
2026ರ ಏಷ್ಯನ್ ಗೇಮ್ಸ್‌ನ ಪುರುಷರ ಟಿ20 ಟೂರ್ನಿಯ ಸೆಮಿಫೈನಲ್ ಪಂದ್ಯಗಳು ನಾಳೆ (ಅಕ್ಟೋಬರ್ 1) ನಡೆಯಲಿವೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾದರೆ, ದ್ವಿತೀಯ ಸೆಮಿಫೈನಲ್ ಮ್ಯಾಚ್ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಕಣಕ್ಕಿಳಿಯಲಿವೆ. ಈ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಫೈನಲ್ಗೆ ಪ್ರವೇಶಿಸಿದರೆ, ಸೋಲುವ ತಂಡಗಳು ಕಂಚಿನ ಪದಕಕ್ಕಾಗಿ ಅಕ್ಟೋಬರ್ 3 ರಂದು ಮುಖಾಮುಖಿಯಾಗಲಿವೆ.
ಭಾರತ ಮತ್ತು ಶ್ರೀಲಂಕಾ ನಡುವಣ ಸೆಮಿಫೈನಲ್ ಪಂದ್ಯವನ್ನು ಏಷ್ಯನ್ ಗೇಮ್ಸ್ 2026ರ ಅಧಿಕೃತ ಪ್ರಸಾರಕರಾಗಿರುವ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್ಗಳಲ್ಲಿ ವೀಕ್ಷಿಸಬಹುದು.
ಇನ್ನು ಮೊಬೈಲ್, ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್ ಟಿವಿಗಳಲ್ಲಿ ಈ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಲು ಬಯಸುವವರು, ಸೋನಿ ಲಿವ್ (Sony LIV) ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಲೈವ್ ಸ್ಟ್ರೀಮಿಂಗ್ ಆನಂದಿಸಬಹುದು.
ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪಾನಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಯಶ್ ಠಾಕೂರ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವಿಪ್ರಾಜ್ ನಿಗಮ್, ವೈಭವ್ ಸೂರ್ಯವಂಶಿ.
ಇದನ್ನೂ ಓದಿ: ಏನಿದು ಇರಾನಿ ಕಪ್? ಇದರ ಹಿನ್ನಲೆಯೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಶ್ರೀಲಂಕಾ ಟಿ20 ತಂಡ: ಆಶೆನ್ ಬಂಡಾರ , ನುವಾನಿಡು ಫೆರ್ನಾಂಡೊ , ಚಾಮಿಕಾ ಕರುಣರತ್ನೆ , ನುವಾನ್ ತುಷಾರ , ಲಸಿತ್ ಕ್ರೂಸ್ಪುಲ್ಲೆ , ದುಶಾನ್ ಹೇಮಂತ , ಸಿನೆತ್ ಜಯವರ್ಧನೆ , ನಿರೋಷನ್ ಡಿಕ್ವೆಲ್ಲಾ , ಸೋಹನ್ ಡಿ ಲಿವೇರಾ , ತರಿಂದು ರತ್ನಾಯಕೆ , ಬಿನುರ ಫೆರ್ನಾಂಡೊ , ಗರುಕ ಸಂಕೇತ್ , ಸಹನ್ ಅರಚ್ಚಿಗೆ (ನಾಯಕ) , ವನುಜಾ ಸಹನ್ , ವಿಜಯಕಾಂತ್ ವಿಯಸ್ಕಾಂತ್.
Published On - 2:14 pm, Wed, 30 September 26