
ಭಾರತದ ಟೈರ್ ತಯಾರಿಕಾ ಕಂಪನಿ ಸಿಯೆಟ್ ವರ್ಷದ ಕ್ರಿಕೆಟಿಂಗ್ ಪ್ರಶಸ್ತಿಗಳನ್ನು ಪ್ರಧಾನ ಮಾಡಿದೆ. ಈ ಬಾರಿ ಪುರುಷರ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ ಇಂಗ್ಲೆಂಡ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ಪಾಲಾಗಿದೆ. ಹಾಗೆಯೇ ಒಡಿಐ ಬ್ಯಾಟರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನ್ಯೂಝಿಲೆಂಡ್ನ ಕೇನ್ ವಿಲಿಯಮ್ಸನ್ ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ವರ್ಷದ ಟಿ20 ಬ್ಯಾಟರ್ ಆಫ್ ದಿ ಇಯರ್ ಪ್ರಶಸ್ತಿಯು ಟೀಮ್ ಇಂಡಿಯಾದ ಸಂಜು ಸ್ಯಾಮ್ಸನ್ ಪಾಲಾಗಿದೆ.
ಇನ್ನು ಟೀಮ್ ಇಂಡಿಯಾ ಬೌಲರ್ ವರುಣ್ ಚಕ್ರವರ್ತಿ ಟಿ20 ಬೌಲರ್ ಪ್ರಶಸ್ತಿ ಪಡೆದರೆ, ಯುವ ದಾಂಡಿಗ ಹ್ಯಾರಿ ಬ್ರೂಕ್ ಟೆಸ್ಟ್ ಕ್ರಿಕೆಟ್ ಆಫ್ ದಿ ಇಯರ್ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ವರ್ಷದ ಟೆಸ್ಟ್ ಬೌಲರ್ ಪ್ರಶಸ್ತಿಯು ಶ್ರೀಲಂಕಾ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಅವರಿಗೆ ನೀಡಲಾಗಿದೆ.
ಮಹಿಳಾ ವಿಭಾಗದಲ್ಲಿ ಟೀಮ್ ಇಂಡಿಯಾ ಆಟಗಾರ್ತಿಯರಾದ ದೀಪ್ತಿ ಶರ್ಮಾ ಹಾಗೂ ಸ್ಮೃತಿ ಮಂಧಾನ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: 22 ಫೋರ್, 3 ಭರ್ಜರಿ ಸಿಕ್ಸ್: ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಪೃಥ್ವಿ ಶಾ
ಜೀವಮಾನದ ಸರ್ವಶ್ರೇಷ್ಠ ಸಾಧನೆಗಾಗಿ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ ಹಾಗೂ ಭಾರತದ ಬಿ.ಎಸ್ ಚಂದ್ರಶೇಖರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸಿಯೆಟ್ ಕಂಪೆನಿ ಗೌರವಿಸಿದೆ. ಹಾಗೆಯೇ ಭಾರತ ತಂಡಕ್ಕೆ ಚಾಂಪಿಯನ್ಸ್ ಟ್ರೋಫಿ ಗೆದ್ದು ಕೊಟ್ಟ ನಾಯಕ ರೋಹಿತ್ ಶರ್ಮಾ ಅವರಿಗೂ ವಿಶೇಷ ಸ್ಮರಣಿಕೆ ನೀಡಲಾಗಿದೆ. ಅದರಂತೆ ಈ ಬಾರಿಯ ಸಿಯೆಟ್ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
Published On - 8:03 am, Wed, 8 October 25