ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನ (BBL 2024) ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು (ಜ.24) ಸಿಡ್ನಿಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ಹಾಗೂ ಸಿಡ್ನಿ ಸಿಕ್ಸರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಬಾರಿಯ ಟೂರ್ನಿಯ ಲೀಗ್ ಹಂತದಲ್ಲಿ 10 ಪಂದ್ಯಗಳನ್ನಾಡಿದ್ದ ಬ್ರಿಸ್ಬೇನ್ ಹೀಟ್ ತಂಡವು 7 ಪಂದ್ಯಗಳಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತ್ತು. ಇನ್ನು ಸಿಡ್ನಿ ಸಿಕ್ಸರ್ಸ್ 10 ರಲ್ಲಿ 6 ಗೆಲುವು ದಾಖಲಿಸಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು.
ಅದರಂತೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡವನ್ನು 39 ರನ್ಗಳಿಂದ ಮಣಿಸಿ ಸಿಡ್ನಿ ಸಿಕ್ಸರ್ಸ್ ತಂಡವು ನೇರವಾಗಿ ಫೈನಲ್ಗೆ ಪ್ರವೇಶಿಸಿತ್ತು. ಅತ್ತ 3ನೇ ಮತ್ತು 4ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಪರ್ಸ್ ಸ್ಕಾಚರ್ಸ್ ತಂಡಗಳ ನಡುವೆ ನಾಕೌಟ್ ಪಂದ್ಯ ನಡೆದಿದ್ದು, ಇದರಲ್ಲಿ ಗೆದ್ದ ಅಡಿಲೇಡ್ ಸ್ಟ್ರೈಕರ್ಸ್ ತಂಡವು ಚಾಲೆಂಜರ್ ಸುತ್ತಿಗೆ ಎಂಟ್ರಿ ಕೊಟ್ಟಿತು.
ಇನ್ನು ಚಾಲೆಂಜರ್ ಪಂದ್ಯದಲ್ಲಿ ನಾಕೌಟ್ ಸುತ್ತಿನಲ್ಲಿ ಗೆದ್ದ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಕ್ವಾಲಿಫೈಯರ್ ಸುತ್ತಿನಲ್ಲಿ ಸೋತ ಬ್ರಿಸ್ಬೇನ್ ಹೀಟ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡವನ್ನು 54 ರನ್ಗಳಿಂದ ಮಣಿಸಿದ ಬ್ರಿಸ್ಬೇನ್ ಹೀಟ್ ಫೈನಲ್ಗೆ ಪ್ರವೇಶಿಸಿತು. ಇದೀಗ ಫೈನಲ್ ಪಂದ್ಯದಲ್ಲಿ ಮತ್ತೆ ಬ್ರೀಸ್ಬೇನ್ ಹೀಟ್ ಹಾಗೂ ಸಿಡ್ನಿ ಸಿಕ್ಸರ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ.
ಬಿಗ್ ಬ್ಯಾಷ್ ಲೀಗ್ನಲ್ಲಿ ಬ್ರೀಸ್ಬೇನ್ ಹೀಟ್ ಹಾಗೂ ಸಿಡ್ನಿ ಸಿಕ್ಸರ್ಸ್ ತಂಡಗಳು ಇದುವರೆಗೆ 19 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಸಿಡ್ನಿ ಸಿಕ್ಸರ್ಸ್ ತಂಡವು 13 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಮತ್ತೊಂದೆಡೆ ಬ್ರಿಸ್ಬೇನ್ ಹೀಟ್ ತಂಡ ಸಿಡ್ನಿ ವಿರುದ್ಧ ಗೆದ್ದಿರುವುದು ಕೇವಲ 5 ಪಂದ್ಯಗಳಲ್ಲಿ ಮಾತ್ರ. ಇನ್ನು ಒಂದು ಪಂದ್ಯ ಕಾರಣಾಂತರದಿಂದ ರದ್ದಾಗಿತ್ತು.
ಇದಾಗ್ಯೂ ಈ ಬಾರಿ ಲೀಗ್ ಹಂತದಲ್ಲಿ ಆಡಿದ 2 ಪಂದ್ಯಗಳಲ್ಲಿ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಸೋಲುಣಿಸುವಲ್ಲಿ ಬ್ರಿಸ್ಬೇನ್ ಹೀಟ್ ತಂಡ ಯಶಸ್ವಿಯಾಗಿದೆ. ಆದರೆ ಕ್ವಾಲಿಫೈಯರ್ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ಗೆ ಸೋಲುಣಿಸಿ ಸಿಡ್ನಿ ಸಿಕ್ಸರ್ಸ್ ಫೈನಲ್ಗೆ ಪ್ರವೇಶಿಸಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂದು ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.
ಬ್ರಿಸ್ಬೇನ್ ಹೀಟ್ ತಂಡ: ಜೋಶ್ ಬ್ರೌನ್ , ಜಿಮ್ಮಿ ಪೀರ್ಸನ್ , ನಾಥನ್ ಮೆಕ್‌ಸ್ವೀನಿ (ನಾಯಕ) , ಮ್ಯಾಟ್ ರೆನ್‌ಶಾ , ಮ್ಯಾಕ್ಸ್ ಬ್ರ್ಯಾಂಟ್ , ಪಾಲ್ ವಾಲ್ಟರ್ , ಮೈಕೆಲ್ ನೆಸರ್ , ಕ್ಸೇವಿಯರ್ ಬಾರ್ಟ್‌ಲೆಟ್ , ಸ್ಪೆನ್ಸರ್ ಜಾನ್ಸನ್ , ಮಿಚೆಲ್ ಸ್ವೆಪ್ಸನ್ , ಮ್ಯಾಥ್ಯೂ ಕುಹ್ನೆಮನ್ , ಜೋರ್ಡಾನ್ ಜಾಕ್ ವಿಕಿಮ್ಡರ್ , ಚಾರ್ಲಿ ವಾಕಿಂ, ಜಾಕ್ ವಿಲ್ಡರ್ಮತ್.
ಇದನ್ನೂ ಓದಿ: Virat Kohli: ಮೈದಾನಕ್ಕಿಳಿಯದೇ ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ
ಸಿಡ್ನಿ ಸಿಕ್ಸರ್ಸ್ ತಂಡ: ಡೇನಿಯಲ್ ಹ್ಯೂಸ್ , ಜ್ಯಾಕ್ ಎಡ್ವರ್ಡ್ಸ್ , ಜೋಶ್ ಫಿಲಿಪ್ , ಮೊಯ್ಸೆಸ್ ಹೆನ್ರಿಕ್ಸ್ (ನಾಯಕ) , ಜೋರ್ಡಾನ್ ಸಿಲ್ಕ್ , ಜೋಯಲ್ ಡೇವಿಸ್ , ಹೇಡನ್ ಕೆರ್ , ಸೀನ್ ಅಬ್ಬೋಟ್ , ಬೆನ್ ದ್ವಾರ್ಶುಯಿಸ್ , ಟಾಡ್ ಮರ್ಫಿ , ಸ್ಟೀವ್ ಓಕೀಫ್ , ಜಾಕ್ಸನ್ ಬರ್ಡ್ , ಇಝ್ರಾವುಲ್ ಹಕ್ ನವೀದ್, ಕರ್ಟಿಸ್ ಪ್ಯಾಟರ್ಸನ್, ಮಿಚೆಲ್ ಪೆರ್ರಿ.