ಚಾಂಪಿಯನ್ಸ್ ಟ್ರೋಫಿ 2025 ಹೈಬ್ರಿಡ್ ಮಾದರಿಯಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಅದರಂತೆ ಟೀಮ್ ಇಂಡಿಯಾ ಪಂದ್ಯಗಳು ದುಬೈನಲ್ಲಿ ನಡೆದರೆ, ಉಳಿದ ಮ್ಯಾಚ್ಗಳಿಗೆ ಪಾಕಿಸ್ತಾನ್ ಆತಿಥ್ಯವಹಿಸಲಿದೆ. ಇದಕ್ಕಾಗಿ ಹೊಸ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವಂತೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಐಸಿಸಿ ಸೂಚಿಸಿದೆ.
ಈಗಾಗಲೇ ಕರಡು ವೇಳಾಪಟ್ಟಿ ಸಿದ್ಧಗೊಂಡಿದ್ದು, ಅದರಂತೆ ಭಾರತ ತಂಡದ 3 ಪಂದ್ಯಗಳು ದುಬೈನಲ್ಲಿ ಆಯೋಜನೆಗೊಳ್ಳುವುದು ಖಚಿತವಾಗಿದೆ. ಇದರ ಜೊತೆಗೆ ಮತ್ತೆರಡು ಪಂದ್ಯಗಳು ಕೂಡ ಸೇರ್ಪಡೆಯಾಗಬಹುದು.
ಅಂದರೆ ಭಾರತ ತಂಡದ ಲೀಗ್ ಹಂತದ ಮೂರು ಪಂದ್ಯಗಳು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಲಿದೆ. ಒಂದು ವೇಳೆ ಟೀಮ್ ಇಂಡಿಯಾ ಸೆಮಿಫೈನಲ್ಗೆ ಪ್ರವೇಶಿಸಿದರೆ ಆ ಪಂದ್ಯವನ್ನು ಸಹ ದುಬೈನಲ್ಲೇ ಆಡಲಾಗುತ್ತದೆ.
ಹಾಗೆಯೇ ಟೀಮ್ ಇಂಡಿಯಾ ಫೈನಲ್ಗೆ ತಲುಪಿದರೆ ಅಂತಿಮ ಹಣಾಹಣಿ ಕೂಡ ದುಬೈನಲ್ಲೇ ಆಯೋಜಿಸಲು ಐಸಿಸಿ ಸೂಚಿಸಿದೆ. ಅದರಂತೆ ಭಾರತ ತಂಡದ 3+2 ಪಂದ್ಯಗಳು ದುಬೈನಲ್ಲಿ ಜರುಗುವುದು ಖಚಿತವಾಗಿದೆ.
ಇಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶ್, ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ್ ವಿರುದ್ಧ ಲೀಗ್ ಹಂತದ ಪಂದ್ಯಗಳನ್ನಾಡಲಾಗಿದೆ. ಕರುಡು ವೇಳಾಪಟ್ಟಿ ಪ್ರಕಾರ ಭಾರತ ತಂಡವು ಫೆಬ್ರವರಿ 20 ರಂದು ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿಯುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ.
ಇನ್ನು ಫೆಬ್ರವರಿ 23 ರಂದು ಜರುಗರಲಿರುವ ಮತ್ತೊಂದು ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ. ಹಾಗೆಯೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯವು ಮಾರ್ಚ್ 1 ರಂದು ನಡೆಯುವ ಸಾಧ್ಯತೆಯಿದೆ. ಈ ಎಲ್ಲಾ ಪಂದ್ಯಗಳಿಗೆ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಟೀಮ್ ಇಂಡಿಯಾದ ಮೂರು ಲೀಗ್ ಪಂದ್ಯಗಳನ್ನು ಹೊರತುಪಡಿಸಿ ಉಳಿದ ಮ್ಯಾಚ್ಗಳು ಪಾಕಿಸ್ತಾನದಲ್ಲೇ ನಡೆಯಲಿದೆ. ಅದರಂತೆ ಒಂದು ಸೆಮಿಫೈನಲ್ ಸೇರಿದಂತೆ 10 ಪಂದ್ಯಗಳಿಗೆ ಪಾಕಿಸ್ತಾನ್ ಆತಿಥ್ಯವಹಿಸಲಿದೆ. ಒಂದು ವೇಳೆ ಟೀಮ್ ಇಂಡಿಯಾ ಸೆಮಿಫೈನಲ್ ಹಾಗೂ ಫೈನಲ್ಗೆ ಪ್ರವೇಶಿಸದೇ ಇದ್ದರೆ, ಆ ಪಂದ್ಯಗಳೂ ಕೂಡ ಪಾಕ್ನಲ್ಲೇ ಜರುಗಲಿದೆ.
ಈ ಪಂದ್ಯಗಳಿಗಾಗಿ ಪಾಕಿಸ್ತಾನ್ ಮೂರು ಸ್ಟೇಡಿಯಂಗಳನ್ನು ನಿಗದಿ ಮಾಡಿಕೊಂಡಿದ್ದು, ಅದರಂತೆ ಲಾಹೋರ್, ರಾವಲ್ಪಿಂಡಿ ಹಾಗೂ ಕರಾಚಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಮ್ಯಾಚ್ಗಳು ಆಯೋಜನೆಗೊಳ್ಳಲಿದೆ.
ಗ್ರೂಪ್-A
ಇದನ್ನೂ ಓದಿ: Team India: ಕೊನೆಯ 10 ಓವರ್ಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
ಗ್ರೂಪ್-B