IND vs SL: ಐಪಿಎಲ್‌ನಲ್ಲಿ ಆಡಿಸುವ ಆಮಿಷ; ವಿಕೆಟ್ ಕೈಚೆಲ್ಲಿದ ಲಂಕಾ ಬ್ಯಾಟರ್
Jaiswal's Sledging Masterclass: ಗಾಲೆ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರ ಚಾಣಾಕ್ಷ ಸ್ಲೆಡ್ಜಿಂಗ್ ತಂತ್ರವು ಶ್ರೀಲಂಕಾದ ನಿರೋಷನ್ ಡಿಕ್ವೆಲ್ಲಾ ಅವರ ವಿಕೆಟ್‌ಗೆ ಕಾರಣವಾಯಿತು. 'ಐಪಿಎಲ್‌ನಲ್ಲಿ ಆಡಿಸಿ ಸಿಕ್ಸರ್ ಹೊಡೆಯುತ್ತೇನೆ' ಎಂದು ಡಿಕ್ವೆಲ್ಲಾ ಹೇಳಿದಾಗ, ಜೈಸ್ವಾಲ್ 'ಈಗ ಹೊಡೆದರೆ ಐಪಿಎಲ್‌ಗೆ ತೆಗೆದುಕೊಳ್ಳುತ್ತೇವೆ' ಎಂದು ಉತ್ತರಿಸಿದರು. ಈ ಮಾತಿನಿಂದ ಏಕಾಗ್ರತೆ ಕಳೆದುಕೊಂಡ ಡಿಕ್ವೆಲ್ಲಾ ಔಟಾದರು. ಕ್ರಿಕೆಟ್‌ನಲ್ಲಿ ಸ್ಲೆಡ್ಜಿಂಗ್ ಕೆಲವೊಮ್ಮೆ ತಂಡಕ್ಕೆ ಹೇಗೆ ವರವಾಗಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಕ್ರಿಕೆಟ್‌ನಲ್ಲಿ ಸ್ಲೆಡ್ಜಿಂಗ್ (Sledging) ಸರ್ವೆ ಸಾಮಾನ್ಯ. ಅದರಲ್ಲೂ ಆಸೀಸ್ ಕ್ರಿಕೆಟಿಗರು ಸ್ಲೆಡ್ಜಿಂಗ್ ಮಾಡುವುದರಲ್ಲಿ ನಿಸ್ಸೀಮರು. ಅವರನ್ನು ಹೊರತುಪಡಿಸಿದರೆ ಇತರೆ ಕ್ರಿಕೆಟ್ ತಂಡಗಳ ಆಟಗಾರರು ಕೂಡ ಅಪರೂಪಕ್ಕೊಮ್ಮೆ ಸ್ಲೆಡ್ಜಿಂಗ್ಗೆ ಕೈಹಾಕುತ್ತಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟ್ರೈಕ್ನಲ್ಲಿರುವ ಬ್ಯಾಟರ್ನ ಅಥವಾ ಕ್ರಿಸ್ನಲ್ಲಿ ಹೆಚ್ಚು ಹೊತ್ತು ನೆಲೆ ನಿಂತು ಎದುರಾಳಿ ತಂಡಕ್ಕೆ ಸವಾಲಾಗುವ ಬ್ಯಾಟರ್ನ ವಿಕೆಟ್ ಪಡೆಯಲು ಎದುರಾಳಿ ತಂಡದ ಆಟಗಾರರು ಈ ರೀತಿಯ ಸ್ಲೆಡ್ಜಿಂಗ್ಗೆ ಮುಂದಾಗುತ್ತಾರೆ. ಇದು ಕೆಲವೊಮ್ಮೆ ಎದುರಾಳಿ ತಂಡಕ್ಕೆ ನೆರವಾದರೆ, ಇನ್ನು ಕೆಲವೊಮ್ಮೆ ಅದೇ ಎದುರಾಳಿ ತಂಡಕ್ಕೆ ಶಾಪವಾಗುತ್ತದೆ. ಇದೀಗ ಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅದೇ ನಡೆದಿದ್ದು, ಈ ಸ್ಲೆಡ್ಜಿಂಗ್ ಟೀಂ ಇಂಡಿಯಾಕ್ಕೆ ವರವಾಗಿದೆ.
ಗಾಲೆ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 80 ರನ್ಗಳ ಇನ್ನಿಂಗ್ಸ್ ಆಡಿದ್ದ ಲಂಕಾ ತಂಡದ ಅನುಭವಿ ಬ್ಯಾಟರ್ ನಿರೋಷನ್ ಡಿಕ್ವೆಲ್ಲಾ, ಎರಡನೇ ಇನ್ನಿಂಗ್ಸ್ನಲ್ಲೂ ಅದೇ ರೀತಿಯ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದರು. ಆದರೆ ಇದೇ ಸಮಯದಲ್ಲಿ ಜೈಸ್ವಾಲ್ ಹೂಡಿದ ಸ್ಲೆಡ್ಜಿಂಗ್ ಎಂಬ ಬಾಣ ಡಿಕ್ವೆಲ್ಲಾ ಎಂಬ ವಿಕೆಟ್ ಅನ್ನು ಭಾರತಕ್ಕೆ ತಂದುಕೊಟ್ಟಿತು.
ಫಲಿಸಿತು ಜೈಸ್ವಾಲ್ ತಂತ್ರ
ಸಾಮಾನ್ಯವಾಗಿ ಫೀಲ್ಡರ್‌ಗಳು ಮತ್ತು ವಿಕೆಟ್‌ಕೀಪರ್‌ಗಳು ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ಗೆ ಏನನ್ನಾದರೂ ಹೇಳುವ ಮೂಲಕ ಅವರನ್ನು ಕೆರಳಿಸುತ್ತಾರೆ. ಇದರಿಂದಾಗಿ ಬ್ಯಾಟರ್ ತನ್ನ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಾರೆ. ಇದು ಅವರ ಲಯದ ಮೇಲೆ ಪರಿಣಾಮ ಬೀರುತ್ತದೆ. ಗಾಲೆ ಟೆಸ್ಟ್ನಲ್ಲಿಯೂ ಅದೇ ಕೆಲಸ ಮಾಡಿದ ಯಶಸ್ವಿ ಜೈಸ್ವಾಲ್, ಶ್ರೀಲಂಕಾದ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು.
PEAK TEST CRICKET. 😂
Yashasvi Jaiswal and Niroshan Dickwella serving up some good old-fashioned Test match banter. 👀
Watch #SLvIND 2nd Test, starting 23rd August 9 AM onwards, LIVE on Sony Sports Network TV channels & Sony LIV.#SonySportsNetwork #SonyLIV… pic.twitter.com/KP8M2WUgFg
— Sony Sports Network (@SonySportsNetwk) August 19, 2026
ಸಿಕ್ಸರ್ ಹೊಡೆಯಲು ಯತ್ನಿಸಿ ಔಟ್
60ನೇ ಓವರ್‌ನ ಕೊನೆಯ ಎಸೆತದಲ್ಲಿ ಟೀಂ ಇಂಡಿಯಾ ನಿರೋಷನ್ ಡಿಕ್ವೆಲ್ಲಾ ಅವರ ವಿಕೆಟ್ ಪಡೆಯಿತು. ಆದರೆ ಈ ವಿಕೆಟ್ ಪಡೆಯುವಲ್ಲಿ ಜೈಸ್ವಾಲ್ ಪಾತ್ರ ಅಪಾರವಾಗಿತ್ತು. 60ನೇ ಓವರ್ ನಡುವೆ ಡಿಕ್ವೆಲ್ಲಾರನ್ನು ಕೆಣಕ್ಕಿದ ಜೈಸ್ವಾಲ್, ಡಿಕ್ವೆಲ್ಲಾಗೆ, ‘ನೀವು ಬೌಂಡರಿ ಹೊಡೆಯಲು ಸಾಧ್ಯವಿಲ್ಲ. ನಿಮಗೆ ಧೈರ್ಯವಿದ್ದರೆ, ವಿಕೆಟ್ ಕೀಪರ್ ತಲೆಯ ಮೇಲೆ ಸಿಕ್ಸರ್ ಹೊಡೆಯಿರಿ’ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಡಿಕ್ವೆಲ್ಲಾ, ‘ನೀವು ನನ್ನನ್ನ ಐಪಿಎಲ್‌ನಲ್ಲಿ ಆಡಿಸಿ ಆಗ ಸಿಕ್ಸರ್ ಹೊಡೆದು ತೊರಿಸುತ್ತೇನೆ ಎನ್ನುತ್ತಾರೆ. ಇದಕ್ಕೆ ಜೈಸ್ವಾಲ್, ನೀವು ಈಗ ಹೊಡೆದರೆ ಖಂಡಿಯವಾಗಿಯೂ ಐಪಿಎಲ್‌ಗೆ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಈ ಸಂಭಾಷಣೆ ಮುಗಿದ ನಂತರದ ಎಸೆತದಲ್ಲೇ ಡಿಕ್ವೆಲ್ಲಾ ತನ್ನ ಏಕಾಗ್ರತೆಯನ್ನು ಕಳೆದುಕೊಂಡು ಪ್ರಸಿದ್ಧ್ ಕೃಷ್ಣ ಬೌಲ್ ಮಾಡಿದ ಶಾರ್ಟ್ ಬಾಲ್‌ನಲ್ಲಿ ವಿಕೆಟ್ ಕೀಪರ್ ಪಂತ್‌ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸುತ್ತಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:44 pm, Wed, 19 August 26




