ಎರಡು ವರ್ಷಗಳ ನಂತರ ಮತ್ತೊಮ್ಮೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಆಡುತ್ತಿರುವ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಮ್ಮೆ ಶುಭಾರಂಭ ಸಿಕ್ಕಿಲ್ಲ. ಕಳೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ತಂಡದ ಬ್ಯಾಟ್ಸ್‌ಮನ್‌ಗಳು ಮೊದಲ ದಿನವೇ ನಿರಾಸೆ ಮೂಡಿಸಿದ್ದರೆ, ಇದೀಗ ಎರಡನೇ ಫೈನಲ್ ಪಂದ್ಯದಲ್ಲಿ ತಂಡದ ಬೌಲರ್‌ಗಳು ನಿರಾಸೆ ಮೂಡಿಸಿದ್ದಾರೆ. ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಅವರ ಅದ್ಭುತ ಇನ್ನಿಂಗ್ಸ್‌ನ ಆಧಾರದ ಮೇಲೆ, ಆಸ್ಟ್ರೇಲಿಯಾ ಮೊದಲ ದಿನದಲ್ಲಿ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 327 ರನ್ ಗಳಿಸುವ ಮೂಲಕ ಫೈನಲ್‌ಗೆ ಬಲವಾದ ಆರಂಭವನ್ನು ನೀಡಿದೆ. ಇನ್ನು ಭಾರತ ಪರ ಸಿರಾಜ್, ಶಮಿ, ಶಾರ್ದೂಲ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.
ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಮೂರು ವಿಕೆಟ್ ಕಳೆದುಕೊಂಡು 327 ರನ್ ಗಳಿಸಿದೆ. ಟ್ರಾವಿಸ್ ಹೆಡ್ 146 ರನ್ ಗಳಿಸಿ ಅಜೇಯರಾಗಿದ್ದರೆ, ಸ್ಟೀವ್ ಸ್ಮಿತ್ 95 ರನ್ ಗಳಿಸಿ ಅಜೇಯರಾಗಿದ್ದಾರೆ. ಭಾರತದ ಪರ ಮೊಹಮ್ಮದ್ ಶಮಿ, ಸಿರಾಜ್ ಮತ್ತು ಠಾಕೂರ್ ತಲಾ ಒಂದು ವಿಕೆಟ್ ಪಡೆದರು.
ಆಸ್ಟ್ರೇಲಿಯಾದ 300 ರನ್‌ಗಳು ಪೂರ್ಣಗೊಂಡಿವೆ. ಈ ತಂಡ ಆರಂಭಿಕ ವೈಫಲ್ಯದಿಂದ ಹೊರಬಂದು ಉತ್ತಮ ಪುನರಾಗಮನವನ್ನು ಮಾಡಿದೆ. ಇದರ ಕ್ರೆಡಿಟ್ ಸ್ಟೀವ್ ಸ್ಮಿತ್-ಟ್ರಾವಿಸ್ ಹೆಡ್ ಜೋಡಿಗೆ ಸಲ್ಲುತ್ತದೆ.
ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ನಡುವೆ 200 ರನ್ ಜೊತೆಯಾಟ. ಇದುವರೆಗಿನ ಟೆಸ್ಟ್ ಚಾಂಪಿಯನ್‌ಶಿಪ್‌ನ ಅತಿದೊಡ್ಡ ಜೊತೆಯಾಟವಾಗಿದೆ.
ಟ್ರಾವಿಸ್ ಹೆಡ್ ಶತಕ ಬಾರಿಸಿದರು. 65ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಒಂದು ರನ್ ಪಡೆಯುವ ಮೂಲಕ ಶತಕ ಪೂರೈಸಿದ್ದಾರೆ. ಇದರೊಂದಿಗೆ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆಸ್ಟ್ರೇಲಿಯಾದ 200 ರನ್‌ಗಳು ಪೂರ್ಣಗೊಂಡಿವೆ. 59ನೇ ಓವರ್‌ನ ಮೊದಲ ಎಸೆತದಲ್ಲಿ ಹೆಡ್ ಒಂದು ರನ್ ಗಳಿಸುವ ಮೂಲಕ ತಂಡದ 200 ರನ್‌ಗಳನ್ನು ಪೂರೈಸಿದರು.
ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ನಾಲ್ಕನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ಪೂರ್ಣಗೊಳಿಸಿದರು. ಈ ಜೋಡಿ ವಿಕೆಟ್‌ನಲ್ಲಿ ನೆಲೆಯೂರಿದ್ದು ಭಾರತಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.
ದಿನದ ಮೂರನೇ ಮತ್ತು ಕೊನೆಯ ಸೆಷನ್ ಆರಂಭವಾಗಿದೆ. ಈ ಸೆಷನ್ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದಂತೆ ಮತ್ತು ಗರಿಷ್ಠ ರನ್ ಗಳಿಸಲು ಆಸ್ಟ್ರೇಲಿಯ ಪ್ರಯತ್ನಿಸಲಿದೆ. ಅದೇ ಸಮಯದಲ್ಲಿ, ಭಾರತ ವಿಕೆಟ್ಗಳನ್ನು ಪಡೆಯಲು ಪ್ರಯತ್ನಿಸಲಿದೆ.
ಎರಡನೇ ಸೆಷನ್ ಆಟ ಮುಗಿದಿದೆ. ಈ ಸೆಷನ್ನಲ್ಲಿ ಆಸ್ಟ್ರೇಲಿಯಾ ಕೇವಲ ಒಂದು ವಿಕೆಟ್ ಕಳೆದುಕೊಂಡಿದೆ. ಎರಡನೇ ಸೆಷನ್ ಅಂತ್ಯಕ್ಕೆ ಆಸ್ಟ್ರೇಲಿಯಾ 170 ರನ್ ಗಳಿಸಿ ಮೂರು ವಿಕೆಟ್ ಕಳೆದುಕೊಂಡಿದೆ. ಸ್ಟೀವ್ ಸ್ಮಿತ್ ಅಜೇಯ 33 ಮತ್ತು ಟ್ರಾವಿಸ್ ಹೆಡ್ 60 ರನ್ ಗಳಿಸಿ ಅಜೇಯರಾಗಿದ್ದಾರೆ. ಈ ಸೆಷನ್ನಲ್ಲಿ ಆಸ್ಟ್ರೇಲಿಯಾ 97 ರನ್‌ಗಳನ್ನು ತನ್ನ ಖಾತೆಗೆ ಹಾಕಿಕೊಂಡಿದೆ.
ಟ್ರಾವಿಸ್ ಹೆಡ್ 44ನೇ ಓವರ್‌ನ ಐದನೇ ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಹೆಡ್ 60 ಎಸೆತಗಳಲ್ಲಿ 50 ರನ್ ಪೂರೈಸಿದರು.
43ನೇ ಓವರ್‌ನ ಆರನೇ ಎಸೆತದಲ್ಲಿ ಟ್ರಾವಿಸ್ ಹೆಡ್ ಪೋರ್ ಹೊಡೆದು ಆಸ್ಟ್ರೇಲಿಯಾದ 150 ರನ್ ಪೂರೈಸಿದರು. ಈ ಸಮಯದಲ್ಲಿ ಸ್ಮಿತ್ ಮತ್ತು ಹೆಡ್ ವಿಕೆಟ್‌ನಲ್ಲಿದ್ದು ಭಾರತಕ್ಕೆ ಸಮಸ್ಯೆಯಾಗಿ ಉಳಿದಿದೆ.
38 ಓವರ್‌ಗಳ ನಂತರ ಆಸ್ಟ್ರೇಲಿಯಾ ತಂಡ 3 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿದೆ.
ಸ್ಟೀವ್ ಸ್ಮಿತ್ 28* (63)
ಟ್ರಾವಿಸ್ ಹೆಡ್37* (36)
30ನೇ ಓವರ್‌ನ ಮೊದಲ ಎಸೆತದಲ್ಲಿ ಟ್ರಾವಿಸ್ ಹೆಡ್ ಬೌಂಡರಿ ಬಾರಿಸುವ ಮೂಲಕ ಆಸ್ಟ್ರೇಲಿಯಾದ 100 ರನ್ ಪೂರೈಸಿದರು.
ಆಸೀಸ್ 3ನೇ ವಿಕೆಟ್ ಪತನವಾಗಿದೆ
2ನೇ ಸೆಷನ್ನ 2ನೇ ಓವರ್ನಲ್ಲಿ ಲಬುಶೇನ್ ಕ್ಲಿನ್ ಬೌಲ್ಡ್ ಆದರು.
ಭಾರತದ ಪರ ಶಮಿ 3ನೇ ವಿಕೆಟ್ ಪಡೆದರು.
ಆಸೀಸ್ 76/3
ಮೊದಲ ದಿನದ ಮೊದಲ ಸೆಷನ್ ಮುಗಿದಿದೆ. ಊಟದ ಹೊತ್ತಿಗೆ ಆಸ್ಟ್ರೇಲಿಯ 73 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿದೆ.ಉಸ್ಮಾನ್ ಖವಾಜಾ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡ ನಂತರ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲಬುಶೆನ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು.ಆದರೆ ವಾರ್ನರ್ ಅರ್ಧಶತಕವನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದರು.
ಆಸೀಸ್ 2ನೇ ವಿಕೆಟ್ ಪತನವಾಗಿದೆ
43 ರನ್ ಬಾರಿಸಿದ್ದ ವಾರ್ನರ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
ಟೀಂ ಇಂಡಿಯಾ ಪರ ಶಾರ್ದೂಲ್ 2ನೇ ವಿಕೆಟ್ ಪಡೆದಿದ್ದಾರೆ.
ಆಸೀಸ್ 72/2
ಆಸೀಸ್ ಇನ್ನಿಂಗ್ಸ್ ಅನ್ನು ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲಬುಶೇನ್ ಮುನ್ನಡೆಸುತ್ತಿದ್ದಾರೆ. ತಂಡ 21 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 67 ರನ್ ಕಲೆಹಾಕಿದೆ. ಡೇವಿಡ್ ವಾರ್ನರ್ 39 ರನ್ ಗಳಿಸಿ ಆಡುತ್ತಿದ್ದಾರೆ. ಲಬುಶೇನ್ 26 ರನ್ ಗಳಿಸಿ ಆಡುತ್ತಿದ್ದಾರೆ. ಇವರಿಬ್ಬರ ಜೊತೆಯಾಟ ಅರ್ಧಶತಕ ಪೂರೈಸಿದೆ.
15ನೇ ಓವರ್ನಲ್ಲಿ ಆಸ್ಟ್ರೇಲಿಯಾ 50 ರನ್ ಪೂರೈಸಿದೆ.
ಉಮೇಶ್ ಬೌಲ್ ಮಾಡಿದ 15ನೇ ಓವರ್ನಲ್ಲಿ 4 ಬೌಂಡರಿ ಬಂದವು.
ಉಸ್ಮಾನ್ ಖವಾಜಾ ಔಟಾದ ನಂತರ, ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲಬುಶೇನ್ ಆಸ್ಟ್ರೇಲಿಯಾದ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇಬ್ಬರೂ ನಿಧಾನವಾಗಿ ರನ್ ಮಾಡುತ್ತಿದ್ದಾರೆ. ಆಸ್ಟ್ರೇಲಿಯದ ಸ್ಕೋರ್ 13 ಓವರ್ ಅಂತ್ಯಕ್ಕೆ 34 ಆಗಿದೆ.
ಸಿರಾಜ್ ಎಸೆತಕ್ಕೆ ಮಾರ್ನಸ್ ಲಬುಶೆನ್ ಅವರ ಹೆಬ್ಬರಳಿಗೆ ಇಂಜುರಿಯಾಗಿದೆ. ಸಿರಾಜ್ ಎಸೆದ ಚೆಂಡು ಸ್ವಲ್ಪ ಹೆಚ್ಚಿನ ಬೌನ್ಸ್ ಆಯಿತು. ಲಬುಶೆನ್ ಆ ಚೆಂಡನ್ನು ಡಿಫೆಂಡ್ ಮಾಡಲು ಪ್ರಯತ್ನಿಸಿದರು ಆದರೆ ಚೆಂಡು ಅವರ ಹೆಬ್ಬೆರಳಿಗೆ ತಗುಲಿತು. ಲಬುಶೇನ್ ತಕ್ಷಣ ಬ್ಯಾಟ್ ಕೈಬಿಟ್ಟರು ಬಿಟ್ಟರು.
ಆಸೀಸ್ 22/1
4ನೇ ಓವರ್ನಲ್ಲಿ ಆಸೀಸ್ ಮೊದಲ ವಿಕೆಟ್ ಪತನವಾಗಿದೆ
ಖಾತೆ ತೆರೆಯದೆ ಆರಂಭಿಕ ಖವಾಜಾ ವಿಕೆಟ್ ಒಪ್ಪಿಸಿದ್ದಾರೆ.
ಸಿರಾಜ್ ಎಸೆದ 4ನೇ ಓವರ್‌ನ 4ನೇ ಎಸೆತದಲ್ಲಿ ಖವಾಜಾ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
ಆಸೀಸ್ 2/1
3ನೇ ಓವರ್ನಲ್ಲಿ ಆಸೀಸ್ ಖಾತೆ ತೆರೆದಿದೆ.
ಶಮಿ ಎಸೆದ ಈ ಓವರ್ನಲ್ಲಿ ವಾರ್ನರ್ 2 ರನ್ ತೆಗೆದುಕೊಂಡು ಆಸೀಸ್ ಖಾತೆ ತೆರೆದರು.
ಆಸೀಸ್ ಬ್ಯಾಟಿಂಗ್ ಆರಂಭವಾಗಿದೆ. ಆರಂಭಿಕರಾಗಿ ವಾರ್ನರ್ ಹಾಗೂ ಖವಾಜಾ ಕಣಕ್ಕಿಳಿದಿದ್ದಾರೆ. ಭಾರತದ ಪರ ಶಮಿ ಮೊದಲ ಓವರ್ ಆರಂಭಿಸಿದ್ದಾರೆ.
ಡೇವಿಡ್ ವಾರ್ನರ್, ಉಸ್ಮಾನಾ ಖವಾಜಾ, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ನಾಥನ್ ಲಿಯಾನ್
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ತಂಡದಲ್ಲಿ ನಾಲ್ವರು ವೇಗಿಗಳು ಹಾಗೂ ಒಬ್ಬ ಸ್ಪಿನ್ನರ್ಗೆ ಅವಕಾಶ ನೀಡಲಾಗಿದೆ.
ಲಂಡನ್‌ನಲ್ಲಿ ಮೋಡ ಕವಿದ ವಾತಾವರಣವಿದೆ. ಮಳೆಯಾಗುವ ಸಾಧ್ಯತೆ ಇದೆ. ಕಾಮೆಂಟರಿ ಮಾಡಲು ಇಂಗ್ಲೆಂಡ್ಗೆ ಹೋಗಿರುವ ದಿನೇಶ್ ಕಾರ್ತಿಕ್ ತಮ್ಮ ಟ್ವಿಟರ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
— DK (@DineshKarthik) June 7, 2023
ಓವಲ್‌ನಲ್ಲಿ ಭಾರತದ ದಾಖಲೆ ಉತ್ತಮವಾಗಿಲ್ಲ. ಈ ಮೈದಾನದಲ್ಲಿ ಇದುವರೆಗೆ ಆಡಿದ 14 ಟೆಸ್ಟ್‌ಗಳಲ್ಲಿ ಭಾರತ ಗೆದ್ದಿರುವುದು 5ರಲ್ಲಿ ಮಾತ್ರ. ಒಳ್ಳೆಯ ವಿಷಯವೆಂದರೆ 2021 ರಲ್ಲಿ ಇಲ್ಲಿ ಆಡಿದ ಕೊನೆಯ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದಿದೆ. ಇದರಲ್ಲಿ ನಾಯಕ ರೋಹಿತ್ ಶರ್ಮಾ ಶತಕ ಬಾರಿಸಿದ್ದರು.
Published On - 2:09 pm, Wed, 7 June 23