ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಗೆ ಪಾಕಿಸ್ತಾನ ತಂಡ ಪ್ರಕಟ; ಈ ದಿನದಂದು ಭಾರತದ ವಿರುದ್ಧ ಕಣಕ್ಕೆ

Asia Cup Rising Stars 2025: ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2025 ಪಂದ್ಯಾವಳಿಗಾಗಿ ಪಾಕಿಸ್ತಾನ 'ಎ' ತಂಡವನ್ನು ಘೋಷಿಸಲಾಗಿದೆ. ಮೊಹಮ್ಮದ್ ಇರ್ಫಾನ್ ಖಾನ್ ನಾಯಕರಾಗಿದ್ದಾರೆ. ಹಿರಿಯ ತಂಡದಿಂದ ಮೂವರು ಆಟಗಾರರೂ ಸೇರಿದ್ದಾರೆ. ನವೆಂಬರ್ 14ರಿಂದ ಕುವೈಟ್‌ನ ದೋಹಾದಲ್ಲಿ ಪಂದ್ಯಾವಳಿ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿರುವುದರಿಂದ, ನವೆಂಬರ್ 16ರಂದು ಉಭಯ ತಂಡಗಳು ಮುಖಾಮುಖಿಯಾಗಲಿವೆ. ಯುವ ಆಟಗಾರರಿಗೆ ಇದು ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ.

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಗೆ ಪಾಕಿಸ್ತಾನ ತಂಡ ಪ್ರಕಟ; ಈ ದಿನದಂದು ಭಾರತದ ವಿರುದ್ಧ ಕಣಕ್ಕೆ
Pak Team

Updated on: Nov 07, 2025 | 8:38 PM

ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಕೆಲವು ವಾರಗಳ ಹಿಂದೆ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಟ್ರೋಫಿಯನ್ನು ಗೆದ್ದುಕೊಂಡಿತು. ಇತ್ತ ಪಾಕಿಸ್ತಾನ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇದೀಗ ಸೀನಿಯರ್ ತಂಡದ ನಂತರ, ಜೂನಿಯರ್ ಆಟಗಾರರು ಏಷ್ಯಾಕಪ್ ಪಂದ್ಯಾವಳಿಯಲ್ಲಿ ತಮ್ಮ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ. ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2025 ರ (Asia Cup Rising Stars 2025) ಪಂದ್ಯಾವಳಿ ಮುಂದಿನ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಟೂರ್ನಿಯ ಹೆಸರನ್ನು ಈ ಆವೃತ್ತಿಯಿಂದ ಬದಲಾಯಿಸಲಾಗಿದೆ. ಈ ಮೊದಲು, ಪಂದ್ಯಾವಳಿಯನ್ನು ಎಮರ್ಜಿಂಗ್ ಏಷ್ಯಾಕಪ್ ಎಂದು ಕರೆಯಲಾಗುತ್ತಿತ್ತು. ಇದೀಗ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2025 ರ ಪಂದ್ಯಾವಳಿಗೆ ಪಾಕಿಸ್ತಾನ ಎ ತಂಡವನ್ನು ಘೋಷಿಸಲಾಗಿದ್ದು, ತಂಡದ ನಾಯಕತ್ವವನ್ನು ಮುಹಮ್ಮದ್ ಇರ್ಫಾನ್ ಖಾನ್ ಅವರಿಗೆ ವಹಿಸಲಾಗಿದೆ.

ಹಿರಿಯರ ತಂಡದಿಂದ ಮೂವರು ಆಯ್ಕೆ

ಪಾಕಿಸ್ತಾನವು ಯುವ ಆಟಗಾರರಿಗೆ ಈ ‘ಎ’ ತಂಡದಲ್ಲಿ ಅವಕಾಶ ನೀಡುವ ಮೂಲಕ ಅವರ ಪ್ರತಿಭೆಗೆ ನ್ಯಾಯ ಒದಗಿಸಿದೆ. ಈ ಆಟಗಾರರಿಗೆ ಈ ಪಂದ್ಯಾವಳಿಯಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಒಂದು ವೇದಿಕೆ ಸಿಕ್ಕಿದೆ. ಪಿಎಸ್ಎಲ್ ಅಂದರೆ ಪಾಕಿಸ್ತಾನ ಸೂಪರ್ ಲೀಗ್, ಅಂಡರ್ 19 ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಯುವ ಆಟಗಾರರನ್ನು ‘ಎ’ ತಂಡದಲ್ಲಿ ಆಯ್ಕೆ ಮಾಡಿದೆ. ಇದರ ಜೊತೆಗೆ ಪಾಕಿಸ್ತಾನದ ಹಿರಿಯರ ತಂಡದಲ್ಲಿಯೂ ಆಡಿದ 3 ಆಟಗಾರರಿಗೆ ಸ್ಥಾನ ಸಿಕ್ಕಿದೆ. ಈ ಮೂವರಲ್ಲಿ ಸುಫ್ಯಾನ್ ಮುಕಿಮ್, ಅಹ್ಮದ್ ಡೇನಿಯಲ್ ಮತ್ತು ಮುಹಮ್ಮದ್ ಇರ್ಫಾನ್ ಸೇರಿದ್ದಾರೆ.

ಪಂದ್ಯಾವಳಿಯ ಬಗ್ಗೆ ಪ್ರಮುಖ ಮಾಹಿತಿ

ಈ ಪಂದ್ಯಾವಳಿಯ ಎಲ್ಲಾ ಪಂದ್ಯಗಳು ಕುವೈತ್‌ನ ದೋಹಾದಲ್ಲಿ ನಡೆಯಲಿವೆ. ನವೆಂಬರ್ 14 ರಿಂದ ಪಂದ್ಯಾವಳಿ ಆರಂಭವಾಗಲಿದೆ. ಪಂದ್ಯಾವಳಿಯಲ್ಲಿರುವ 8 ತಂಡಗಳನ್ನು ತಲಾ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಫೈನಲ್ ಸೇರಿದಂತೆ ಒಟ್ಟು 15 ಟಿ20 ಪಂದ್ಯಗಳನ್ನು ಈ 8 ತಂಡಗಳ ನಡುವೆ ಆಡಲಾಗುತ್ತದೆ. ವಿಶೇಷವೆಂದರೆ ಈ ಪಂದ್ಯಾವಳಿಯ ಎಲ್ಲಾ ಪಂದ್ಯಗಳು ಒಂದೇ ಮೈದಾನದಲ್ಲಿ ನಡೆಯಲಿವೆ. ಈ ಪಂದ್ಯಗಳು ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಏತನ್ಮಧ್ಯೆ, ಈ ಟೂರ್ನಿಯ ಗುಂಪು ಹಂತದಲ್ಲಿ ಪ್ರತಿ ತಂಡವು ತಲಾ 3 ಪಂದ್ಯಗಳನ್ನು ಆಡಲಿದೆ. ಪಾಕಿಸ್ತಾನ ಮತ್ತು ಟೀಂ ಇಂಡಿಯಾ ಎರಡೂ ಒಂದೇ ಗುಂಪಿನಲ್ಲಿವೆ. ಆದ್ದರಿಂದ, ಈ 2 ತಂಡಗಳು ಮುಖಾಮುಖಿಯಾಗುವುದು ಖಚಿತ.

ಎಸಿಸಿ ಪ್ರಧಾನ ಕಚೇರಿಯಿಂದಲೂ ಕಣ್ಮರೆಯಾದ ಏಷ್ಯಾಕಪ್ ಟ್ರೋಫಿ

ಪಾಕಿಸ್ತಾನದ ವೇಳಾಪಟ್ಟಿ

  • ಮೊದಲ ಪಂದ್ಯ, ನವೆಂಬರ್ 14, ಒಮಾನ್ ವಿರುದ್ಧ
  • ಎರಡನೇ ಪಂದ್ಯ, ನವೆಂಬರ್ 16, ಭಾರತ ವಿರುದ್ಧ
  • ಮೂರನೇ ಪಂದ್ಯ, ನವೆಂಬರ್ 18, ಯುಎಇ ವಿರುದ್ಧ

ಪಾಕಿಸ್ತಾನ ತಂಡ: ಮುಹಮ್ಮದ್ ಇರ್ಫಾನ್ ಖಾನ್ (ನಾಯಕ), ಅಹ್ಮದ್ ದಾನಿಯಾಲ್, ಅರಾಫತ್ ಮಿನ್ಹಾಸ್, ಮಾಜ್ ಸದಾಕತ್, ಮೊಹಮ್ಮದ್ ಫೈಕ್, ಮುಹಮ್ಮದ್ ಗಾಜಿ ಘೋರಿ, ಮೊಹಮ್ಮದ್ ನಯೀಮ್, ಮೊಹಮ್ಮದ್ ಸಲ್ಮಾನ್, ಮೊಹಮ್ಮದ್ ಶಹಜಾದ್, ಮುಬಾಸಿರ್ ಖಾನ್, ಸಾದ್ ಮಸೂದ್, ಶಾಹಿದ್ ಅಜೀಜ್, ಸುಫಿಯಾನ್ ಮೊಕಿಮ್, ಉಬೈದ್ ಶಾ ಮತ್ತು ಯಾಸಿರ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:07 pm, Fri, 7 November 25