ಐಸಿಸಿ ಟಿ-20 ವಿಶ್ವಕಪ್ 2021 (ICC T20 World Cup 2021) ಮಹಾ ಸಮರಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಸದ್ಯ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಮುಗಿದ ಬೆನ್ನಲ್ಲೇ ಯುಎಇ ಹಾಗೂ ಒಮನ್‌ನಲ್ಲಿ ಅಕ್ಟೋಬರ್ 17ರಿಂದ ಚುಟುಕು ಸಮಯ ಶುರುವಾಗಲಿದ್ದು, ನವೆಂಬರ್ 14 ರಂದು ದುಬೈನಲ್ಲಿ ಫೈನಲ್ ಹಣಾಹಣಿಯ ಮೂಲಕ ಅಂತ್ಯವಾಗಲಿದೆ. ಅಕ್ಟೋಬರ್ 24 ರಂದು ಪಾಕಿಸ್ತಾನ (India vs Pakistan) ವಿರುದ್ಧ ಕಾದಾಟ ನಡೆಸುವ ಮೂಲಕ ಭಾರತ ತಂಡ ಚುಟುಕು ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಈ ಬಾರಿಯ ಟೀಮ್ ಇಂಡಿಯಾ ಟಿ-20 ವಿಶ್ವಕಪ್ಗೆ ನೂತನ ಜೆರ್ಸಿಯೊಂದಿಗೆ (Team India New Jersey) ಕಣಕ್ಕಿಳಿಯಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಸದ್ಯ ಇದು ಖಚಿತವಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟಿ-20 ವಿಶ್ವಕಪ್ಗೆ ಭಾರತೀಯ ಆಟಗಾರರು ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದೆ. ಆದರೆ, ಹೊಸ ಜೆರ್ಸಿಯ ಫೋಟೋವನ್ನು ಇನ್ನೂ ಬಹಿರಂಗ ಪಡಿಸಿಲ್ಲ. ನೂತನ ಜೆರ್ಸಿಯನ್ನು ಇದೇ ಅಕ್ಟೋಬರ್ 13 ರಂದು ರಿವೀಲ್ ಮಾಡುವುದಾಗಿ ಬಿಸಿಸಿಐ ಟ್ವೀಟ್ ಮಾಡಿದೆ. ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ವಿರಾಟ್ ಕೊಹ್ಲಿ ಪಡೆ ಯಾವರೀತಿಯ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲದಲ್ಲಿದ್ದಾರೆ.
The moment we’ve all been waiting for!
Join us for the big reveal on 13th October only on @mpl_sport. ??
Are you excited? ? pic.twitter.com/j4jqXHvnQU
— BCCI (@BCCI) October 8, 2021
ಚುಟುಕು ವಿಶ್ವಕಪ್ ಟೂರ್ನಿಯು ಎರಡು ಹಂತದಲ್ಲಿ ನಡೆಯಲಿದ್ದು, ಮೊದಲನೇ ಸುತ್ತಿನಲ್ಲಿ ಅರ್ಹತಾ ಪಂದ್ಯಗಳು ನಡೆದರೆ, ಎರಡನೇ ಸುತ್ತಿನಲ್ಲಿ ಸೂಪರ್ 12ರ ಹಂತದ ಪಂದ್ಯಗಳು ಜರುಗಲಿವೆ. ಅಂದಹಾಗೆ ಮೊದಲನೇ ಸುತ್ತಿನ ಗ್ರೂಪ್ ‘ಬಿ’ ಪಂದ್ಯದಲ್ಲಿ ಆತಿಥೇಯ ಒಮನ್ ಹಾಗೂ ಪಪುವಾ ನ್ಯೂಗಿನಿ ತಂಡಗಳು ಅ.17 ರಂದು ಸೆಣಸಲಿವೆ.
ಗ್ರೂಪ್ ‘ಬಿ’ ನಲ್ಲಿ ಸ್ಥಾನ ಪಡೆದಿರುವ ಐರ್ಲೆಂಡ್, ಶ್ರೀಲಂಕಾ, ನೇದರ್ಲೆಂಡ್ ಹಾಗೂ ನಮೀಬಿಯಾ ತಂಡಗಳು ಅ.18 ರಿಂದ 22ರವರೆಗೆ ಮೊದಲನೇ ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ಕಾದಾಟ ನಡೆಸಲಿವೆ. ಈ ಎರಡೂ ಗುಂಪುಗಳಲ್ಲಿನ ಅಗ್ರ ಎರಡು ತಂಡಗಳು ಮಾತ್ರ ಅಕ್ಟೋಬರ್ 23 ರಿಂದ ಆರಂಭವಾಗುವ ಸೂಪರ್ 12ರ ಹಂತಕ್ಕೆ ಅರ್ಹತೆ ಪಡೆದುಕೊಳ್ಳಲಿವೆ.
ಅಕ್ಟೋಬರ್ 23 ರಂದು ಅಬುಧಾಬಿಯಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಟೂರ್ನಿಯ ಎರಡನೇ ಸುತ್ತಿನ ಸೂಪರ್ 12 ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇದೇ ದಿನ ಸಂಜೆ ದುಬೈನಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳ ಕಾದಾಟ ನಡೆಸಲಿವೆ.
ಮತ್ತೊಂದೆಡೆ ಅಕ್ಟೋಬರ್ 24 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ದುಬೈನಲ್ಲಿ ಕಾದಾಟ ನಡೆಸಲಿವೆ. ಅ.31 ರಂದು ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ನ.3 ಮತ್ತು ನ.5 ರಂದು ಕ್ರಮವಾಗಿ ಕೊಹ್ಲಿ ಪಡೆ, ಅಫ್ಗಾನಿಸ್ತಾನ ಮತ್ತು ಮೊದಲ ಸುತ್ತಿನ ‘ಬಿ’ ಗುಂಪಿನ ವಿಜೇತ ತಂಡದೊಂದಿಗೆ ಸೆಣಸಲಿದೆ. ಅಂತಿಮವಾಗಿ ನವೆಂಬರ್ 8 ರಂದು ಮೊದಲ ಸುತ್ತಿನ ಗುಂಪು ‘ಎ’ ವಿಜೇತ ತಂಡದೊಂದಿಗೆ ಭಾರತ ಕಾದಾಟ ನಡೆಸುವ ಮೂಲಕ ಸೂಪರ್ 12 ಹಂತದ ಪಂದ್ಯಗಳು ಮುಕ್ತಾಯವಾಗಲಿವೆ.
Jaya Bhardwaj: ದೀಪಕ್ ಚಹರ್ ಪ್ರೊಪೋಸ್ ಮಾಡಿದ ಜಯಾ ಭಾರದ್ವಜ್ ಯಾರು ಗೊತ್ತಾ?, ಕೇಳಿದ್ರೆ ಶಾಕ್ ಅಗ್ತೀರಾ
Mumbai Indians: ಮುಂಬೈಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಂದಿನ ಪಂದ್ಯದಲ್ಲಿ ರೋಹಿತ್ ಪಡೆ ಹೀಗೆ ಮಾಡಬೇಕು
RCB Predicted XI: ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ತಂಡದಿಂದ ಇಬ್ಬರು ಆಟಗಾರರು ಔಟ್: 2 ಬದಲಾವಣೆ ಖಚಿತ
(BCCI confirms Indian cricket team new T20 World Cup jersey launch date on October 13)