
IPL 2026: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ಭರ್ಜರಿ ಜಯ ಸಾಧಿಸಿದೆ. ಆದರೆ, ತಂಡದ ಗೆಲುವಿನ ಸಂತೋಷದ ನಡುವೆಯೇ ನಾಯಕ ಅಕ್ಷರ್ ಪಟೇಲ್‌ಗೆ (Axar Patel) ಐಪಿಎಲ್ ಆಡಳಿತ ಮಂಡಳಿಯು ಭಾರಿ ಮೊತ್ತದ ದಂಡ ವಿಧಿಸಿ ಶಾಕ್ ನೀಡಿದೆ.
ಪಂದ್ಯದ ವೇಳೆ ನಿಗದಿತ ಸಮಯಕ್ಕೆ ಓವರ್‌ಗಳನ್ನು ಪೂರ್ಣಗೊಳಿಸದ ಕಾರಣ (Slow Over-rate) ಅಕ್ಷರ್ ಪಟೇಲ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಇದು ಈ ಸೀಸನ್‌ನಲ್ಲಿ ಡೆಲ್ಲಿ ತಂಡದ ಮೊದಲ ತಪ್ಪಾಗಿದೆ, ಆದ್ದರಿಂದ ಕೇವಲ ನಾಯಕನಿಗೆ ಮಾತ್ರ ದಂಡ ವಿಧಿಸಲಾಗಿದೆ.
ಇದನ್ನೂ ಓದಿ: ಪಾಕ್ ಆಟಗಾರನ ಕಳ್ಳಾಟ ಬಯಲು..!
ಇನ್ನು ನಾಯಕ ನಾಯಕನ ಖಾತೆಯಲ್ಲಿ ಡಿಮೆರಿಟ್ ಪಾಯಿಂಟ್‌ಗಳು ಒಂದು ನಿರ್ದಿಷ್ಟ ಮಿತಿಯನ್ನು (ಉದಾಹರಣೆಗೆ 3 ವರ್ಷಗಳಲ್ಲಿ 4 ಪಾಯಿಂಟ್ಸ್) ಮೀರಿದಾಗ ಮಾತ್ರ ಪಂದ್ಯದ ನಿಷೇಧ ಹೇರಬಹುದು. ಅಂದರೆ ಅತ್ಯಂತ ಗಂಭೀರ ಅಥವಾ ಅತಿ ಹೆಚ್ಚು ಬಾರಿ ತಪ್ಪು ಮಾಡಿದಾಗ ಮಾತ್ರ ನಾಯಕನನ್ನು ಒಂದು ಪಂದ್ಯದಿಂದ ನಿಷೇಧಿಸಲಾಗುತ್ತದೆ.