AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 200 ರನ್​: ರಶೀದ್ ಖಾನ್​ನ ಹಣ್ಣುಗಾಯಿ ನೀರುಗಾಯಿ ಮಾಡಿದ ಲಿವಿಂಗ್​​​ಸ್ಟೋನ್

Rashid khan vs Liam livingstoneಟಿ20 ಕ್ರಿಕೆಟ್​​ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ದಾಖಲೆ ರಶೀದ್ ಖಾನ್ ಹೆಸರಿನಲ್ಲಿದೆ. ಈವರೆಗೆ 480 ಇನಿಂಗ್ಸ್ ಆಡಿರುವ ರಶೀದ್ ಒಟ್ಟು 654 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದಾರೆ ಅಫ್ಘಾನ್ ಸ್ಪಿನ್ನರ್​ನ ಈ ಪರಾಕ್ರಮದ ನಡುವೆ ಅಬ್ಬರಿಸಿರುವುದು ಲಿಯಾಮ್ ಲಿವಿಂಗ್​ಸ್ಟೋನ್ ಮಾತ್ರ ಎಂದರೆ ತಪ್ಪಾಗಲಾರದು. ಇದಕ್ಕೆ ಸಾಕ್ಷಿ ಈ ಕೆಳಗಿನ ಅಂಕಿ ಅಂಶಗಳು.

ಝಾಹಿರ್ ಯೂಸುಫ್
|

Updated on: Aug 17, 2025 | 2:35 PM

Share
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಪಡೆದ ಬೌಲರ್… ಅಫ್ಘಾನಿಸ್ತಾನದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಅವರ ಮುಂದೆ ಸೆಟೆದು ನಿಂತ ಕೆಲವೇ ಕೆಲವು ಬ್ಯಾಟರ್​ಗಳಲ್ಲಿ ಇಂಗ್ಲೆಂಡ್​ನ ಲಿಯಾಮ್ ಲಿವಿಂಗ್​ಸ್ಟೋನ್ ಕೂಡ ಒಬ್ಬರು. ಅದು ಐಪಿಎಲ್ ಆಗಿರಲಿ, ಇಲ್ಲಾ ದಿ ಹಂಡ್ರೆಡ್ ಲೀಗ್ ಆಗಿರಲಿ.

1 / 6
ರಶೀದ್ ಖಾನ್ ಹಾಗೂ ಲಿಯಾಮ್ ಲಿವಿಂಗ್​​ಸ್ಟೋನ್ ನಡುವೆ ಜಿದ್ದಾಜಿದ್ದಿನ ಪೈಪೋಟಿಯಂತು ಕಂಡು ಬರುತ್ತಿರುತ್ತದೆ. ಇದೀಗ ಈ ಪೈಪೋಟಿ ದಿ ಹಂಡ್ರೆಡ್ ಲೀಗ್​ ಸೀಸನ್-4 ನಲ್ಲೂ ಮುಂದುವರೆದಿದೆ. ಅದು ಕೂಡ ಒಂದೇ ಓವರ್​ನಲ್ಲಿ ಬರೋಬ್ಬರಿ 26 ರನ್​ ಚಚ್ಚುವ ಮೂಲಕ. ದಿ ಹಂಡ್ರೆಡ್ ಲೀಗ್​ನ 10ನೇ ಪಂದ್ಯದಲ್ಲಿ ರಶೀದ್ ಖಾನ್ ಎಸೆದ 8 ಎಸೆತಗಳಲ್ಲಿ ಲಿವಿಂಗ್​​ಸ್ಟೋನ್ ಒಟ್ಟು 32 ರನ್ ಕಲೆಹಾಕಿದ್ದಾರೆ.

2 / 6
ಈ 32 ರನ್​ಗಳೊಂದಿಗೆ ರಶೀದ್ ಖಾನ್ ವಿರುದ್ಧ 200 ರನ್ ಕಲೆಹಾಕಿದ ವಿಶ್ವದ ಏಕೈಕ ಬ್ಯಾಟರ್ ಎಂಬ ದಾಖಲೆಯನ್ನು ಲಿಯಾಮ್ ಲಿವಿಂಗ್​ಸ್ಟೋನ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರಶೀದ್ ಖಾನ್ ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಕೀರನ್ ಪೊಲಾರ್ಡ್ ಹೆಸರಿನಲ್ಲಿತ್ತು. ಪೊಲಾರ್ಡ್ 25 ಇನಿಂಗ್ಸ್​ಗಳಿಂದ 125 ರನ್​ ಕಲೆಹಾಕಿದ್ದರು.

3 / 6
ಆದರೆ ಐಪಿಎಲ್ ಹಾಗೂ ದಿ ಹಂಡ್ರೆಡ್ ಲೀಗ್​​ಗಳಲ್ಲಿ ರಶೀದ್ ಖಾನ್ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿರುವ ಲಿಯಾಮ್ ಲಿವಿಂಗ್​ಸ್ಟೋನ್ ಕೇವಲ 16 ಇನಿಂಗ್ಸ್​​ಗಳ ಮೂಲಕ 200 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್​​ ವಿರುದ್ಧ ಅತೀ ಹೆಚ್ಚು ರನ್​ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

4 / 6
ಅಷ್ಟೇ ಅಲ್ಲದೆ ರಶೀದ್ ಖಾನ್ ವಿರುದ್ಧ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಹೆಗ್ಗಳಿಕೆಯನ್ನು ಸಹ ಲಿಯಾಮ್ ಲಿವಿಂಗ್​ಸ್ಟೋನ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕ್ರಿಸ್ ಗೇಲ್ 12 ಸಿಕ್ಸ್ ಬಾರಿಸಿ ಅಗ್ರಸ್ಥಾನದಲ್ಲಿದ್ದರು. ಇದೀಗ ರಶೀದ್ ಖಾನ್ ಅವರ ವಿರುದ್ಧ 21 ಸಿಕ್ಸ್ ಸಿಡಿಸುವ ಮೂಲಕ ಲಿವಿಂಗ್​​​ಸ್ಟೋನ್ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

5 / 6
ಇನ್ನು ಲಿಯಾಮ್ ಲಿವಿಂಗ್​ಸ್ಟೋನ್ ಜೊತೆಗಿನ ಪೈಪೋಟಿ ನಡುವೆ ರಶೀದ್ ಖಾನ್ ಕೇವಲ 4 ಬಾರಿ ಮಾತ್ರ ಯಶಸ್ಸು ಸಾಧಿಸಿದ್ದಾರೆ. ಅಂದರೆ 16 ಇನಿಂಗ್ಸ್​​ಗಳಲ್ಲಿ ಲಿವಿಂಗ್​ಸ್ಟೋನ್ ಹಾಗೂ ರಶೀದ್ ಖಾನ್ ಮುಖಾಮುಖಿಯಾಗಿದ್ದು, ಈ ವೇಳೆ ಕೇವಲ 4 ಬಾರಿ ಮಾತ್ರ ಔಟ್ ಮಾಡಿದ್ದಾರೆ. ಈ ಅಂಕಿ ಅಂಶಗಳ ಪ್ರಕಾರ ರಶೀದ್ ಖಾನ್ ವಿರುದ್ಧ ಲಿಯಾಮ್ ಲಿವಿಂಗ್​ಸ್ಟೋನ್ ಸಂಪೂರ್ಣ ಮೇಲುಗೈ ಸಾಧಿಸಿರುವುದು ಸ್ಪಷ್ಟ.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ