CCL 2024: ಸಿಸಿಎಲ್​ನಲ್ಲಿ ಅಬ್ಬರಿಸಲು ಸಜ್ಜಾದ ಪಂಜಾಬ್ ದಿ ಶೇರ್; ಮೊದಲ ಪಂದ್ಯ ಯಾವಾಗ ಗೊತ್ತಾ?

|

Updated on: Jan 28, 2024 | 8:05 PM

CCL 2024 10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ಗೆ ದಿನಗಣನೆ ಆರಂಭವಾಗಿದ್ದು, ಭಾರತ ಚಿತ್ರರಂಗದ ದಿಗ್ಗಜರು ಇದೇ ಫೆಬ್ರವರಿ 23 ರಿಂದ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಫೆಬ್ರವರಿ 23 ರಿಂದ ಆರಂಭವಾಗುವ ಸಿಸಿಎಲ್​ನ 10ನೇ ಸೀಸನ್​ ಮಾರ್ಚ್ 17 ರವರೆಗೆ ನಡೆಯಲ್ಲಿದೆ.

CCL 2024: ಸಿಸಿಎಲ್​ನಲ್ಲಿ ಅಬ್ಬರಿಸಲು ಸಜ್ಜಾದ ಪಂಜಾಬ್ ದಿ ಶೇರ್; ಮೊದಲ ಪಂದ್ಯ ಯಾವಾಗ ಗೊತ್ತಾ?
ಪಂಜಾಬ್ ದಿ ಶೇರ್ ತಂಡ
Follow us on

ಭಾರತ ಚಿತ್ರರಂಗದ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಅಭಿಮಾನಿಗಳಿಗೆ ಮತ್ತೊಮ್ಮೆ ಒದಗಿ ಬಂದಿದೆ. 10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ಗೆ (Celebrity Cricket League 2024) ದಿನಗಣನೆ ಆರಂಭವಾಗಿದ್ದು, ದೇಶದ ಸ್ಟಾರ್ ನಟರು ಇದೇ ಫೆಬ್ರವರಿ 23 ರಿಂದ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಫೆಬ್ರವರಿ 23 ರಿಂದ ಆರಂಭವಾಗುವ ಸಿಸಿಎಲ್​ನ 10ನೇ ಸೀಸನ್​ ಮಾರ್ಚ್ 17 ರವರೆಗೆ ನಡೆಯಲ್ಲಿದೆ. ಲೀಗ್ ಸುತ್ತು ಮಾರ್ಚ್​ 10 ರವರೆಗೆ ನಡೆಯಲಿದ್ದು, ಈ ಸುತ್ತಿನಲ್ಲಿ 16 ಪಂದ್ಯಗಳು ನಡೆಯಲಿವೆ. ಆ ಬಳಿಕ ಪ್ಲೇಆಫ್‌ ಸುತ್ತು ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನ (United Arab Emirates) ಶಾರ್ಜಾದಲ್ಲಿ ನಡೆಯಲ್ಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಲಿವೆ.

5 ನಗರಗಳಲ್ಲಿ ನಡೆಯಲ್ಲಿದೆ ಲೀಗ್

ಭಾರತದ ಎಂಟು ಚಲನಚಿತ್ರೋದ್ಯಮಗಳ ಸೂಪರ್‌ಸ್ಟಾರ್‌ಗಳನ್ನು ಒಳಗೊಂಡಿರುವ ಒಟ್ಟು ಎಂಟು ತಂಡಗಳು ಯುಎಇ ಸೇರಿದಂತೆ ಭಾರತದ ಐದು ಸ್ಥಳಗಳಲ್ಲಿ 24 ದಿನಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಮೇಲೆ ಹೇಳಿದಂತೆ ಯುಎಇಯ ಶಾರ್ಜಾದಲ್ಲಿ ಲೀಗ್​ನ ಮೂರು ಪಂದ್ಯಗಳು ನಡೆಯಲ್ಲಿದ್ದು, ಆ ನಂತರ ಲೀಗ್​ ಭಾರತಕ್ಕೆ ಕಾಲಿಡಲಿದೆ. ಭಾರತದ ಐದು ನಗರಗಳಾದ ಹೈದರಾಬಾದ್, ಬೆಂಗಳೂರು, ಚಂಡೀಗಢ, ತಿರುವನಂತಪುರ ಮತ್ತು ವೈಜಾಗ್​ನಲ್ಲಿ ಉಳಿದ ಪಂದ್ಯಗಳು ನಡೆಯಲ್ಲಿವೆ. ವಾರಾಂತ್ಯದಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ಡಬಲ್ ಹೆಡರ್ ಪಂದ್ಯಗಳಿರಲಿವೆ. ಅಂದರೆ ದಿನಕ್ಕೆ ಎರಡು ಪಂದ್ಯಗಳು ನಡೆಯಲ್ಲಿವೆ.

8 ತಂಡಗಳು ಹೀಗಿವೆ

  • ಮುಂಬೈ ಹೀರೋಸ್
  • ಕೇರಳ ಸ್ಟ್ರೈಕರ್ಸ್
  • ತೆಲುಗು ವಾರಿಯರ್ಸ್
  • ಭೋಜ್‌ಪುರಿ ದಬಾಂಗ್ಸ್
  • ಕರ್ನಾಟಕ ಬುಲ್ಡೋಜರ್ಸ್
  • ಬೆಂಗಾಲ್ ಟೈಗರ್ಸ್
  • ಚೆನ್ನೈ ರೈನೋಸ್
  • ಪಂಜಾಬ್ ದಿ ಶೇರ್

ಪಂಜಾಬ್​ಗೆ ಸೋನು ನಾಯಕ

ಈ ಎಂಟು ಫ್ರಾಂಚೈಸಿಗಳ ಪೈಕಿ, ಪಂಜಾಬ್ ದಿ ಶೇರ್ ಈ ಬಾರಿ ಕಪ್ ಗೆಲ್ಲುವ ಸಲುವಾಗಿ ಬಲಿಷ್ಠ ತಂಡವನ್ನೇ ಕಟ್ಟಿಕೊಂಡು ಅಖಾಡಕ್ಕಿಳಿಯುತ್ತಿದೆ. ತಂಡದ ನಾಯಕತ್ವ ಬಾಲಿವುಡ್‌ ನಾಯಕ ನಟ ಸೋನು ಸೂದ್ ವಹಿಸಿಕೊಂಡಿದ್ದು, ತಂಡವು ಲೀಗ್​ನ ಮೊದಲ ಪಂದ್ಯವನ್ನು ಫೆಬ್ರವರಿ 25 ರಂದು ಚೆನ್ನೈ ರೈನೋಸ್ ವಿರುದ್ಧ ಆಡಲಿದೆ.

ಅಭ್ಯಾಸ ಆರಂಭಿಸಿದ ಪಂಜಾಬ್

ಈ ಲೀಗ್​ಗಾಗಿ ಭರ್ಜರಿ ತಯಾರಿಯಲ್ಲಿ ತೊಡಗಿರುವ ಪಂಜಾಬ್ ತಂಡವು, ಲೀಗ್​ನ ಮೊದಲ ಪಂದ್ಯಕ್ಕೂ ಮುನ್ನ ಕೆಲವು ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ಅದರಂತೆ ಡಿಸೆಂಬರ್ 16 ರಂದು ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಪಂಜಾಬ್ ದಿ ಶೇರ್ ತಂಡ, ಪಂಜಾಬ್ ಎಜುಕೇಟರ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಆ ಬಳಿಕ ಜನವರಿ 27 ರಂದು IRS ಆಫೀಸರ್ಸ್ XI ತಂಡದ ವಿರುದ್ಧ ಎರಡನೇ ಅಭ್ಯಾಸ ಪಂದ್ಯವನ್ನು ಆಡಿತ್ತು. ಇನ್ನು ಫೆಬ್ರವರಿ ತಿಂಗಳಲ್ಲಿ ತಂಡ ಇನ್ನೂ 3 ಅಭ್ಯಾಸ ಪಂದ್ಯಗಳನ್ನು ಆಡಲಿದ್ದು, ಆ ನಂತರ ಸಿಸಿಎಲ್​ಗೆ ಲಗ್ಗೆ ಇಡಲಿದೆ. ಈ ಭಾರಿ ಬಲಿಷ್ಠವಾಗಿ ಕಾಣುತ್ತಿರುವ ಪಂಜಾಬ್ ದಿ ಶೇರ್ ತಂಡದ ಮಾಧ್ಯಮ ಪಾಲುದಾರಿಕೆಯನ್ನು ಟಿವಿ9 ನೆಟ್‌ವರ್ಕ್ ಮತ್ತು ನ್ಯೂಸ್ 9 ಪಡೆದುಕೊಂಡಿದೆ.

ಕ್ರಿಕೆಟ್‌ನೊಂದಿಗೆ ಟಿವಿ9 ನೆಟ್‌ವರ್ಕ್ ಒಡನಾಟ

ಏತನ್ಮಧ್ಯೆ, ಟಿವಿ9 ನೆಟ್‌ವರ್ಕ್ ಕ್ರಿಕೆಟ್ ಲೋಕದಲ್ಲೂ ತನ್ನ ಛಾಪು ಮೂಡಿಸಿದ್ದು, ಟಿವಿ9 ಗ್ರೂಪ್ ಈಗಾಗಲೇ ಕ್ರಿಕೆಟ್​ನ ಮಿಲೇನಿಯರ್ ಕೂಸಾದ ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್‌ ಫ್ರಾಂಚೈಸಿಗಳ ಪ್ರಾಯೋಜಕತ್ವವನ್ನು ನಿರ್ವಹಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:02 pm, Sun, 28 January 24