ಮುಂದಿನ ತಿಂಗಳಿನಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ (T20 World Cup) ಆರಂಭವಾಗಲಿದ್ದು, ಈ ಬಾರಿಯ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ (Team India) ಪ್ರಶಸ್ತಿ ಗೆಲ್ಲುವ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಈ ಚುಟುಕು ಸಮರಕ್ಕೂ ಮುನ್ನ ರೋಹಿತ್ ಪಡೆ, ಆಸೀಸ್ ಹಾಗೂ ಹರಿಣಗಳ ವಿರುದ್ಧ ಟಿ20 ಸರಣಿಯನ್ನು ಆಡಬೇಕಿದೆ. ಆದರೆ ಈ ಟಿ20 ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಈ ಬಾರಿಯ ಮಿನಿ ಸಮರದಲ್ಲಿ ರೋಹಿತ್ ಪಡೆ ತೊಡುವ ಹೊಸ ಜೆರ್ಸಿ (jersey) ಅನಾವರಣಗೊಂಡಿದೆ. ಟೀಂ ಇಂಡಿಯಾದ ಹೊಸ ಟಿ20 ಜೆರ್ಸಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದ್ದು, ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕ ಎಂಪಿಎಲ್ ಸ್ಪೋರ್ಟ್ಸ್ ಈ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಹಿಂದಿನ ಜೆರ್ಸಿಗಿಂತ ಈ ಜೆರ್ಸಿ ತುಂಬಾ ಭಿನ್ನವಾಗಿದೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಧರಿಸಿದ್ದ ಜೆರ್ಸಿಗೂ ಈ ಜೆರ್ಸಿಯ ಬಣ್ಣಕ್ಕೂ ಸಾಕಷ್ಟು ವ್ಯತ್ಯಾಸವಿದೆ.
ಹೊಸ ಜೆರ್ಸಿಯ ಬಣ್ಣ ಆಕಾಶ ನೀಲಿಯಿಂದ ಕೂಡಿದ್ದು, ಭುಜ ಮತ್ತು ತೋಳುಗಳ ಮೇಲೆ ಗಾಢ ನೀಲಿ ಬಣ್ಣವಿದೆ. ಹೀಗಾಗಿ ಟೀಂ ಇಂಡಿಯಾದ ಹೊಸ ಜೆರ್ಸಿ ಹಿಂದಿನ ಜೆರ್ಸಿಗಿಂತ ತುಂಬಾ ಭಿನ್ನವಾಗಿದೆ. ಈ ಜೆರ್ಸಿಯಲ್ಲಿ ಎಂಪಿಎಲ್ ಸ್ಪೋರ್ಟ್ಸ್ ಮತ್ತು ಬೈಜುಸ್ ಹೆಸರಿದ್ದು, ಜೆರ್ಸಿಯ ಮಧ್ಯದಲ್ಲಿ ಇಂಡಿಯಾ ಎಂದು ಬರೆಯಲಾಗಿದೆ.
To every cricket fan out there, this one’s for you.
Presenting the all new T20 Jersey – One Blue Jersey by @mpl_sport. #HarFanKiJersey#TeamIndia #MPLSports #CricketFandom pic.twitter.com/3VVro2TgTT
— BCCI (@BCCI) September 18, 2022
ಹೊಸ ಜೆರ್ಸಿ ಟೀಂ ಇಂಡಿಯಾಕ್ಕೆ ಅದೃಷ್ಟ ತಂದುಕೊಡುತ್ತಾ?
ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಕೂಡ ಇದೇ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಟೀಮ್ ಇಂಡಿಯಾ ಬಹುತೇಕ ಟಿ20 ವಿಶ್ವಕಪ್‌ನಲ್ಲಿ ಪ್ರತಿ ಬಾರಿಯೂ ಹೊಸ ಜೆರ್ಸಿಯನ್ನು ಧರಿಸಿದೆ. ಈ ಬಾರಿಯೂ ಅದೇ ಆಗಲಿದೆ. ಈಗ ಈ ಹೊಸ ಜೆರ್ಸಿ ಭಾರತ ತಂಡಕ್ಕೆ ಅದೃಷ್ಟ ತಂದುಕೊಡುತ್ತದೋ ಇಲ್ಲವೋ ಕಾದು ನೋಡಬೇಕಿದೆ. 2007 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತವು T20 ವಿಶ್ವಕಪ್‌ನ ಮೊದಲ ಆವೃತ್ತಿಯನ್ನು ಗೆದ್ದುಕೊಂಡಿತು ಆದರೆ ಅದರ ನಂತರ ಅದು ಮತ್ತೆ ಟ್ರೋಫಿಯನ್ನು ಎತ್ತಿ ಹಿಡಿಯಲು ಸಾಧ್ಯವಾಗಲಿಲ್ಲ. 2014ರಲ್ಲಿ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಫೈನಲ್‌ಗೆ ಕಾಲಿಟ್ಟರೂ ಗೆಲುವು ಅವರ ಕೈ ಸೇರಲಿಲ್ಲ.
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.
Published On - 8:32 pm, Sun, 18 September 22