IND W vs AUS W: ಭಾರತದ ವಿರುದ್ಧ 412 ರನ್ ಚಚ್ಚಿದ ಆಸ್ಟ್ರೇಲಿಯಾ; 28 ವರ್ಷಗಳ ದಾಖಲೆ ಧ್ವಂಸ

IND W vs AUS W: ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಅವಿಸ್ಮರಣೀಯ ಪ್ರದರ್ಶನ ನೀಡಿತು. ಬೆತ್ ಮೂನಿ ಅವರ 138 ಮತ್ತು ಜಾರ್ಜಿಯಾ ವಾಲ್ ಅವರ 81 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ 412 ರನ್ ಗಳಿಸಿ ತಮ್ಮದೇ 28 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿತು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಹಲವು ಶತಕದ ಜೊತೆಯಾಟಗಳು ಕಂಡುಬಂದವು.

IND W vs AUS W: ಭಾರತದ ವಿರುದ್ಧ 412 ರನ್ ಚಚ್ಚಿದ ಆಸ್ಟ್ರೇಲಿಯಾ; 28 ವರ್ಷಗಳ ದಾಖಲೆ ಧ್ವಂಸ
Australia Women

Updated on: Sep 20, 2025 | 6:20 PM

ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ (India Women vs Australia Women) ತಂಡಗಳ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತಾ ಪಡೆ ಮೊದಲು ಬ್ಯಾಟಿಂಗ್ ಮಾಡಿ ರನ್​​ಗಳ ಶಿಖರವನ್ನೇ ಗುರಿಯಾಗಿ ನೀಡಿದೆ. ದೆಹಲಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಬರೋಬ್ಬರಿ 412 ರನ್ ಬಾರಿಸಿದೆ. ಈ ಮೂಲಕ, ಆಸ್ಟ್ರೇಲಿಯಾ ಮಹಿಳಾ ತಂಡ ತನ್ನದೇ 28 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದೆ. ವಾಸ್ತವವಾಗಿ ಆಸ್ಟ್ರೇಲಿಯಾ ತಂಡಕ್ಕೆ ಪೂರ್ಣ 50 ಓವರ್‌ಗಳನ್ನು ಸಹ ಆಡಲಿಲ್ಲ, ಆದರೂ ಅದು ತನ್ನ ಅತ್ಯಧಿಕ ಸ್ಕೋರ್ ದಾಖಲೆಯನ್ನು ಸರಿಗಟ್ಟಿದೆ.

28 ವರ್ಷಗಳ ದಾಖಲೆ ಸರಿಗಟ್ಟಿದ ಆಸ್ಟ್ರೇಲಿಯಾ

ಮಹಿಳಾ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಹಿಂದಿನ ಅತ್ಯಧಿಕ ಸ್ಕೋರ್ 1997 ರಲ್ಲಿ ಡೆನ್ಮಾರ್ಕ್ ವಿರುದ್ಧ 412 ರನ್ ಆಗಿತ್ತು. ಇದೀಗ ಭಾರತ ಮಹಿಳಾ ತಂಡದ ವಿರುದ್ಧ 412 ರನ್ ಗಳಿಸುವ ಮೂಲಕ ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಇದ್ದ ಆ ದಾಖಲೆಯನ್ನು ಸರಿಗಟ್ಟಿದೆ.

ಆಸ್ಟ್ರೇಲಿಯಾದ ಸ್ಫೋಟಕ ಪ್ರದರ್ಶನ

ದೆಹಲಿ ಪಿಚ್‌ನಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿ 412 ರನ್‌ ಕಲೆಹಾಕಿದರು. ಇದರಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕಿ ಬೆತ್ ಮೂನಿ 138 ರನ್‌ಗಳ ಇನ್ನಿಂಗ್ಸ್ ಆಡಿದರು. ಮೂನಿ ಕೇವಲ 75 ಎಸೆತಗಳಲ್ಲಿ 23 ಬೌಂಡರಿಗಳು ಮತ್ತು ಒಂದು ಸಿಕ್ಸರ್‌ ಸಹಾಯದಿಂದ ಈ ಸ್ಕೋರ್ ಪೆರಿಸಿದರು.

ಬೆತ್ ಮೂನಿಗಿಂತ ಮೊದಲು, ಆರಂಭಿಕ ಆಟಗಾರ್ತಿ ಜಾರ್ಜಿಯಾ ವಾಲ್ ಕೂಡ ತಮ್ಮ ಏಕದಿನ ವೃತ್ತಿಜೀವನದ ಅತಿದೊಡ್ಡ ಇನ್ನಿಂಗ್ಸ್ ಆಡಿದರು. ಅವರು 68 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 81 ರನ್ ಗಳಿಸಿದರು, ಇದು ಅವರ ಮೊದಲ ಐವತ್ತು ಪ್ಲಸ್ ಸ್ಕೋರ್ ಆಗಿತ್ತು. ಎಲಿಸ್ ಪೆರ್ರಿ ಕೂಡ 68 ರನ್​ಗಳ ಕಾಣಿಕೆ ನೀಡಿದರು. ಆಸ್ಟ್ರೇಲಿಯಾ ಎರಡನೇ ಮತ್ತು ಮೂರನೇ ವಿಕೆಟ್‌ಗಳಿಗೆ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರೆ, ನಾಲ್ಕನೇ ವಿಕೆಟ್ 87 ರನ್‌ಗಳನ್ನು ಸೇರಿಸಿತು. ಈ ಮೂರು ಪಾಲುದಾರಿಕೆಗಳು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು 412 ರನ್ ಗಳಿಸಲು ಸಹಾಯ ಮಾಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ