
ಬಹು ಸರಣಿಗಳ ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ಮಹಿಳಾ ಎ ತಂಡವನ್ನು (Australia Women’s A Tour India) ಪ್ರಕಟಿಸಲಾಗಿದೆ. ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ಮಹಿಳಾ ಎ ತಂಡಗಳ ನಡುವೆ ಬರುವ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ಮೂರು ಮಾದರಿಗಳ ಸರಣಿ ನಡೆಯಲಿದೆ. ಆಸ್ಟ್ರೇಲಿಯಾ ಎ ಮಹಿಳಾ ತಂಡದ ಈ ಭಾರತ ಪ್ರವಾಸ ಮೂರು ವಾರಗಳ ನಡೆಯಲಿದ್ದು, ಈ ಪ್ರವಾಸದಲ್ಲಿ ಮೂರು ಟಿ20 ಪಂದ್ಯಗಳು, ಮೂರು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳು ಮತ್ತು ಒಂದು ನಾಲ್ಕು ದಿನಗಳ ಪಂದ್ಯ ನಡೆಯಲಿದೆ.
ಇನ್ನು ಈ ಭಾರತ ಪ್ರವಾಸಕ್ಕಾಗಿ 15 ಸದಸ್ಯರ ಆಸ್ಟ್ರೇಲಿಯಾ ಎ ಮಹಿಳಾ ತಂಡವನ್ನು ಪ್ರಕಟಿಸಿದ್ದು, ಅನುಭವಿ ವೇಗಿಗಳಾದ ಟೇಲಾ ವ್ಲೇಮಿಂಕ್ ಮತ್ತು ಡಾರ್ಸಿ ಬ್ರೌನ್ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಟೇಲಾ ವ್ಲೇಮಿಂಕ್ ಗಾಯದಿಂದ ಚೇತರಿಸಿಕೊಂಡು ಬಹಳ ದಿನಗಳ ಮಂತರ ಕ್ರಿಕೆಟ್ಗೆ ಮರಳುತ್ತಿದ್ದು, ಡಾರ್ಸಿ ಬ್ರೌನ್ ಕೂಡ ಬಹಳ ದಿನಗಳ ನಂತರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಈ ಸರಣಿಯಲ್ಲಿ ತಹ್ಲಿಯಾ ವಿಲ್ಸನ್ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಎ ತಂಡವನ್ನು ಮುನ್ನಡೆಸಲಿದ್ದು, ನಿಕೋಲ್ ಫಾಲ್ಟಮ್ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ರಾಚೆಲ್ ಟ್ರೆನಮನ್ ನಾಲ್ಕು ದಿನಗಳ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ಮೊದಲಿಗೆ ಮೂರು ಟಿ20 ಪಂದ್ಯಗಳು ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ನಂತರ ಮೂರು ಏಕದಿನ ಪಂದ್ಯಗಳು ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕೊನೆಯದಾಗಿ ನಾಲ್ಕು ದಿನಗಳ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
Introducing our Australia A Women’s squad to tour India next month 🇦🇺 🇮🇳 pic.twitter.com/mwu2nndydb
— Cricket Australia (@CricketAus) August 4, 2026
ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ಎ ಮಹಿಳಾ ತಂಡ: ಡಾರ್ಸಿ ಬ್ರೌನ್, ಮೈಟ್ಲಾನ್ ಬ್ರೌನ್, ನಿಕೋಲ್ ಫಾಲ್ಟಮ್, ಟೆಸ್ ಫ್ಲಿಂಟಾಫ್, ಸಿಯಾನಾ ಜಿಂಜರ್, ಚಾರ್ಲಿ ನಾಟ್, ಅನಿಕಾ ಲಿಯರಾಯ್ಡ್, ಕೇಟೀ ಮ್ಯಾಕ್, ಲಿಲ್ಲಿ ಮಿಲ್ಸ್, ಫ್ರಾಂಕಿ ನಿಕ್ಲಿನ್, ಹೇಲಿ ಸಿಲ್ವರ್-ಹೋಮ್ಸ್, ರಾಚೆಲ್ ಟ್ರೆನಮನ್, ಕೋರ್ಟ್ನಿ ವೆಬ್, ತಹ್ಲಿಯಾ ವಿಲ್ಸನ್ ಮತ್ತು ಟೇಲಾ ವ್ಲೇಮಿಂಕ್.
Published On - 3:10 pm, Wed, 5 August 26