BCCI: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾಗೆ ಬಂಪರ್ ಗಿಫ್ಟ್ ನೀಡಿದ ಬಿಸಿಸಿಐ

|

Updated on: Mar 09, 2024 | 7:07 PM

BCCI: ಧರ್ಮಶಾಲಾದಲ್ಲಿ ನಡೆದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ಇನಿಂಗ್ಸ್ ಹಾಗೂ 64 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಬೆನ್ನಲ್ಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ಟೆಸ್ಟ್ ಕ್ರಿಕೆಟ್ ಅನ್ನು ಉತ್ತೇಜಿಸುವ ಸಲುವಾಗಿ ಬಿಸಿಸಿಐ ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹಧನ ಯೋಜನೆಯನ್ನು ಪ್ರಾರಂಭಿಸಿರುವುದಾಗಿ ಜಯ್ ಶಾ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

BCCI: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾಗೆ ಬಂಪರ್ ಗಿಫ್ಟ್ ನೀಡಿದ ಬಿಸಿಸಿಐ
ಟೀಂ ಇಂಡಿಯಾ
Follow us on

ಧರ್ಮಶಾಲಾದಲ್ಲಿ ನಡೆದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ಇನಿಂಗ್ಸ್ ಹಾಗೂ 64 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು (India vs England) ಸೋಲಿಸಿದ ಬೆನ್ನಲ್ಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ (BCCI secretary Jay Shah) ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ಟೆಸ್ಟ್ ಕ್ರಿಕೆಟ್ ಅನ್ನು ಉತ್ತೇಜಿಸುವ ಸಲುವಾಗಿ ಬಿಸಿಸಿಐ ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹಧನ ಯೋಜನೆಯನ್ನು (Test Cricket Incentive Scheme) ಪ್ರಾರಂಭಿಸಿರುವುದಾಗಿ ಜಯ್ ಶಾ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಡಿಯಲ್ಲಿ, ಟೆಸ್ಟ್ ಆಡಲು ಭಾರತೀಯ ಆಟಗಾರರು ಪಡೆಯುವ ಶುಲ್ಕದಲ್ಲಿ ಭಾರಿ ಏರಿಕೆಯಾಗಿದೆ. ಇದರ ಅಡಿಯಲ್ಲಿ, ಒಂದು ಸೀಸನ್​ನಲ್ಲಿ 75 ಪ್ರತಿಶತ ಪಂದ್ಯಗಳನ್ನು ಆಡುವ ಆಟಗಾರನಿಗೆ ಪ್ರತಿ ಪಂದ್ಯಕ್ಕೆ 45 ಲಕ್ಷ ರೂ. ಸಂಭಾವನೆ ಪಡೆಯಲ್ಲಿದ್ದಾರೆ. ಹಾಗೆಯೇ ಆಡುವ ಹನ್ನೊಂದರ ಬಳಗದಲ್ಲಿ ಇಲ್ಲದ ಆಟಗಾರರು 22.5 ಲಕ್ಷ ರೂ. ಸಂಭಾವನೆ ಪಡೆಯಲ್ಲಿದ್ದಾರೆ.

ಯೋಜನೆಯ ವಿವರ ಹೀಗಿದೆ

ಈ ಯೋಜನೆಯ ಪ್ರಕಾರ, ಒಂದು ಸೀಸನ್​ನಲ್ಲಿ ತಂಡದ ಒಟ್ಟು ಟೆಸ್ಟ್ ಪಂದ್ಯಗಳಲ್ಲಿ 75 ಪ್ರತಿಶತ ಪಂದ್ಯಗಳಲ್ಲಿ ಪ್ಲೇಯಿಂಗ್-11 ರಲ್ಲಿ ಕಾಣಿಸಿಕೊಳ್ಳುವ ಆಟಗಾರರು ಪ್ರತಿ ಪಂದ್ಯಕ್ಕೆ ಒಟ್ಟು 45 ಲಕ್ಷ ರೂ. ವೇತನ ಪಡೆಯಲ್ಲಿದ್ದಾರೆ. ಆದರೆ 75 ಪ್ರತಿಶತ ಪಂದ್ಯಗಳಲ್ಲಿ ತಂಡದ ಭಾಗವಾಗಿರದ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 22.5 ಲಕ್ಷ ರೂ. ಸಿಗಲಿದೆ. ಹಾಗೆಯೇ 50 ಪ್ರತಿಶತ ಪಂದ್ಯಗಳಲ್ಲಿ ಪ್ಲೇಯಿಂಗ್-11 ರ ಭಾಗವಾಗಿರುವ ಆಟಗಾರರು ಪ್ರತಿ ಪಂದ್ಯಕ್ಕೆ ಒಟ್ಟು 30 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಅದೇ ಸಂಖ್ಯೆಯ ಪಂದ್ಯಗಳಲ್ಲಿ ತಂಡದ ಭಾಗವಾಗಿರದ ಆಟಗಾರರು ಪ್ರತಿ ಪಂದ್ಯಕ್ಕೆ 15 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ.

IND vs ENG: ನಾಯಕನಾಗಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ರೋಹಿತ್ ಶರ್ಮಾ

ಇನ್ನು ಇದಕ್ಕಿಂತ ಕಡಿಮೆ ಪಂದ್ಯಗಳನ್ನಾಡುವ ಆಟಗಾರರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಈ ಯೋಜನೆಯಿಂದ ವಂಚಿತರಾಗುವ ಆಟಗಾರರು ಪ್ರಸ್ತುತ ಬಿಸಿಸಿಐ ನಿಗಧಿ ಪಡೆಸಿರುವ ಪಂದ್ಯ ಶುಲ್ಕವನ್ನು ವೇತನವಾಗಿ ಪಡೆಯುತ್ತಾರೆ. ಇದನ್ನು ಸರಳವಾಗಿ ಹೇಳುವುದಾದರೆ.. ಟೀಂ ಇಂಡಿಯಾ ಒಂದು ಸೀಸನ್​ನಲ್ಲಿ ಒಟ್ಟು 9 ಪಂದ್ಯಗಳನ್ನು ಆಡಿದೆ ಎಂದಿಟ್ಟುಕೊಳ್ಳೋಣ. ಇದರಲ್ಲಿ 75 ಪ್ರತಿಶತ ಎಂದರೆ ತಂಡ ಆಡಿರುವ 9 ಪಂದ್ಯಗಳಲ್ಲಿ ಒಬ್ಬ ಆಟಗಾರ 7 ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಬೇಕು. ಅಂತಹ ಆಟಗಾರನಿಗೆ ಒಂದು ಪಂದ್ಯಕ್ಕೆ 45 ರೂ. ಲಕ್ಷ. ಸಿಗಲಿದೆ. ಆದರೆ ಪ್ಲೇಯಿಂಗ್-11 ರಲ್ಲಿ ಇಲ್ಲದ, ತಂಡದಲ್ಲಿರುವ ಆಟಗಾರರು 22.5 ಲಕ್ಷ ರೂ. ವೇತನ ಪಡೆಯಲ್ಲಿದ್ದಾರೆ.

ಹಾಗೆಯೇ ಒಬ್ಬ ಆಟಗಾರ ಶೇಕಡಾ 50 ರಷ್ಟು ಪಂದ್ಯಗಳಲ್ಲಿ ಅಂದರೆ 5 ಅಥವಾ 6 ಪಂದ್ಯಗಳಲ್ಲಿ ತಂಡದ ಪ್ಲೇಯಿಂಗ್-11 ರ ಭಾಗವಾಗಿದ್ದರೆ, ಅವನಿಗೆ ಪ್ರತಿ ಪಂದ್ಯಕ್ಕೆ 30 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಹಾಗೆಯೇ ತಂಡದಲ್ಲಿರುವ ಆಟಗಾರರು 15 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಇದಕ್ಕಿಂತ ಕಡಿಮೆ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಆಟಗಾರರು ಹಳೆಯ ಶುಲ್ಕವನ್ನೇ ಪಡೆಯುತ್ತಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಜೈ ಶಾ ಈ ಮಾಹಿತಿ ನೀಡಿದ್ದಾರೆ. ಈ ಯೋಜನೆಯು 2022-23 ರಿಂದ ಪ್ರಾರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.

ಯೋಜನೆ ತರಲು ಕಾರಣವೇನು?

ಇತ್ತೀಚೆಗೆ ಕೆಲವು ಆಟಗಾರರು ಟೆಸ್ಟ್ ಕ್ರಿಕೆಟ್ ಮತ್ತು ದೇಶೀಯ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ. ಅದರ ಬದಲಾಗಿ ಐಪಿಎಲ್‌ನಲ್ಲಿ ಸಾಕಷ್ಟು ಹಣವನ್ನು ಪಾವತಿಸುತ್ತಾರೆ ಎಂಬ ಕಾರಣಕ್ಕೆ ಐಪಿಎಲ್‌ಗೆ ತಯಾರಿ ಆರಂಭಿಸಿದ್ದಾರೆ. ಇದನ್ನು ಎದುರಿಸಲು ಬಿಸಿಸಿಐ ಬಹುಶಃ ಈ ಯೋಜನೆಯನ್ನು ಪ್ರಾರಂಭಿಸಿರುವ ಸಾಧ್ಯತೆಗಳಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:51 pm, Sat, 9 March 24