AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನಾಡದ ಅರ್ಜುನ್ ತೆಂಡೂಲ್ಕರ್ ಎಷ್ಟು ಕೋಟಿಯ ಒಡೆಯ ಗೊತ್ತಾ?

Arjun Tendulkar net worth: ಅರ್ಜುನ್ ತೆಂಡೂಲ್ಕರ್ ಅವರು ಮುಂಬೈನಲ್ಲಿ ಸಾನಿಯಾ ಚಂದೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸಾನಿಯಾ ಮುಂಬೈ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಅರ್ಜುನ್ ಉದಯೋನ್ಮುಖ ಕ್ರಿಕೆಟರ್ ಆಗಿದ್ದು, ಐಪಿಎಲ್ ಮತ್ತು ದೇಶೀಯ ಪಂದ್ಯಗಳಲ್ಲಿ ಆಡುತ್ತಿದ್ದಾರೆ. ಸಾನಿಯಾ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಪದವೀಧರರಾಗಿದ್ದಾರೆ.

ಪೃಥ್ವಿಶಂಕರ
|

Updated on: Aug 14, 2025 | 5:38 PM

Share
ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬೈನಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವರದಿಯ ಪ್ರಕಾರ, ಅವರು ಮುಂಬೈ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಂದೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದಾಗ್ಯೂ ಇಲ್ಲಿಯವರೆಗೆ ಎರಡೂ ಕುಟುಂಬಗಳಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

1 / 10
ಆದರೆ ವರದಿಯ ಪ್ರಕಾರ, ಎರಡೂ ಕುಟುಂಬಗಳ ಸಂಬಂಧಿಕರು ಮತ್ತು ಕೆಲವು ಆಪ್ತರು ಈ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಸಧ್ಯದ ಮಾಹಿತಿಯ ಪ್ರಕಾರ ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಈ ಮೊದಲೇ ಪರಸ್ಪರ ಪರಿಚಿತರಾಗಿದ್ದು, ಅರ್ಜುನ್ ಅವರ ಅಕ್ಕ ಸಾರಾ ಅವರೊಂದಿಗೆ ಸಾನಿಯಾ ತೀರ ಆಪ್ತತೆಯಿಂದ ಇರುವಂತಹ ಫೋಟೋಗಳು ಈಗಾಗಲೇ ವೈರಲ್ ಆಗಿವೆ.

2 / 10
ಇನ್ನು ಇವರಿಬ್ಬರ ಬಗ್ಗೆ ಹೇಳುವುದಾದರೆ, ಅರ್ಜುನ್ ತೆಂಡೂಲ್ಕರ್ ಉದಯೋನ್ಮುಖ ಕ್ರಿಕೆಟಿಗನಾಗಿದ್ದು, ದೇಶೀ ಪಂದ್ಯಾವಳಿ ಹಾಗೂ ಐಪಿಎಲ್‌ನಲ್ಲಿ ಆಡಿದ್ದಾರೆ. ಆದಾಗ್ಯೂ ಅವರಿಗೆ ಭಾರತ ತಂಡದಲ್ಲಿ ಇದುವರೆಗೆ ಅವಕಾಶ ಸಿಕ್ಕಿಲ್ಲ. ದೇಶೀ ಪಂದ್ಯಾವಳಿಯಲ್ಲಿ ಗೋವಾ ತಂಡವನ್ನು ಪ್ರತಿನಿಧಿಸುತ್ತಿರುವ ಅರ್ಜುನ್, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ.

3 / 10
ಇತ್ತ ಸಾನಿಯಾ ಚಂದೋಕ್ ಅವರ ಬಗ್ಗೆ ಹೇಳುವುದಾದರೆ.. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ದಾಖಲೆಗಳ ಪ್ರಕಾರ, ಸಾನಿಯಾ ಮುಂಬೈ ಮೂಲದ ಮಿಸ್ಟರ್ ಪಾವ್ಸ್ ಪೆಟ್ ಸ್ಪಾ & ಸ್ಟೋರ್ ಎಲ್‌ಎಲ್‌ಪಿಯಲ್ಲಿ ನಿಯೋಜಿತ ಪಾಲುದಾರೆ ಮತ್ತು ನಿರ್ದೇಶಕಿಯೂ ಆಗಿದ್ದಾರೆ. ಇವರು ಅರ್ಜುನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳತಿಕೂಡ ಹೌದು. ಸಾನಿಯಾ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪದವಿ ಪಡೆದಿದ್ದಾರೆ.

4 / 10
ಪ್ರಸ್ತುತ ವೃತ್ತಿಜೀವನದ ಆರಂಭದ ಹಂತದಲ್ಲಿರುವ 25 ವರ್ಷದ ಅರ್ಜುನ್ ತೆಂಡೂಲ್ಕರ್ ಅವರ ನಿವ್ವಳ ಮೌಲ್ಯ ಎಷ್ಟು ಎಂಬ ಹುಡುಕಾಟ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ವರದಿಗಳ ಪ್ರಕಾರ, ಅರ್ಜುನ್ ತೆಂಡೂಲ್ಕರ್ ಅವರ ಒಟ್ಟು ನಿವ್ವಳ ಮೌಲ್ಯ 22 ಕೋಟಿ ರೂ. ಆಗಿದೆ. ಅರ್ಜುನ್ ದೇಶೀಯ ಕ್ರಿಕೆಟ್‌ ಆಡುವ ಮೂಲಕ ಹಾಗೂ ಐಪಿಎಲ್‌ನಲ್ಲಿ ಆಡುವುದರೊಂದಿಗೆ ಲಕ್ಷಾಂತರ ರೂಪಾಯಿಗಳನ್ನು ಗಳಿಸಿದ್ದಾರೆ.

5 / 10
2021 ರಲ್ಲಿ, ಮುಂಬೈ ಇಂಡಿಯನ್ಸ್ ತಂಡವು ಅರ್ಜುನ್ ಅವರನ್ನು ಅವರ ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿ ತಮ್ಮ ತಂಡದಲ್ಲಿ ಸೇರಿಸಿಕೊಂಡಿತು. ಇದರ ನಂತರ, 2022 ರಲ್ಲಿ, ಮುಂಬೈ ಇಂಡಿಯನ್ಸ್ ಅವರನ್ನು ಮತ್ತೆ 30 ಲಕ್ಷ ರೂ.ಗೆ ಖರೀದಿಸಿತು. ಕಳೆದ 5 ವರ್ಷಗಳಲ್ಲಿ ಅವರು ಐಪಿಎಲ್‌ನಿಂದ ಸುಮಾರು 1.40 ಕೋಟಿ ರೂ. ಸಂಪಾಧಿಸಿದ್ದಾರೆ.

6 / 10
ದೇಶೀಯ ಕ್ರಿಕೆಟ್ ಬಗ್ಗೆ ಹೇಳುವುದಾದರೆ, ಅರ್ಜುನ್ ಗೋವಾ ಪರವಾಗಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭಾಗವಹಿಸಿದ್ದಾರೆ. ಅರ್ಜುನ್ ದೇಶೀಯ ಕ್ರಿಕೆಟ್‌ನಿಂದ ವಾರ್ಷಿಕವಾಗಿ ಸುಮಾರು 10 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ. ಅವರ ವಾರ್ಷಿಕ ಆದಾಯ ಸುಮಾರು 50 ಲಕ್ಷ ರೂಪಾಯಿಗಳಾಗಿದ್ದು, ಅದರಲ್ಲಿ 75-80 ಪ್ರತಿಶತ ಐಪಿಎಲ್‌ನಿಂದ ಮತ್ತು ಉಳಿದ 20-25 ಪ್ರತಿಶತ ದೇಶೀಯ ಕ್ರಿಕೆಟ್‌ನಿಂದ ಬರುತ್ತದೆ.

7 / 10
ಅರ್ಜುನ್ ತನ್ನ ತಂದೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಮುಂಬೈನ ಐಷಾರಾಮಿ ಪ್ರದೇಶದಲ್ಲಿ 6000 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಈ ಮನೆಯಲ್ಲಿ ಹಲವಾರು ಮಹಡಿಗಳು, ಎರಡು ನೆಲಮಾಳಿಗೆಗಳು, ಒಂದು ಟೆರೇಸ್, ಹಚ್ಚ ಹಸಿರಿನ ಉದ್ಯಾನ, ಆಧುನಿಕ ವಾಸದ ಕೋಣೆ ಮತ್ತು ಊಟದ ಪ್ರದೇಶವಿದೆ. ಸಚಿನ್ ಈ ಮನೆಯನ್ನು 2007 ರಲ್ಲಿ ರೂ. 39 ಕೋಟಿಗೆ ಖರೀದಿಸಿದ್ದರು, ಇದು ಇಂದು ಸುಮಾರು ರೂ. 100 ಕೋಟಿ ಮೌಲ್ಯದ್ದಾಗಿದೆ.

8 / 10
ಇದರ ಹೊರತಾಗಿ, ಸಚಿನ್ ತೆಂಡೂಲ್ಕರ್ ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದ ಬಳಿ ಒಂದು ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಸಹ ಹೊಂದಿದ್ದಾರೆ. ಸಚಿನ್ ಅವರ ಇಡೀ ಕುಟುಂಬವು ರಜಾದಿನಗಳನ್ನು ಕಳೆಯಲು ಇಲ್ಲಿಗೆ ಹೆಚ್ಚಾಗಿ ಹೋಗುತ್ತಾರೆ. ಸಚಿನ್ ಅವರ ಕ್ರಿಕೆಟ್ ಅಕಾಡೆಮಿ ಕೂಡ ಈ ಪ್ರದೇಶದಲ್ಲಿದ್ದು, ಅಲ್ಲಿ ಅರ್ಜುನ್ ಅಭ್ಯಾಸ ಮಾಡುತ್ತಾರೆ.

9 / 10
ಅರ್ಜುನ್ ತೆಂಡೂಲ್ಕರ್ ಕಾರುಗಳೆಂದರೆ ತುಂಬಾ ಇಷ್ಟ. ಅವರ ಮತ್ತು ಅವರ ತಂದೆ ಸಚಿನ್ ತೆಂಡೂಲ್ಕರ್ ಅವರ ಸಂಗ್ರಹದಲ್ಲಿ ಅನೇಕ ಐಷಾರಾಮಿ ಕಾರುಗಳಿವೆ. ಅರ್ಜುನ್ ಮತ್ತು ಸಚಿನ್ ತೆಂಡೂಲ್ಕರ್ ಬಳಿ ಕಿಯಾ ಕ್ಯಾರೆನ್ಸ್, ಪೋರ್ಷೆ ಕಯೆನ್ನೆ, ಬಿಎಂಡಬ್ಲ್ಯು ಐ8, ನಿಸ್ಸಾನ್ ಜಿಟಿಆರ್, ಫೆರಾರಿ 360 ಮೊಡೆನಾ, ಮರ್ಸಿಡಿಸ್-ಎಎಂಜಿ ಸಿ36 ಸೇರಿದಂತೆ ಹಲವು ದುಬಾರಿ ಕಾರುಗಳಿವೆ.

10 / 10