
ಐಪಿಎಲ್ನ (IPL) ಜನಪ್ರಿಯತೆಯನ್ನು ಕಂಡು ಹಲವು ದೇಶಗಳಲ್ಲಿ ಟಿ20 ಲೀಗ್ಗಳನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಕೆಲವು ದೇಶಗಳು ಕೊಂಚ ಲಾಭ ಮಾಡಿಕೊಂಡರೂ ಇನ್ನು ಕೆಲವು ದೇಶಗಳ ಲೀಗ್ಗಳು ಲಾಭ ತಂದುಕೊಟ್ಟಿದ್ದಕ್ಕಿಂತ ಹೆಚ್ಚು ನಷ್ಟವನ್ನುಂಟು ಮಾಡಿದವು. ಅಂತಹ ಲೀಗ್ಗಳಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (Bangladesh Premier League) ಕೂಡ ಒಂದು. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಆರಂಭವಾದಗಿನಿಂದ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಲಾಭವಾಗಿದ್ದಕ್ಕಿಂತ ನಷ್ಟವಾಗಿದ್ದೇ ಹೆಚ್ಚು. ಇದರ ಜೊತೆಗೆ ಭ್ರಷ್ಟಚಾರ, ಮ್ಯಾಚ್ ಫಿಕ್ಸಿಂಗ್ ಭೂತ ಬಾಂಗ್ಲಾ ಪ್ರೀಮಿಯರ್ ಲೀಗ್ ಅನ್ನು ಕಾಡುತ್ತಿದೆ. ಇದರಿಂದ ರೋಸಿ ಹೋಗಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು ಈ ಟಿ20 ಲೀಗ್ ಅನ್ನು ಈ ವರ್ಷ ನಡೆಸದಿರಲು ನಿರ್ಧರಿಸಿದೆ.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಅನ್ನು ಈ ವರ್ಷ ನಡೆಸಲಾಗುವುದಿಲ್ಲ ಎಂದು ಘೋಷಿಸಿದೆ. ಅಲ್ಲದೆ ಈ ಬಗ್ಗೆ ಮಾಹಿತಿ ನೀಡಿರುವ ಮಂಡಳಿಯ ಅಧ್ಯಕ್ಷ ತಮೀಮ್ ಇಕ್ಬಾಲ್, ಈ ಲೀಗ್ ಅನ್ನು ಕೆಲವು ಬದಲಾವಣೆಗಳನ್ನು ಮಾಡಿ ಮತ್ತೆ ಆರಂಭಿಸಲಾಗುವುದು. ಅಲ್ಲದೆ ಆಂತರಿಕ ಸಮಸ್ಯೆಗಳು ಬಗೆಹರಿದ ನಂತರವೇ ಲೀಗ್ ಅನ್ನು ಪುನರಾರಂಭಿಸಲಾಗುವುದು. ಕಳೆದ ಎರಡು ವರ್ಷಗಳಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಿಂದಾಗಿ ಮಂಡಳಿಯು 3.3 ಮಿಲಿಯನ್ ನಷ್ಟವನ್ನು ಅನುಭವಿಸಿದೆ.
ಬಿಪಿಎಲ್ ಒಂದು ಉತ್ತಮ ಪಂದ್ಯಾವಳಿ ಮತ್ತು ಜನರು ಇದನ್ನು ತುಂಬಾ ಇಷ್ಟಪಟ್ಟಿದ್ದಾರೆ. ನಾವು ಅದನ್ನು ಸರಿಯಾಗಿ ಆಯೋಜಿಸಲು ಸಾಧ್ಯವಾದರೆ, ಅದರ ಬಗ್ಗೆ ಆಸಕ್ತಿ ಇನ್ನಷ್ಟು ಹೆಚ್ಚಾಗುತ್ತದೆ. ಫ್ರಾಂಚೈಸ್ ಕ್ರಿಕೆಟ್ ಮಂಡಳಿಗೆ ಲಾಭದಾಯಕವಾಗಿರಬೇಕು, ನಷ್ಟವಾಗಬಾರದು. ಆದ್ದರಿಂದ, ನಾವು ಸಮಸ್ಯೆಗಳನ್ನು ಪರಿಹರಿಸುವವರೆಗೆ ನಷ್ಟದಲ್ಲಿರುವ ಪಂದ್ಯಾವಳಿಯನ್ನು ಸ್ಥಗಿತಗೊಳಿಸುವುದು ತಪ್ಪಲ್ಲ ಎಂದು ತಮೀಮ್ ಇಕ್ಬಾಲ್ ಹೇಳಿದ್ದಾರೆ.
IND vs SL: ಐಪಿಎಲ್‌ನಲ್ಲಿ ಆಡಿಸುವ ಆಮಿಷ; ವಿಕೆಟ್ ಕೈಚೆಲ್ಲಿದ ಲಂಕಾ ಬ್ಯಾಟರ್
2012 ರಲ್ಲಿ ಪ್ರಾರಂಭವಾದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ 12 ಸೀಸನ್‌ಗಳನ್ನು ಆಡಲಾಗಿದೆ. ರಾಜಕೀಯ ಬಿಕ್ಕಟ್ಟಿನಿಂದಾಗಿ 2014 ರಲ್ಲಿ ಬಿಪಿಎಲ್ ನಡೆಯಲಿಲ್ಲ, ಹಾಗೆಯೇ 2020 ಮತ್ತು 2021 ಸೀಸನ್‌ಗಳನ್ನು ಕೊರೊನಾದಿಂದಾಗಿ ಮುಂದೂಡಲಾಯಿತು. ಈ ಲೀಗ್ನ ಅತ್ಯಂತ ಯಶಸ್ವಿ ಬಿಪಿಎಲ್ ತಂಡವೆಂದರೆ ಕೊಮಿಲ್ಲಾ ವಿಕ್ಟೋರಿಯನ್ಸ್ ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದಿದ್ದರೆ, ಢಾಕಾ ಗ್ಲಾಡಿಯೇಟರ್ಸ್, ರಾಜ್‌ಶಾಹಿ ವಾರಿಯರ್ಸ್ ಮತ್ತು ಫಾರ್ಚೂನ್ ಬರಿಶಾಲ್ ತಲಾ ಎರಡು ಬಾರಿ ಟ್ರೋಫಿಯನ್ನು ಗೆದ್ದಿವೆ.
Published On - 7:32 pm, Fri, 21 August 26