ಶಕೀಬ್ ಬಳಿಕ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ ಮತ್ತೊಬ್ಬ ಬಾಂಗ್ಲಾ ಅನುಭವಿ ಆಲ್‌ರೌಂಡರ್..!

|

Updated on: Oct 09, 2024 | 4:01 PM

Mahmudullah Riyad: ಭಾರತ ವಿರುದ್ಧದ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಮ್ಮದುಲ್ಲಾ, ಹೌದು, ಈ ಸರಣಿಯ ನಂತರ ನಾನು ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತಿಯಾಗುತ್ತಿದ್ದೇನೆ. ಈ ಮೊದಲೇ ನಿರ್ಧಾರವಾದಂತೆ ಈ ಸ್ವರೂಪವನ್ನು ತೊರೆಯಲು ಇದು ಸರಿಯಾದ ಸಮಯ. ಇನ್ನು ಮುಂದೆ ನಾನು ಏಕದಿನ ಪಂದ್ಯಗಳತ್ತ ಗಮನ ಹರಿಸುತ್ತೇನೆ ಎಂದಿದ್ದಾರೆ.

1 / 6
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ವಿರುದ್ಧದ ಎರಡನೇ ಟಿ20 ಪಂದ್ಯಕ್ಕೆ ಬಾಂಗ್ಲಾದೇಶ ತಂಡ ತಯಾರಿಯಲ್ಲಿ ನಿರತವಾಗಿದೆ. ಆದರೆ ಅದಕ್ಕೂ ಮೊದಲು ತಂಡಕ್ಕೆ ಆಘಾತ ಎದುರಾಗಿದ್ದು, ಅನುಭವಿ ಬ್ಯಾಟ್ಸ್‌ಮನ್ ಮಹಮ್ಮದುಲ್ಲಾ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ವಿರುದ್ಧ ನಡೆಯುತ್ತಿರುವ ಟಿ20 ಸರಣಿ ಮಹಮ್ಮದುಲ್ಲಾ ಅವರ ಕೊನೆಯ ಟಿ20 ಅಂತಾರಾಷ್ಟ್ರೀಯ ಸರಣಿಯಾಗಿದೆ.

2 / 6
ಭಾರತ ವಿರುದ್ಧದ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಮ್ಮದುಲ್ಲಾ, ಹೌದು, ಈ ಸರಣಿಯ ನಂತರ ನಾನು ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತಿಯಾಗುತ್ತಿದ್ದೇನೆ. ಈ ಮೊದಲೇ ನಿರ್ಧಾರವಾದಂತೆ ಈ ಸ್ವರೂಪವನ್ನು ತೊರೆಯಲು ಇದು ಸರಿಯಾದ ಸಮಯ. ಇನ್ನು ಮುಂದೆ ನಾನು ಏಕದಿನ ಪಂದ್ಯಗಳತ್ತ ಗಮನ ಹರಿಸುತ್ತೇನೆ ಎಂದಿದ್ದಾರೆ.

3 / 6
38 ವರ್ಷದ ಮಹಮ್ಮದುಲ್ಲಾ ಬಾಂಗ್ಲಾದೇಶದ ಅತ್ಯಂತ ಅನುಭವಿ ಆಟಗಾರರಾಗಿದ್ದು, 17 ವರ್ಷಗಳ ಸುದೀರ್ಘ ವೃತ್ತಿಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಕೆಲವೇ ದಿನಗಳ ಅಂತರದಲ್ಲಿ ಬಾಂಗ್ಲಾದೇಶ ತಂಡಕ್ಕೆ ಎದುರಾದ ಎರಡನೇ ಆಘಾತ ಇದಾಗಿದೆ. ಮಹಮ್ಮದುಲ್ಲಾ ಅವರಿಗೂ ಮುನ್ನ ತಂಡದ ಮತ್ತೊಬ್ಬ ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್  ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದರು.

4 / 6
2007 ರಲ್ಲಿ ಕೀನ್ಯಾ ವಿರುದ್ಧದ ಟಿ20 ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಮಹಮ್ಮದುಲ್ಲಾ ಅವರು ಅಂದಿನಿಂದ ಬಾಂಗ್ಲಾದೇಶ ತಂಡದ ಪ್ರಮುಖ ಭಾಗವಾಗಿದ್ದರು. ಇದು ಟಿ20 ಅಂತಾರಾಷ್ಟ್ರೀಯ ಇತಿಹಾಸದಲ್ಲಿ ಯಾವುದೇ ಆಟಗಾರನ ಮೂರನೇ ಸುದೀರ್ಘ ವೃತ್ತಿಜೀವನವಾಗಿದೆ.

5 / 6
ಶಕೀಬ್ ಮತ್ತು ಜಿಂಬಾಬ್ವೆಯ ಸೀನ್ ವಿಲಿಯಮ್ಸ್ ಮಹಮ್ಮದುಲ್ಲಾಗಿಂತ ಸುದೀರ್ಘ ವೃತ್ತಿಜೀವನವನ್ನು ಹೊಂದಿದ್ದಾರೆ. 139 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮಹಮ್ಮದುಲ್ಲಾ 117.74 ಸ್ಟ್ರೈಕ್ ರೇಟ್‌ನಲ್ಲಿ 2395 ರನ್ ಗಳಿಸಿದ್ದಾರೆ ಮತ್ತು 40 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

6 / 6
 2021 ರಲ್ಲಿ ಟೆಸ್ಟ್‌ನಿಂದ ನಿವೃತ್ತರಾಗಿದ್ದ ಮಹಮ್ಮದುಲ್ಲಾ ಅವರು ಬಾಂಗ್ಲಾದೇಶ ಪರ 50 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಎರಡು ಮಾದರಿಗಳಿಂದ ದೂರ ಸರಿದಿರುವ ಮಹಮ್ಮದುಲ್ಲಾ ಅವರು ಮುಂದಿನ ದಿನಗಳಲ್ಲಿ ಏಕದಿನ ಪಂದ್ಯಗಳಲ್ಲಿ ಆಡುವುದನ್ನು ಮುಂದುವರಿಸಬಹುದು. ಮಹಮ್ಮದುಲ್ಲಾ ಬಾಂಗ್ಲಾದೇಶ ಪರ ಇದುವರೆಗೆ 232 ಏಕದಿನ ಪಂದ್ಯಗಳನ್ನು ಆಡಿದ್ದಾರೆ.