
ಏಷ್ಯನ್ ಗೇಮ್ಸ್ ಟಿ20 ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪಾಕ್ ಪಡೆ ಫೈನಲ್ಗೇರಿದೆ. ಜಪಾನ್ನ ನಿಶ್ಶಿನ್ನಲ್ಲಿರುವ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಿದ್ದವು. ಮಳೆಯ ಕಾರಣ 13 ಓವರ್ಗಳಿಗೆ ಸೀಮಿತವಾಗಿದ್ದ ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಸಾಹಿಬ್‌ಝಾದ ಫರ್ಹಾನ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ತೌಹಿದ್ ಹೃದಯ್ 25 ಎಸೆತಗಳಲ್ಲಿ 42 ರನ್ ಬಾರಿಸಿದರು. ಈ 42 ರನ್ಗಳ ಕೊಡುಗೆಯೊಂದಿಗೆ ಬಾಂಗ್ಲಾದೇಶ್ ತಂಡವು ನಿಗದಿತ 13 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 111 ರನ್ ಕಲೆಹಾಕಿತು.
13 ಓವರ್ಗಳಲ್ಲಿ 112 ರನ್ಗಳ ಗುರಿ ಪಡೆದ ಪಾಕಿಸ್ತಾನ್ ತಂಡವು ಮೊದಲ ಓವರ್ನಲ್ಲೇ ನಾಯಕ ಸಾಹಿಬ್‌ಝಾದ ಫರ್ಹಾನ್ (1) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಮಾಝ್ ಸದಾಕತ್ (15) ಹಾಗೂ ಉಸ್ಮಾನ್ ಖಾನ್ (14) ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸೈಮ್ ಅಯ್ಯೂಬ್ 12 ಎಸೆತಗಳಲ್ಲಿ 21 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆ ಬಳಿಕ ಜೊತೆಗೂಡಿದ ಅಬ್ದುಲ್ ಸಮದ್ ಹಾಗೂ ಹಸನ್ ನವಾಝ್ ಅದ್ಭುತ ಜೊತೆಯಾಟ ಪ್ರದರ್ಶಿಸುವ ಮೂಲಕ ಬಾಂಗ್ಲಾ ಬೌಲರ್ಗಳ ಬೆಂಡೆತ್ತಿದರು.
ಪರಿಣಾಮ ಪಾಕಿಸ್ತಾನ್ ತಂಡಕ್ಕೆ ಕೊನೆಯ 4 ಓವರ್ಗಳಲ್ಲಿ ಕೇವಲ 36 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ದಾಳಿಗಿಳಿದ ಮುಸ್ತಫಿಝುರ್ ರೆಹಮಾನ್ ಒಂದೇ ಓವರ್ನಲ್ಲಿ ಬರೋಬ್ಬರಿ 23 ರನ್ ನೀಡಿದರು.
ಅದರಂತೆ ಕೊನೆಯ 3 ಓವರ್ಗಳಲ್ಲಿ 12 ರನ್ಗಳ ಗುರಿ ಪಡೆದ ಪಾಕಿಸ್ತಾನ್ ತಂಡವು 11.3 ಓವರ್ಗಳಲ್ಲಿ 112 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪಾಕ್ ಪಡೆ ಫೈನಲ್ಗೇರಿದೆ.
ಪಾಕಿಸ್ತಾನ್ ಪ್ಲೇಯಿಂಗ್ 11: ಸಾಹಿಬ್‌ಝಾದ ಫರ್ಹಾನ್ (ನಾಯಕ) , ಸೈಮ್ ಅಯ್ಯೂಬ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್ )
ಮಾಝ್ ಸದಾಕತ್ , ಹಸನ್ ನವಾಝ್ , ಅಬ್ದುಲ್ ಸಮದ್ , ಅರಾಫತ್ ಮಿನ್ಹಾಸ್ , ಅಹ್ಮದ್ ದಾನಿಯಲ್ , ಮೊಹಮ್ಮದ್ ವಾಸಿಮ್ ಜೂನಿಯರ್ , ಅಬ್ರಾರ್ ಅಹ್ಮದ್ , ಸುಫ್ಯಾನ್ ಮೋಕಿಮ್.
ಇದನ್ನೂ ಓದಿ: ಜಡ್ಡು ಐಡಿಯಾ ರಿಜೆಕ್ಟ್ ಮಾಡಿದ್ದೇನೆ: ಪಂದ್ಯದ ಬಳಿಕ ರೋಹಿತ್ ಶರ್ಮಾ ಹೇಳಿದ್ದೇನು?
ಬಾಂಗ್ಲಾದೇಶ್ ಪ್ಲೇಯಿಂಗ್ 11: ತಂಝಿದ್ ಹಸನ್ ತಮೀಮ್ , ಸೈಫ್ ಹಸನ್ , ಲಿಟ್ಟನ್ ದಾಸ್ (ನಾಯಕ) ,
ತೌಹಿದ್ ಹೃದಯ್ , ಪರ್ವೇಜ್ ಹೊಸೇನ್ ಎಮನ್ , ಮೊಸದ್ದೀಕ್ ಹೊಸೇನ್ , ಮಹೇದಿ ಹಸನ್ , ರಿಷಾದ್ ಹೊಸೇನ್ , ನಸುಮ್ ಅಹ್ಮದ್ , ಶೊರಿಫುಲ್ ಇಸ್ಲಾಂ , ಮುಸ್ತಫಿಝುರ್ ರೆಹಮಾನ್.