ಕೇವಲ 4 ದಿನಗಳಲ್ಲಿ ಪರ್ತ್ ಟೆಸ್ಟ್‌ನಲ್ಲಿ ಸೋಲು ಕಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಅಡಿಲೇಡ್‌ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ಗೂ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಅದರಂತೆ ಶತಾಯಗತಾಯ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕೆಂಬ ಹಂಬಲದಲ್ಲಿರುವ ಆಸೀಸ್ ತಂಡಕ್ಕೆ ಯುವ ಆಟಗಾರನ ಆಗಮನವಾಗಿದೆ. ವಾಸ್ತವವಾಗಿ ಮೊದಲ ಟೆಸ್ಟ್ ಪಂದ್ಯದ ವೇಳೆ ತಂಡದ ಅನುಭವಿ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಅವರು ಎರಡನೇ ಟೆಸ್ಟ್‌ನಲ್ಲಿ ಆಡುವುದು ಅನುಮಾನವಾಗಿದೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ಯುವ ಆಲ್‌ರೌಂಡರ್ ಬ್ಯೂ ವೆಬ್‌ಸ್ಟರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಬ್ಯೂ ವೆಬ್‌ಸ್ಟರ್ ಅವರ ಇತ್ತೀಚಿನ ಫಾರ್ಮ್ ಮತ್ತು ಭಾರತ ಎ ವಿರುದ್ಧದ ಪಂದ್ಯದಲ್ಲಿ ಅವರ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ತಂಡಕ್ಕೆ ಸೇರಿಸಲಾಗಿದೆ.
ಬ್ಯೂ ವೆಬ್‌ಸ್ಟರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದುವರೆಗೆ 12 ಶತಕಗಳೊಂದಿಗೆ 5297 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟಿಂಗ್ ಸರಾಸರಿ 37ಕ್ಕಿಂತ ಹೆಚ್ಚಿದೆ. ಬೌಲಿಂಗ್ನಲ್ಲೂ ಕಮಾಲ್ ಮಾಡಿರುವ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 148 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ನಡೆದಿದ್ದ ಭಾರತ ಎ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ವೆಬ್‌ಸ್ಟರ್ ಅದ್ಭುತ ಪ್ರದರ್ಶನ ನೀಡಿದ್ದರು. ಆಡಿದ 2 ಪಂದ್ಯಗಳ 4 ಇನ್ನಿಂಗ್ಸ್‌ಗಳಲ್ಲಿ, ಅವರು ಒಂದು ಅರ್ಧಶತಕದೊಂದಿಗೆ 150 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಜೊತೆಗೆ 7 ವಿಕೆಟ್ ಕೂಡ ಪಡೆದಿದ್ದರು.
Another sensational all-round display by Beau Webster delivered Tasmania their first win of the #SheffieldShield season!
Full report: https://t.co/fKT9ZT6owx pic.twitter.com/Vm4i4rEFF2
— cricket.com.au (@cricketcomau) November 27, 2024
ಬ್ಯೂ ವೆಬ್‌ಸ್ಟರ್ ಅವರು ನವೆಂಬರ್ 24 ರಿಂದ ನ್ಯೂ ಸೌತ್ ವೇಲ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ, ಟ್ಯಾಸ್ಮೆನಿಯಾದ 55 ರನ್‌ಗಳ ಗೆಲುವಿನಲ್ಲಿ ವೆಬ್‌ಸ್ಟರ್ ಅವರ ಆಲ್‌ರೌಂಡರ್ ಪ್ರದರ್ಶನ ಪ್ರಮುಖ ಪಾತ್ರವಹಿಸಿತ್ತು. ವೆಬ್‌ಸ್ಟರ್ ಈ ಎರಡೂ ಇನ್ನಿಂಗ್ಸ್‌ಗಳಲ್ಲಿ 110 ರನ್ ಗಳಿಸಿದ್ದರೆ, ಬೌಲಿಂಗ್ಲ್ಲಿ 5 ವಿಕೆಟ್ ಪಡೆದಿದ್ದರು. ಹೀಗಾಗಿ ಅವರ ಪ್ರಸ್ತುತ ಪ್ರದರ್ಶನವನ್ನು ಪರಿಗಣಿಸಿ, ಆಸ್ಟ್ರೇಲಿಯಾ ತಂಡದ ಆಡಳಿತವು ಮಾರ್ಷ್‌ಗೆ ಪರ್ಯಾಯವಾಗಿ ಅವರನ್ನು ತಂಡಕ್ಕೆ ಸೇರಿಸಲು ನಿರ್ಧರಿಸಿದೆ.
Who else but Beau Webster!
Tasmania get their first W of the #SheffieldShield season! pic.twitter.com/EOqiQqAj9f
— cricket.com.au (@cricketcomau) November 27, 2024
ಪರ್ತ್ ಟೆಸ್ಟ್‌ನಲ್ಲಿ ಭಾರತ 295 ರನ್‌ಗಳ ಬೃಹತ್ ಅಂತರದಿಂದ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಆ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಗಾಯಕೊಂಡಿದ್ದರು. ಇದರಿಂದಾಗಿ ವೆಬ್‌ಸ್ಟರ್ ಅವರನ್ನು ಬ್ಯಾಕಪ್ ಆಗಿ ತಂಡದಲ್ಲಿ ಸೇರಿಸಲಾಗಿದೆ. ಮಾರ್ಷ್ ಗಾಯದ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದೇವೆ ಎಂದು ಆಸ್ಟ್ರೇಲಿಯಾ ತಂಡದ ಕೋಚ್ ಹೇಳಿದ್ದಾರೆ.
ಇನ್ನು ಉಭಯ ತಂಡಗಳ ನಡುವಿನ ಎರಡನೇ ಪಂದ್ಯದ ಬಗ್ಗೆ ಹೇಳುವುದಾದರೆ.. ಈ ಪಂದ್ಯ ಡಿಸೆಂಬರ್ 6 ರಿಂದ 10 ರವರೆಗೆ ಅಡಿಲೇಡ್‌ನಲ್ಲಿ ನಡೆಯಲಿದೆ. ಇದು ಡೇ-ನೈಟ್ ಟೆಸ್ಟ್ ಆಗಿದ್ದು, ಪಿಂಕ್ ಚೆಂಡಿನೊಂದಿಗೆ ಪಂದ್ಯ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ