AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs SA: ಅತ್ಯಧಿಕ ಶತಕ; ಮೂವರನ್ನು ಹಿಂದಿಕ್ಕಿ, ಮೂವರ ದಾಖಲೆಯನ್ನು ಸರಿಗಟ್ಟಿದ ಜೋ ರೂಟ್

ENG vs SA: ಅತ್ಯಧಿಕ ಶತಕ; ಮೂವರನ್ನು ಹಿಂದಿಕ್ಕಿ, ಮೂವರ ದಾಖಲೆಯನ್ನು ಸರಿಗಟ್ಟಿದ ಜೋ ರೂಟ್

ಪೃಥ್ವಿಶಂಕರ
|

Updated on: Sep 07, 2025 | 10:21 PM

Share

Joe Root's Century: ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ, ಜೋ ರೂಟ್ ಅವರು 96 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 100 ರನ್ ಗಳಿಸಿ ತಮ್ಮ 19ನೇ ಏಕದಿನ ಶತಕವನ್ನು ಬಾರಿಸಿದರು. ಇದರಿಂದ ಅವರು ಬಾಬರ್ ಆಝಂ, ಬ್ರಿಯಾನ್ ಲಾರಾ ಮತ್ತು ಮಹೇಲಾ ಜಯವರ್ಧನೆ ಅವರನ್ನು ಸರಿಗಟ್ಟಿದರು. ಅಲ್ಲದೇ, ಶೈ ಹೋಪ್, ಮಾರ್ಟಿನ್ ಗುಪ್ಟಿಲ್ ಮತ್ತು ಸ್ಟೀವ್ ವಾ ಅವರ ದಾಖಲೆಯನ್ನು ಮುರಿದಿದ್ದಾರೆ.

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಪರ ಅನುಭವಿ ಜೋ ರೂಟ್ ಶತಕದ ಇನ್ನಿಂಗ್ಸ್ ಆಡಿದರು. ಮೂರನೇ ಕ್ರಮಾಂಕದಲ್ಲಿ ಬಂದ ಜೋ ರೂಟ್ ಶಿಸ್ತಿನ ಬ್ಯಾಟಿಂಗ್‌ ಮಾಡಿ 96 ಎಸೆತಗಳಲ್ಲಿ 6 ಬೌಂಡರಿಗಳನ್ನು ಒಳಗೊಂಡಂತೆ ಒಟ್ಟು 100 ರನ್ ಗಳಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಜೋ ರೂಟ್ ಅವರ 19 ನೇ ಶತಕವಾಗಿತ್ತು.

ಇದರೊಂದಿಗೆ, ಅವರು ಬಾಬರ್ ಆಝಂ, ಬ್ರಿಯಾನ್ ಲಾರಾ ಮತ್ತು ಮಹೇಲಾ ಜಯವರ್ಧನೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಮೂವರು ಆಟಗಾರರು ಏಕದಿನ ಪಂದ್ಯಗಳಲ್ಲಿ ತಲಾ 19 ಶತಕಗಳನ್ನು ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು ವೆಸ್ಟ್ ಇಂಡೀಸ್‌ನ ಶೈ ಹೋಪ್, ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್ ಮತ್ತು ಆಸ್ಟ್ರೇಲಿಯಾದ ಸ್ಟೀವ್ ವಾ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಮೂವರು ಆಟಗಾರರು ಏಕದಿನ ಕ್ರಿಕೆಟ್‌ನಲ್ಲಿ ತಲಾ 18 ಶತಕಗಳನ್ನು ಬಾರಿಸಿದ್ದಾರೆ.

2013 ರಲ್ಲಿ ಇಂಗ್ಲೆಂಡ್ ಪರ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಜೋ ರೂಟ್ ಅಂದಿನಿಂದ ಇಲ್ಲಿಯವರೆಗೆ 183 ಏಕದಿನ ಪಂದ್ಯಗಳಲ್ಲಿ ಒಟ್ಟು 7301 ರನ್ ಗಳಿಸಿದ್ದಾರೆ, ಇದರಲ್ಲಿ 19 ಶತಕಗಳು ಮತ್ತು 43 ಅರ್ಧಶತಕಗಳು ಸೇರಿವೆ.