
2025 ರ ಏಷ್ಯಾಕಪ್ (Asia Cup 2025) ಟೂರ್ನಮೆಂಟ್ ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 28 ರವರೆಗೆ ಯುಎಇಯಲ್ಲಿ ನಡೆಯಲಿದೆ. ಈ ಟೂರ್ನಮೆಂಟ್‌ಗಾಗಿ ಪಾಕಿಸ್ತಾನ ತನ್ನ ತಂಡವನ್ನು (Pakistan Cricket Team) ಪ್ರಕಟಿಸಿದೆ. ಅನೇಕ ಯುವ ಆಟಗಾರರಿಂದ ಕೂಡಿರುವ ಈ ತಂಡದಲ್ಲಿ ಇಬ್ಬರು ಅನುಭವಿ ಆಟಗಾರರಾದ ಬಾಬರ್ ಆಝಂ (Babar Azam) ಮತ್ತು ಮೊಹಮ್ಮದ್ ರಿಜ್ವಾನ್ ಅವರ ಹೆಸರಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಇವರಿಬ್ಬರೂ ನಾಯಕರಾಗಿ ತಂಡವನ್ನು ವರ್ಷಗಳ ಕಾಲ ಮುನ್ನಡೆಸಿದ್ದಾರೆಯಾದರೂ 2025 ರ ಏಷ್ಯಾ ಕಪ್‌ನಲ್ಲಿ ಇವರಿಬ್ಬರು ಆಡುವುದನ್ನು ಕಾಣುವುದಿಲ್ಲ. ಈಗ ಪ್ರಶ್ನೆ ಏನೆಂದರೆ, ಈ ಇಬ್ಬರು ಆಟಗಾರರ ನಿರ್ಗಮನದ ನಂತರ ಪಾಕಿಸ್ತಾನದ ಪ್ಲೇಯಿಂಗ್ 11 ಹೇಗಿರಲಿದೆ? ಯಾರು ಯಾವ ಸ್ಥಾನದಲ್ಲಿ ಆಡಲಿದ್ದಾರೆ ಎಂಬುದು.
ಸಲ್ಮಾನ್ ಅಲಿ ಅಘಾ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದು, ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಆರಂಭಿಕ ಆಟಗಾರರ ಬಗ್ಗೆ ಮಾತನಾಡಿದರೆ, ಯುವ ಆಟಗಾರರಾದ ಸಾಹಿಬ್ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಈ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಮೊಹಮ್ಮದ್ ಹ್ಯಾರಿಸ್ ಮೂರನೇ ಕ್ರಮಾಂಕದಲ್ಲಿ ಆಡಿದರೆ, ಹಸನ್ ನವಾಜ್ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದನ್ನು ಕಾಣಬಹುದು.
ನಾಯಕ ಸಲ್ಮಾನ್ ಅಲಿ ಅಘಾ ಐದನೇ ಕ್ರಮಾಂಕದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇದಾದ ನಂತರ, ಆಲ್‌ರೌಂಡರ್‌ಗಳಿಗೆ ತಂಡದಲ್ಲಿ ಅವಕಾಶ ಸಿಗಬಹುದು. ಮೊಹಮ್ಮದ್ ನವಾಜ್ ಮತ್ತು ಫಹೀಮ್ ಅಶ್ರಫ್‌ಗೆ 6 ಮತ್ತು 7 ನೇ ಕ್ರಮಾಂಕದಲ್ಲಿ ಅವಕಾಶ ನೀಡಬಹುದು. ಇಬ್ಬರೂ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ.
ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಅವಕಾಶ ಪಡೆಯಬಹುದು. ಇಬ್ಬರೂ ಪಾಕಿಸ್ತಾನದ ಅತ್ಯಂತ ಅನುಭವಿ ವೇಗದ ಬೌಲರ್‌ಗಳಾಗಿದ್ದಾರೆ. ಇವರೊಂದಿಗೆ ಹಸನ್ ಅಲಿ ಅಥವಾ ಅಬ್ರಾರ್ ಅಹ್ಮದ್ ಅವಕಾಶ ಪಡೆಯಬಹುದು. ವಾಸ್ತವವಾಗಿ, ಯುಎಇಯಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ಸಹಾಯ ಸಿಗುತ್ತದೆ, ಅದಕ್ಕಾಗಿಯೇ ಈ ಇಬ್ಬರು ಆಟಗಾರರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗುತ್ತದೆ. ಯುವ ಸ್ಪಿನ್ನರ್ ಸುಫಿಯಾನ್ ಮುಕಿಮ್ ಪಾಕಿಸ್ತಾನದ ಪ್ಲೇಯಿಂಗ್ 11 ರಲ್ಲಿ ಸ್ಥಾನ ಪಡೆಯಬಹುದು.
ಸಾಹಿಬ್ಜಾದಾ ಫರ್ಹಾನ್, ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್, ಹಸನ್ ನವಾಜ್, ಸಲ್ಮಾನ್ ಅಲಿ ಅಘಾ (ನಾಯಕ), ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್, ಸುಫಿಯಾನ್ ಮುಖಿಮ್.
Asia Cup: ಇದು ಏಷ್ಯಾಕಪ್ನ ಎಷ್ಟನೇ ಆವೃತ್ತಿ? ಭಾರತ ಎಷ್ಟು ಬಾರಿ ಟ್ರೋಫಿ ಗೆದ್ದಿದೆ ಗೊತ್ತಾ?
ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಆಫ್ರಿದಿ ಮತ್ತು ಸುಫ್ಯಾನ್ ಮೊಕಿಮ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:41 pm, Sun, 17 August 25