
2025, ಕ್ರಿಕೆಟ್ ಜಗತ್ತಿಗೆ ಭಾವನಾತ್ಮಕ ವರ್ಷವಾಗಿದೆ. ಏಕೆಂದರೆ ಈ ವರ್ಷ ಅನೇಕ ಸ್ಟಾರ್ ಆಟಗಾರರು ತಮ್ಮ ಕ್ರೀಡಾ ಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ಆಟಗಾರರು ತಮ್ಮ ತಂಡಗಳ ಪರ ಅದ್ಭುತ ಪ್ರದರ್ಶನ ನೀಡುವುದಲ್ಲದೆ, ತಮ್ಮ ಅಭಿಮಾನಿಗಳ ಹೃದಯದಲ್ಲಿಯೂ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ. ಅಂತಹವರ ಪಟ್ಟಿಗೆ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ (Cheteshwar Pujara) ಸೇರ್ಪಡೆಗೊಂಡಿದ್ದಾರೆ. ಆಗಸ್ಟ್ 24 ರಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಚೇತೇಶ್ವರ ಪೂಜಾರ ಈ ವರ್ಷ ನಿವೃತ್ತಿ ಹೊಂದುತ್ತಿರುವ 18 ನೇ ಆಟಗಾರರಾಗಿದ್ದಾರೆ. ಪೂಜಾರಗಿಂತ ಮೊದಲು, ಪ್ರಸ್ತುತ ವರ್ಷದಲ್ಲಿ ಅನೇಕ ಸ್ಟಾರ್ ಆಟಗಾರರು ವಿದಾಹ ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ.
ಈ ವರ್ಷ ಮೂರು ಸ್ವರೂಪಗಳಿಂದಲೂ ಅನೇಕ ಆಟಗಾರರು ನಿವೃತ್ತರಾಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರಲ್ಲಿ ಮಾರ್ಟಿನ್ ಗುಪ್ಟಿಲ್, ತಮೀಮ್ ಇಕ್ಬಾಲ್, ವರುಣ್ ಆರೋನ್, ಶಪೂರ್ ಜದ್ರಾನ್, ವೃದ್ಧಿಮಾನ್ ಸಹಾ, ದಿಮುತ್ ಕರುಣರತ್ನೆ, ಹೆನ್ರಿಕ್ ಕ್ಲಾಸೆನ್, ಪಿಯೂಷ್ ಚಾವ್ಲಾ, ನಿಕೋಲಸ್ ಪೂರನ್, ಆಂಡ್ರೆ ರಸೆಲ್ ಸೇರಿದ್ದಾರೆ. ಹೆನ್ರಿಕ್ ಕ್ಲಾಸೆನ್ ಮತ್ತು ನಿಕೋಲಸ್ ಪೂರನ್ ಅವರ ನಿರ್ಧಾರವು ಅತ್ಯಂತ ಆಘಾತಕಾರಿಯಾಗಿತ್ತು, ಏಕೆಂದರೆ ಅವರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದರು.
ಉಳಿದಂತೆ ಈ ವರ್ಷ ಕೆಲವು ಆಟಗಾರರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ದೀರ್ಘ ಸ್ವರೂಪಕ್ಕೆ ವಿದಾಯ ಹೇಳಿದರು. ಅವರುಗಳಲ್ಲಿ ದೀರ್ಘಕಾಲದವರೆಗೆ ಟೀಂ ಇಂಡಿಯಾದ ಆಧಾರಸ್ತಂಭಗಳಾಗಿದ್ದ ಭಾರತದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು. ಇವರ ಹೊರತಾಗಿ, ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಕೂಡ ಈ ವರ್ಷ ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿದಿದ್ದರು.
Cheteshwar Pujara: ಚೇತೇಶ್ವರ ಪೂಜಾರ ನಿವೃತ್ತಿ ಘೋಷಿಸಲು ಇದುವೇ ಕಾರಣ
2025 ರಲ್ಲಿ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಟಗಾರರಲ್ಲಿ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಬಾಂಗ್ಲಾದೇಶದ ಮುಷ್ಫಿಕರ್ ರಹೀಮ್‌ರಂತಹ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಸೇರಿದ್ದಾರೆ. ಪ್ರಸಕ್ತ ವರ್ಷ ಕೊನೆಗೊಳ್ಳಲು ಇನ್ನೂ 4 ತಿಂಗಳುಗಳು ಬಾಕಿ ಇವೆ. ಇಂತಹ ಪರಿಸ್ಥಿತಿಯಲ್ಲಿ ಇನ್ನು ಕೆಲವು ಆಟಗಾರರು ತಮ್ಮ ವೃತ್ತಿಜೀವನಕ್ಕೆ ಅಂತ್ಯ ಹಾಡಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ