AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾಕಪ್​ಗೆ ಜಸ್​ಪ್ರೀತ್ ಬುಮ್ರಾ ಗ್ರೀನ್ ಸಿಗ್ನಲ್

Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್​ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್​ನಲ್ಲಿದೆ. ಅದರಂತೆ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ್, ಒಮಾನ್ ಹಾಗೂ ಯುಎಇ ವಿರುದ್ಧ ಕಣಕ್ಕಿಳಿಯಲಿದೆ.

ಏಷ್ಯಾಕಪ್​ಗೆ ಜಸ್​ಪ್ರೀತ್ ಬುಮ್ರಾ ಗ್ರೀನ್ ಸಿಗ್ನಲ್
Jasprit Bumrah
ಝಾಹಿರ್ ಯೂಸುಫ್
|

Updated on:Aug 17, 2025 | 3:24 PM

Share

ಏಷ್ಯಾಕಪ್ ಟಿ20 ಟೂರ್ನಿಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಕಣಕ್ಕಿಳಿಯುವುದಾಗಿ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ತಿಳಿಸಿದ್ದಾರೆ. ಎಕ್ಸ್​ಪ್ರೆಸ್ ಸ್ಪೋರ್ಟ್ಸ್ ವರದಿ ಪ್ರಕಾರ, ಏಷ್ಯಾಕಪ್​ ತಂಡದ ಆಯ್ಕೆಗೆ ಲಭ್ಯವಿರುವುದಾಗಿ ಆಯ್ಕೆ ಸಮಿತಿಗೆ ಬುಮ್ರಾ ತಿಳಿಸಿದ್ದಾರೆ. ಇದರೊಂದಿಗೆ ಏಷ್ಯಾಕಪ್​ ತಂಡದಲ್ಲಿ ಜಸ್​ಪ್ರೀತ್ ಬುಮ್ರಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಇದಕ್ಕೂ ಮುನ್ನ ಇಂಗ್ಲೆಂಡ್​​ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬುಮ್ರಾ ಕೇವಲ 3 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದರು. ಬೆನ್ನು ನೋವಿನ ಸಮಸ್ಯೆಯ ಕಾರಣ ಬುಮ್ರಾಗೆ 2 ಮ್ಯಾಚ್​ಗಳಲ್ಲಿ ವಿಶ್ರಾಂತಿ ನೀಡಲಾಗಿತ್ತು. ಇದೀಗ ಸಂಪೂರ್ಣ ಫಿಟ್​ನೆಸ್ ಸಾಧಿಸಿರುವ ಬುಮ್ರಾ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಅದರಂತೆ ಏಷ್ಯಾಕಪ್​ನಲ್ಲಿ ಭಾರತ ತಂಡದ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಹಾಗೂ ಅಭಿಷೇಕ್ ಶರ್ಮಾ ಆಯ್ಕೆಯಾಗುವುದು ಖಚಿತ. ಇನ್ನು ಮೂರನೇ ಕ್ರಮಾಂಕದ ಬ್ಯಾಟರ್ ಆಗಿ ಶುಭ್​ಮನ್ ಗಿಲ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಹಾಗೆಯೇ ನಾಯಕನಾಗಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳುವುದು ಖಚಿತ.

ಇನ್ನು ವಿಕೆಟ್ ಕೀಪರ್​ ಬ್ಯಾಟರ್​ಗಳಾಗಿ ಸಂಜು ಸ್ಯಾಮ್ಸನ್ ಹಾಗೂ ರಿಷಭ್ ಪಂತ್​ಗೆ ಅವಕಾಶ ನೀಡುವ ಸಾಧ್ಯತೆಯಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಗಾಯಗೊಂಡಿರುವ ಪಂತ್ ಸಂಪೂರ್ಣ ಫಿಟ್​ ಆಗದಿದ್ದರೆ, ಜಿತೇಶ್ ಶರ್ಮಾಗೆ ಚಾನ್ಸ್ ಸಿಗಬಹುದು. ಹಾಗೆಯೇ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಾಗಿ ತಿಲಕ್ ವರ್ಮಾ ಹಾಗೂ ಶಿವಂ ದುಬೆ ಅವರನ್ನು ಆಯ್ಕೆ ಮಾಡಬಹುದು.

ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಸ್ಪಿನ್ನರ್​ ಆಗಿ ವರುಣ್ ಚಕ್ರವರ್ತಿಗೆ ಅವಕಾಶ ನೀಡಲಿದ್ದಾರೆ. ಹಾಗೆಯೇ ವೇಗಿಗಳಾಗಿ ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅದರಂತೆ ಏಷ್ಯಾಕಪ್​ಗೆ ಸಂಭಾವ್ಯ ಭಾರತ ತಂಡ ಈ ಕೆಳಗಿನಂತಿರಲಿದೆ…

  1. ಯಶಸ್ವಿ ಜೈಸ್ವಾಲ್
  2.  ಅಭಿಷೇಕ್ ಶರ್ಮಾ
  3.  ಶುಭ್​ಮನ್ ಗಿಲ್
  4. ಸೂರ್ಯಕುಮಾರ್ ಯಾದವ್ (ನಾಯಕ)
  5. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
  6. ಶಿವಂ ದುಬೆ
  7. ರಿಷಭ್ ಪಂತ್/ಜಿತೇಶ್ ಶರ್ಮಾ (ವಿಕೆಟ್ ಕೀಪರ್)
  8. ಅಕ್ಷರ್ ಪಟೇಲ್
  9. ತಿಲಕ್ ವರ್ಮಾ
  10. ಹಾರ್ದಿಕ್ ಪಾಂಡ್ಯ
  11. ವಾಷಿಂಗ್ಟನ್ ಸುಂದರ್
  12. ವರುಣ್ ಚಕ್ರವರ್ತಿ
  13. ಅರ್ಷದೀಪ್ ಸಿಂಗ್
  14. ಮೊಹಮ್ಮದ್ ಸಿರಾಜ್
  15. ಜಸ್​ಪ್ರೀತ್ ಬುಮ್ರಾ

ಭಾರತದ ಏಷ್ಯಾಕಪ್ ಸಂಪೂರ್ಣ ವೇಳಾಪಟ್ಟಿ:

  • ಭಾರತ vs ಯುಎಇ ಸೆಪ್ಟೆಂಬರ್ 10 (ದುಬೈ)
  • ಭಾರತ vs ಪಾಕಿಸ್ತಾನ್ ಸೆಪ್ಟೆಂಬರ್ 14 (ದುಬೈ)
  • ಭಾರತ vs ಒಮಾನ್  ಸೆಪ್ಟೆಂಬರ್ 19  (ಅಬುಧಾಬಿ)

Published On - 3:21 pm, Sun, 17 August 25

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ