AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: 10 ವಿಕೆಟ್ ಪಡೆದ ಮಾನವ್ ಬದಲಿಗೆ ಪಡಿಕ್ಕಲ್​ಗೆ ಪಂದ್ಯ ಶ್ರೇಷ್ಠ ನೀಡಲು ಕಾರಣವೇನು?

Devdutt Padikkal Player of the Match: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಮಾನವ್ ಸುತಾರ್ 10 ವಿಕೆಟ್ ಪಡೆದರೂ, ಕನ್ನಡಿಗ ದೇವದತ್ ಪಡಿಕ್ಕಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಬೌಲಿಂಗ್ ಸ್ನೇಹಿ ಗಾಲೆಯ ಕಷ್ಟಕರ ಪಿಚ್‌ನಲ್ಲಿ ಪಡಿಕ್ಕಲ್ ಗಳಿಸಿದ 167 ರನ್‌ಗಳ ಅಮೋಘ ಶತಕ ಹಾಗೂ ಇತರ ಆಟಗಾರರೊಂದಿಗೆ ಕಟ್ಟಿದ ಜೊತೆಯಾಟವೇ ಈ ಪ್ರಶಸ್ತಿ ಪಡೆಯಲು ಮುಖ್ಯ ಕಾರಣವಾಗಿದೆ.

IND vs SL: 10 ವಿಕೆಟ್ ಪಡೆದ ಮಾನವ್ ಬದಲಿಗೆ ಪಡಿಕ್ಕಲ್​ಗೆ ಪಂದ್ಯ ಶ್ರೇಷ್ಠ ನೀಡಲು ಕಾರಣವೇನು?
Padikkal, Manav
ಪೃಥ್ವಿಶಂಕರ
|

Updated on:Aug 19, 2026 | 5:03 PM

Share

ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ (India vs Sri Lanka) ಗೆಲುವಿನೊಂದಿಗೆ ಆರಂಭಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡವನ್ನು 165 ರನ್​​ಗಳಿಂದ ಮಣಿಸಿದ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಲಂಕಾ ತಂಡವನ್ನು ಅವರ ನೆಲದಲ್ಲಿ ಹೀನಾಯವಾಗಿ ಮಣಿಸುವಲ್ಲಿ ಟೀಂ ಇಂಡಿಯಾದ ಬೌಲರ್​ಗಳ ಪಾತ್ರ ಅಪಾರವಾಗಿತ್ತು. ಅದರಲ್ಲೂ ಯುವ ಸ್ಪಿನ್ನರ್‌ ಮಾನವ್ ಸುತಾರ್ (Manav Suthar) ಒಬ್ಬರೇ ಎರಡು ಇನ್ನಿಂಗ್ಸ್​ಗಳಲ್ಲಿ ಒಟ್ಟು 10 ವಿಕೆಟ್‌ಗಳನ್ನು ಪಡೆದು ತಂಡದ ಗೆಲುವಿನ ರೂವಾರಿ ಎನಿಸಿದರು. ಆದಾಗ್ಯೂ ಮಾನವ್​ಗೆ ಈ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಲಿಲ್ಲ. ಅವರ ಬದಲಿಗೆ ಕನ್ನಡಿಗ ದೇವದತ್ ಪಡಿಕ್ಕಲ್‌ಗೆ ( Devdutt Padikkal) ಈ ಪ್ರಶಸ್ತಿ ನೀಡಲಾಯಿತು. ಅಷ್ಟಕ್ಕೂ ಪಡಿಕ್ಕಲ್‌ಗೆ ಈ ಪ್ರಶಸ್ತಿ ನೀಡಲು ಕಾರಣವೇನು? ಅದಕ್ಕೆ ಉತ್ತರ ಇಲ್ಲಿದೆ.

ಇಬ್ಬರ ಪ್ರದರ್ಶನ ಹೇಗಿತ್ತು?

ಮೊದಲಿಗೆ ಇವರಿಬ್ಬರ ಪ್ರದರ್ಶನವನ್ನು ನೋಡುವುದಾದರೆ.. ಮಾನವ್ ಸುತಾರ್ ಎರಡು ಇನ್ನಿಂಗ್ಸ್​ನಲ್ಲಿ 45.2 ಓವರ್‌ಗಳನ್ನು ಬೌಲ್ ಮಾಡಿ 131 ರನ್​ಗಳಿಗೆ 10 ವಿಕೆಟ್ ಕಬಳಿಸಿದರು. ಇದರಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ ಆರು ವಿಕೆಟ್‌ಗಳು ಸೇರಿವೆ. ಇತ್ತ ದೇವದತ್ ಪಡಿಕ್ಕಲ್ ಮೊದಲ ಇನ್ನಿಂಗ್ಸ್​ನಲ್ಲಿ 167 ರನ್ ಬಾರಿಸಿದರೆ, ಎರಡನೇ ಇನ್ನಿಂಗ್ಸ್​ನಲ್ಲಿ 44 ರನ್​ಗಳ ಕಾಣಿಕೆ ನೀಡಿದರು. ಪ್ರದರ್ಶನದ ಮಟ್ಟಿಗೆ ಹೇಳುವುದಾದರೆ.. ಇಬ್ಬರದ್ದು ಸಮಬಲದ ಹೋರಾಟ ಎನ್ನಬಹುದು. ಆದರೆ ಬೌಲಿಂಗ್ ಸ್ನೇಹಿ ಪಿಚ್​ನಲ್ಲಿ ದೇವದತ್ ಪಡಿಕ್ಕಲ್ ನೀಡಿದ ಪ್ರದರ್ಶನ ಅವರಿಗೆ ಪಂದ್ಯ ಶ್ರೇಷ್ಠ ನೀಡಲು ಕಾರಣವಾಯಿತು.

IND vs AUS: ಆಸ್ಟ್ರೇಲಿಯಾ ವಿರುದ್ಧ 150 ರನ್ ಚಚ್ಚಿದ ಕನ್ನಡಿಗ ದೇವದತ್ ಪಡಿಕ್ಕಲ್‌

ಪಡಿಕ್ಕಲ್​ಗೆ ಪಂದ್ಯ ಶ್ರೇಷ್ಠ ನೀಡಲು ಕಾರಣವೇನು?

ದೇವದತ್ ಪಡಿಕ್ಕಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಲು ಪ್ರಮುಖ ಕಾರಣವೆಂದರೆ ಗಾಲೆಯ ಕಷ್ಟಕರವಾದ ಪಿಚ್. ಮೇಲೆ ಹೇಳಿದಂತೆ ಗಾಲೆಯ ಪಿಚ್ ಬ್ಯಾಟಿಂಗ್ ಮಾಡಲು ಸುಲಭವಾಗಿರಲಿಲ್ಲ. ಸ್ಪಿನ್ನರ್‌ಗಳಿಗೆ ಉತ್ತಮ ಟರ್ನ್ ಸಿಗುತ್ತಿತ್ತು. ಆದರೆ ಇದರ ಹೊರತಾಗಿಯೂ, ಪಡಿಕ್ಕಲ್ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಬಾರಿಸಿ 167 ರನ್​ಗಳ ಇನ್ನಿಂಗ್ಸ್ ಆಡಿದರು. ಎರಡನೇ ಇನ್ನಿಂಗ್ಸ್‌ನಲ್ಲೂ 44 ರನ್ ಕಲೆಹಾಕಿದರು. ಇದರ ಜೊತೆಗೆ ಮೊದಲ ಇನ್ನಿಂಗ್ಸ್‌ನಲ್ಲಿ ಪಡಿಕ್ಕಲ್, ಕೆಎಲ್ ರಾಹುಲ್ ಅವರೊಂದಿಗೆ 162 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರೆ, ಪಂತ್ ಅವರೊಂದಿಗೆ 71 ರನ್‌ಗಳ ಜೊತೆಯಾಟ ಕಟ್ಟಿದರು. ಪರಿಣಾಮವಾಗಿ, ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಒಟ್ಟು 462 ರನ್‌ ಕಲೆಹಾಕಿತು. ಅಂತಿಮವಾಗಿ ಶ್ರೀಲಂಕಾದ ಸೋಲಿಗೆ ಕಾರಣವಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Wed, 19 August 26

Follow Us
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ಕೋಲಾರದಲ್ಲಿ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ: ದರ ಏರಿಕೆಗೆ ಆಗ್ರಹ
ಕೋಲಾರದಲ್ಲಿ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ: ದರ ಏರಿಕೆಗೆ ಆಗ್ರಹ
Video: ರಸ್ತೆ ದಾಟಲು ಪರದಾಡಿದ ಕಾಡಾನೆಗಳ ಹಿಂಡು!
Video: ರಸ್ತೆ ದಾಟಲು ಪರದಾಡಿದ ಕಾಡಾನೆಗಳ ಹಿಂಡು!