ 4ನೇ ಎಸೆತದಲ್ಲಿ ಎಡಗೈ ದಾಂಡಿಗ ನಯಿಮ್ ಆಫ್ ಸೈಡ್ನತ್ತ ಫೋರ್ ಬಾರಿಸಿ ಬಾಂಗ್ಲಾದೇಶ್ ತಂಡದ ರನ್ ಖಾತೆ ತೆರೆದರು.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಾಣ.
ಬಾಂಗ್ಲಾದೇಶ್ (ಪ್ಲೇಯಿಂಗ್ XI): ಮೊಹಮ್ಮದ್ ನಯಿಮ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದಯ್, ಶಕೀಬ್ ಅಲ್ ಹಸನ್(ನಾಯಕ), ಮುಶ್ಫಿಕರ್ ರಹೀಮ್(ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರಹಮಾನ್.
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅದರಂತೆ ಶ್ರೀಲಂಕಾ ತಂಡ ಬೌಲಿಂಗ್ ಮಾಡಲಿದೆ.
Bangladesh and Sri Lanka are geared up for a thrilling clash!
With key players missing due to injuries, Sri Lanka faces an uphill battle, while Bangladesh’s infusion of young talent adds a new dimension to their game! 🙌#AsiaCup2023 pic.twitter.com/CUM4hJaFie
— AsianCricketCouncil (@ACCMedia1) August 31, 2023
ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ(ನಾಯಕ), ದುಶನ್ ಹೇಮಂತ, ಮಹೇಶ್ ತೀಕ್ಷಣ, ಮಥೀಶ ಪತಿರಾಣ, ಕಸುನ್ ರಜಿತ, ಕುಸಲ್ ಪೆರೇರಾ ದುನಿತ್ ವೆಳ್ಳಾಲಗೆ, ಬಿನೂರ ಫೆರ್ನಾಂಡೋ
ಬಾಂಗ್ಲಾದೇಶ ತಂಡ: ತಂಝಿದ್ ಹಸನ್, ಮೊಹಮ್ಮದ್ ನಯಿಮ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದಯ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್(ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರಹಮಾನ್, ಶೊಫ್ರಿಫುಲ್ ಇಸ್ಲಾಂ, ಅನಾಮುಲ್ ಹಕ್, ನಸುಮ್ ಅಹ್ಮದ್, ಶಮೀಮ್ ಹೊಸೈನ್, ತಂಝಿಮ್ ಹಸನ್ ಸಾಕಿಬ್.
ಏಷ್ಯಾಕಪ್ನ 2ನೇ ಪಂದ್ಯಕ್ಕೆ ವೇದಿಕೆ ಸಜ್ಜು. ಲಂಕಾದ ಪಲ್ಲೆಕೆಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ದುಸನ್ ಶಾನಕ ನೇತೃತ್ವದ ಶ್ರೀಲಂಕಾ ತಂಡವು ಶಕೀಬ್ ಅಲ್ ಹಸನ್ ಮುನ್ನಡೆಸುವ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಗ್ರೂಪ್-ಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಲಿದೆ.
Published On - 2:12 pm, Thu, 31 August 23