‘ಅರ್ಜುನ್ ನಿಜವಾಗಿಯೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ?’; ಫ್ಯಾನ್ಸ್ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಸಚಿನ್ ತೆಂಡೂಲ್ಕರ್
Sachin Tendulkar Confirms Arjun Tendulkar's Engagement: ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ನಿಶ್ಚಿತಾರ್ಥದ ಸುದ್ದಿ ಇತ್ತೀಚೆಗೆ ಹರಡಿತ್ತು. ಈ ಬಗ್ಗೆ ಅನೇಕ ವದಂತಿಗಳಿದ್ದವು. ಆದರೆ, ಸಚಿನ್ ಅವರೇ ಈ ವಿಷಯವನ್ನು Reddit ನಲ್ಲಿ 'Ask Me Anything' ಸೆಷನ್ನಲ್ಲಿ ಖಚಿತಪಡಿಸಿದ್ದಾರೆ. ಅರ್ಜುನ್ ಅವರು ಸಾನಿಯಾ ಚಂದೋಕ್ ಎಂಬುವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ನಿಶ್ಚಿತಾರ್ಥ ತೀರಾ ಖಾಸಗಿಯಾಗಿ ನಡೆದಿದೆ ಎಂದು ವರದಿಯಾಗಿದೆ.

ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಕೆಲವೇ ದಿನಗಳ ಹಿಂದೆ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಂದೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದಾಗ್ಯೂ ಈ ನಿಶ್ಚಿತಾರ್ಥದ ಬಗ್ಗೆ ಎರಡೂ ಕುಟುಂಬಗಳಿಂದ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಇತ್ತ ಇದು ವದಂತಿ ಎಂತಲೂ ಯಾರೂ ಹೇಳಿರಲಿಲ್ಲ. ಇದೀಗ ಈ ವಿಚಾರದ ಬಗ್ಗೆ ಅರ್ಜುನ್ ತೆಂಡೂಲ್ಕರ್ ಅವರ ತಂದೆ ಸಚಿನ್ ತೆಂಡೂಲ್ಕರ್ ಅವರೇ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿನ್, ಹೌದು, ಅರ್ಜುನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ವಾಸ್ತವವಾಗಿ ಇದೇ ಆಗಸ್ಟ್ 14 ರಂದು, ಅರ್ಜುನ್ ತೆಂಡೂಲ್ಕರ್ ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ವರದಿಯಾಗಿತ್ತು. ವರದಿಗಳಲ್ಲಿ ಅರ್ಜುನ್ ಪ್ರಸಿದ್ಧ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಂದೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದಾಗ್ಯೂ, ಈ ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಯಾವುದೇ ಫೋಟೋಗಳಾಗಲಿ ಅಥವಾ ಅಧಿಕೃತ ಹೇಳಿಕೆಯಾಗಲಿ ಹೊರಬಿದ್ದಿರಲಿಲ್ಲ.
ಅಭಿಮಾನಿಯ ಪ್ರಶ್ನೆಗೆ ಸಚಿನ್ ಉತ್ತರ
ಹೀಗಾಗಿ ಸಚಿನ್ ಮತ್ತು ಅರ್ಜುನ್ ಅಭಿಮಾನಿಗಳ ಮನಸ್ಸಿನಲ್ಲಿ ಈ ಬಗ್ಗೆ ಕುತೂಹಲ ಮೂಡಿತ್ತು. ಇದೀಗ ಆ ಎಲ್ಲಾ ಕುತೂಹಲಕ್ಕೆ ಸಚಿನ್ ಅವರೇ ತೆರೆ ಎಳೆದಿದ್ದಾರೆ. ವಾಸ್ತವವಾಗಿ ಸಾಮಾಜಿಕ ಮಾಧ್ಯಮ ವೇದಿಕೆಯಾದ Reddit.com ನಲ್ಲಿ ‘Ask Me Anything’ ಸೆಷನ್ನಲ್ಲಿ, ಅಭಿಮಾನಿಯೊಬ್ಬರು ಸಚಿನ್ ಬಳಿ ‘ಅರ್ಜುನ್ ನಿಜವಾಗಿಯೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ?’ ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಕಾಮೆಂಟ್‌ನಲ್ಲಿ ತಮ್ಮ ಉತ್ತರವನ್ನು ನೀಡಿರುವ ಸಚಿನ್, ‘ಹೌದು, ಅರ್ಜುನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ’ ಎಂದು ಬರೆದಿದ್ದಾರೆ.
Arjun Tendulkar: ನಿಶ್ಚಿತಾರ್ಥದ ಬೆನ್ನಲ್ಲೇ ಅರ್ಜುನ್ ತೆಂಡೂಲ್ಕರ್ಗೆ ಬಿಗ್ ಶಾಕ್..!
ಸಾನಿಯಾ ಚಾಂದೋಕ್ ಯಾರು?
ವರದಿಗಳ ಪ್ರಕಾರ, ಅರ್ಜುನ್ ಮತ್ತು ಸಾನಿಯಾ ಅವರ ನಿಶ್ಚಿತಾರ್ಥ ತೀರ ಖಾಸಗಿಯಾಗಿ ನಡೆದಿದ್ದು, ಇದರಲ್ಲಿ ಎರಡೂ ಕುಟುಂಬಗಳು ಮತ್ತು ಕೆಲವು ಆಪ್ತರು ಮಾತ್ರ ಹಾಜರಿದ್ದರು. ಈ ನಿಶ್ಚಿತಾರ್ಥಕ್ಕೂ ಮುಂಚೆಯೇ, ಮಾಧ್ಯಮಗಳಿಗೆ ಯಾವುದೇ ರೀತಿಯ ಸುದ್ದಿ ಇರಲಿಲ್ಲ ಮತ್ತು ಅದರ ನಂತರವೂ ಅಧಿಕೃತವಾಗಿ ಏನನ್ನೂ ತಿಳಿಸಲಾಗಿಲ್ಲ. ಅರ್ಜುನ್ ಬಗ್ಗೆ ಹೇಳುವುದಾದರೆ, ಅವರು ಶೀಘ್ರದಲ್ಲೇ ರಣಜಿ ಟ್ರೋಫಿ ಸೀಸನ್ನಲ್ಲಿ ಗೋವಾ ಪರ ಆಡುವುದನ್ನು ಕಾಣಬಹುದು. ಇತ್ತ ಸಾನಿಯಾ ಚಾಂದೋಕ್ ವೃತ್ತಿಯಲ್ಲಿ ಪಶುವೈದ್ಯಕೀಯ ಸಹಾಯಕಿ ಮತ್ತು ಮುಂಬೈನಲ್ಲಿ ತನ್ನದೇ ಆದ ಸಾಕುಪ್ರಾಣಿ ಸ್ಟುಡಿಯೋವನ್ನು ನಡೆಸುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:00 pm, Mon, 25 August 25
