2 ಸರಣಿಗೆ ಆಸ್ಟ್ರೇಲಿಯಾದ 3 ತಂಡಗಳು ಪ್ರಕಟ

Australia Squad: ಮೇ 30 ರಿಂದ ಶುರುವಾಗಲಿರುವ ಪಾಕಿಸ್ತಾನ್ ವಿರುದ್ಧದ ಏಕದಿನ ಸರಣಿ ಹಾಗೂ ಜೂನ್ 7 ರಿಂದ ಆರಂಭವಾಗಲಿರುವ ಬಾಂಗ್ಲಾದೇಶ್ ವಿರುದ್ಧದ ಸರಣಿಗಳಿಗಾಗಿ ಆಸ್ಟ್ರೇಲಿಯಾ ತಂಡವನ್ನು ಘೋಷಿಸಲಾಗಿದೆ. ಈ ತಂಡಗಳಲ್ಲಿ ಐಪಿಎಲ್​ನಲ್ಲಿರುವ ಕೆಲ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ದಾರೆ. ಇದಾಗ್ಯೂ ಈ ಆಟಾರರು ಐಪಿಎಲ್​ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

2 ಸರಣಿಗೆ ಆಸ್ಟ್ರೇಲಿಯಾದ 3 ತಂಡಗಳು ಪ್ರಕಟ
Australia

Updated on: May 11, 2026 | 12:43 PM

ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ವಿರುದ್ಧದ ಸರಣಿಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಐಪಿಎಲ್​ ಅಂತ್ಯದ ವೇಳೆಗೆ ಶುರುವಾಗುವ ಪಾಕಿಸ್ತಾನ್ ವಿರುದ್ಧದ ಸರಣಿಯಿಂದ ಆರ್​ಸಿಬಿ ವೇಗಿ ಜೋಶ್ ಹೇಝಲ್​ವುಡ್, ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್​ ಹೊರಗುಳಿದಿದ್ದಾರೆ. ಅಂದರೆ ಈ ಮೂವರು ಐಪಿಎಲ್​ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇವರಲ್ಲದೆ ಇನ್ನೂ ಕೆಲ ಪ್ರಮುಖ ಆಟಗಾರರು ಐಪಿಎಲ್ ಮುಗಿದ ಬಳಿಕವಷ್ಟೇ ಈ ಸರಣಿಗಾಗಿ ತೆರಳಲಿದ್ದಾರೆ. ಅವರೆಂದರೆ…

  • ಟ್ರಾವಿಸ್ ಹೆಡ್ (SRH): ಐಪಿಎಲ್ ಪ್ಲೇಆಫ್‌ ಹಂತದಲ್ಲಿ ಇರುವುದರಿಂದ, ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಂಡು ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ.
  • ಮಿಚೆಲ್ ಮಾರ್ಷ್ (LSG): ಆಸ್ಟ್ರೇಲಿಯಾ ತಂಡದ ನಾಯಕರಾಗಿ ಆಯ್ಕೆಯಾಗಿರುವ ಮಾರ್ಷ, ಐಪಿಎಲ್​ನ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ಬೆನ್ನಲ್ಲೇ ಪಾಕಿಸ್ತಾನಕ್ಕೆ ತೆರಳಲಿದ್ದಾರೆ.
  • ಕೂಪರ್ ಕೊನೊಲಿ, ಕ್ಸೇವಿಯರ್ ಬಾರ್ಟ್ಲೆಟ್, ಬೆನ್ ಡ್ವಾರ್ಶುಯಿಸ್ (PBKS): ಈ ಆಟಗಾರರು ಐಪಿಎಲ್ ಪ್ಲೇಆಫ್ ಮುಗಿದ ನಂತರವಷ್ಟೇ ತಂಡಕ್ಕೆ ಲಭ್ಯವಾಗಲಿದ್ದಾರೆ.
  • ಮ್ಯಾಥ್ಯೂ ಶಾರ್ಟ್ (CSK): ಆರಂಭಿಕ ಪಂದ್ಯಗಳ ನಂತರವಷ್ಟೇ ಶಾರ್ಟ್​ ಆಸ್ಟ್ರೇಲಿಯಾ ತಂಡವನ್ನು ಕೂಡಿಕೊಳ್ಳಲಿದ್ದಾರೆ.
  • ಕ್ಯಾಮರೋನ್ ಗ್ರೀನ್ (KKR): ಕೆಕೆಆರ್ ತಂಡದ ಲೀಗ್ ಹಂತದ ಪಂದ್ಯಗಳ ಬಳಿಕ ಕ್ಯಾಮರೋನ್ ಗ್ರೀನ್ ಆಸ್ಟ್ರೇಲಿಯಾ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಯುವ ಆಟಗಾರರ ಎಂಟ್ರಿ:

ಎರಡು ಸರಣಿಗಳಿಗಾಗಿ ಆಯ್ಕೆಯಾದ ಆಸ್ಟ್ರೇಲಿಯಾ ತಂಡಕ್ಕೆ ಅಂಡರ್-19 ಟೀಮ್​ ನಾಯಕ ಒಲಿವರ್ ಪೀಕ್, ಆಲ್‌ರೌಂಡರ್ ಲಿಯಾಂ ಸ್ಕಾಟ್ ಮತ್ತು ಜೋಯಲ್ ಡೇವಿಸ್ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ, ಸುಮಾರು ಏಳು ವರ್ಷಗಳ ನಂತರ ವೇಗಿ ಬಿಲ್ಲಿ ಸ್ಟಾನ್ಲೇಕ್ ತಂಡಕ್ಕೆ ಮರಳಿರುವುದು ವಿಶೇಷ.

ಬಾಂಗ್ಲಾದೇಶ್ ಸರಣಿಗೆ ಆಸ್ಟ್ರೇಲಿಯಾ ತಂಡಗಳು:

ಆಸ್ಟ್ರೇಲಿಯಾ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಅಲೆಕ್ಸ್ ಕ್ಯಾರಿ, ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಬೆನ್  ಡ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಟ್ ಕುನ್ಹೆಮನ್, ಮಾರ್ನಸ್ ಲ್ಯಾಬುಶೇನ್, ಮ್ಯಾಟ್ ರೆನ್ಶಾ, ತನ್ವೀರ್ ಸಂಘ, ಲಿಯಾಮ್ ಸ್ಕಾಟ್, ಆ್ಯಡಂ ಝಂಪಾ.

ಆಸ್ಟ್ರೇಲಿಯಾದ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಟಿಮ್ ಡೇವಿಡ್, ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಜೋಯಲ್ ಡೇವಿಸ್, ಆರೋನ್ ಹಾರ್ಡಿ, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮ್ಯಾಟ್ ಕುನ್ಹೆಮನ್, ರಿಲೇ ಮೆರೆಡಿತ್, ಜೋಶ್ ಫಿಲಿಪ್, ಮ್ಯಾಟ್ ರೆನ್ಶಾ, ಆ್ಯಡಂ ಝಂಪಾ.

ಇದನ್ನೂ ಓದಿ: IPL 2026: ಗೆಲುವಿನ ಬೆನ್ನಲ್ಲೇ RCB ಕೋಚ್​ಗೆ ಭಾರಿ ದಂಡ!

ಪಾಕಿಸ್ತಾನ್ ಸರಣಿಗೆ ಆಸ್ಟ್ರೇಲಿಯಾದ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಜೋಶ್ ಇಂಗ್ಲಿಸ್, ಮ್ಯಾಟ್ ಕುನ್ಹೆಮನ್, ಮಾರ್ನಸ್ ಲ್ಯಾಬುಶೇನ್, ರಿಲೆ ಮೆರೆಡಿತ್. ಓಲಿ ಪೀಕ್, ಮ್ಯಾಟ್ ರೆನ್ಶಾ, ತನ್ವೀರ್ ಸಂಘ, ಲಿಯಾಮ್ ಸ್ಕಾಟ್, ಮ್ಯಾಥ್ಯೂ ಶಾರ್ಟ್, ಬಿಲ್ಲಿ ಸ್ಟಾನ್ಲೇಕ್, ಆ್ಯಡಂ ಝಂಪಾ.

 

 

Published On - 12:41 pm, Mon, 11 May 26

Follow Us