AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಏಕದಿನ ಪಂದ್ಯದಿಂದ ಶುಭ್​ಮನ್ ಗಿಲ್ ಔಟ್? ಕೋಚ್ ಹೇಳಿದ್ದಿದು

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಮುನ್ನ ನಾಯಕ ಶುಭ್​ಮನ್ ಗಿಲ್ ಗಾಯಗೊಂಡಿದ್ದು ಆತಂಕ ಸೃಷ್ಟಿಸಿತ್ತು. ಅಭ್ಯಾಸದ ವೇಳೆ ಸಿರಾಜ್ ಎಸೆತಕ್ಕೆ ಗಾಯಗೊಂಡಿದ್ದ ಗಿಲ್ ಮೊದಲ ಪಂದ್ಯಕ್ಕೆ ಲಭ್ಯತೆ ಅನುಮಾನವಿತ್ತು. ಆದರೆ, ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್, ಗಿಲ್ ಸಂಪೂರ್ಣವಾಗಿ ಫಿಟ್ ಆಗಿದ್ದು, ಸೆಪ್ಟೆಂಬರ್ 27ರಂದು ತಿರುವನಂತಪುರಂನಲ್ಲಿ ಆರಂಭವಾಗುವ ಮೊದಲ ODI ಪಂದ್ಯದಲ್ಲಿ ಆಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಭಾರತ ತಂಡಕ್ಕೆ ನೆಮ್ಮದಿ ತಂದಿದೆ.

ಪೃಥ್ವಿಶಂಕರ
|

Updated on: Sep 26, 2026 | 10:52 PM

Share
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಸೆಪ್ಟೆಂಬರ್ 27 ರಂದು ಆರಂಭವಾಗಲಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಭಾನುವಾರ ತಿರುವನಂತಪುರದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಆತಿಥೇಯ ಟೀಂ ಇಂಡಿಯಾಕ್ಕೆ ನಾಯಕ ಶುಭ್​ಮನ್ ಗಿಲ್ ಗಾಯದ ರೂಪದಲ್ಲಿ ಆಘಾತ ಎದುರಾಗಿತ್ತು(PC-PTI).

1 / 5
ಶುಕ್ರವಾರ ನಡೆದ ತಂಡದ ಅಭ್ಯಾಸದ ಸಮಯದಲ್ಲಿ ಶುಭ್​ಮನ್ ಗಿಲ್ ಗಾಯಗೊಂಡಿದ್ದರು. ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ಚೆಂಡು ಗಿಲ್ ಅವರ ಬಲ ಮೊಣಕೈಗೆ ತಗುಲಿತು. ಇದರಿಂದ ತೀವ್ರ ನೋವಿನಿಂದ ಬಳಲಾರಂಭಿಸಿದ ಗಿಲ್, ತಮ್ಮ ಅಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು. ಹೀಗಾಗಿ ಗಿಲ್ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗುತಿತ್ತು(PC-PTI).

2 / 5
ಶುಬ್‌ಮನ್ ಗಿಲ್ ತಮ್ಮ ಸತತ ಎರಡನೇ ಸರಣಿಗೆ ಮೊದಲು ಗಾಯಕ್ಕೆ ತುತ್ತಾಗಿದ್ದಾರೆ. ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಸ್ವಲ್ಪ ಮೊದಲು ಅವರು ನೆಟ್ಸ್‌ನಲ್ಲಿ ತಮ್ಮ ಉಂಗುರದ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಆದಾಗ್ಯೂ, ಅವರು ಸಮಯಕ್ಕೆ ಸರಿಯಾಗಿ ಚೇತರಿಸಿಕೊಂಡು ಎರಡೂ ಟೆಸ್ಟ್ ಪಂದ್ಯಗಳನ್ನು ಆಡಿದ್ದರು(PC-PTI).

3 / 5
ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮುನ್ನ ಗಾಯಕ್ಕೆ ತುತ್ತಾಗಿರುವ ಶುಭ್​ಮನ್ ಗಿಲ್ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ ತಂಡದ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್, ‘ಗಿಲ್ ಚೆನ್ನಾಗಿದ್ದಾರೆ, ಅವರು ಭಾನುವಾರ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಆಡಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ. ಇದರರ್ಥ ಮೊದಲ ಏಕದಿನ ಪಂದ್ಯದಲ್ಲಿ ಗಿಲ್ ಆಡುವುದು ಖಚಿತವಾಗಿದೆ(PC-PTI).

4 / 5
ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್, ಔಕಿಬ್ ನಬಿ, ಯಶಸ್ವಿ ಜೈಸ್ವಾಲ್ ಮತ್ತು ನಮನ್ ಧೀರ್(PC-PTI).

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us