ಐಪಿಎಲ್ನ 49 ನೇ ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದ್ದ, ರೋಹಿತ್ ಶರ್ಮಾ ನೇತೃತ್ವದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿದೆ.ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ನಷ್ಟಕ್ಕೆ ಕೇವಲ 139 ರನ್ ಗಳಿಸಿ ಸುಲಭ ಸ್ಕೋರ್ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಚೆನ್ನೈ ಆರಂಭಿಕರ ಉತ್ತಮ ಆಟದಿಂದಾಗಿ ಕೇವಲ 18ನೇ ಓವರ್ನಲ್ಲೇ ಗೆಲುವಿನ ದಡ ಸೇರಿತು.
18ನೇ ಓವರ್ನ 2ನೇ ಎಸೆತದಲ್ಲಿ ದುಬೆ ಸಿಕ್ಸರ್ ಬಾರಿಸಿದರೆ, ಆ ಬಳಿಕ ಬಂದ ಧೋನಿ ಸಿಂಗಲ್ ಬಾರಿಸಿ ಮುಂಬೈ ವಿರುದ್ಧ ಸುಲಭ ಜಯ ತಂದುಕೊಟ್ಟರು.
42 ಎಸೆತಗಳಲ್ಲಿ 44 ರನ್ ಬಾರಿಸಿದ್ದ ಕಾನ್ವೇ 17ನೇ ಓವರ್ನ 3ನೇ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ಚೆನ್ನೈ ಗೆಲವಿಗೆ 10 ರನ್ ಬೇಕಿದೆ.
14ನೇ ಓವರ್ನಲ್ಲಿ ದುಬೆ 2 ಸಿಕ್ಸರ್ ಹೊಡೆದರು. ಈ ಎರಡೂ ಸಿಕ್ಸರ್ಗಳು ಮಿಡ್ ವಿಕೆಟ್ ಮೇಲೆ ಬಂದವು.
13ನೇ ಓವರ್ನ ಕೊನೆಯ ಎಸೆತದಲ್ಲಿ ರಾಯುಡು ಕ್ಯಾಚಿತ್ತು ಔಟಾದರು.
13ನೇ ಓವರ್ನ 4ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಾಯುಡು ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಚೆನ್ನೈ 10 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ಗೆ 84 ರನ್ ಗಳಿಸಿದೆ. ಗೆಲುವಿಗೆ 60 ಎಸೆತಗಳಲ್ಲಿ 56 ರನ್ ಅಗತ್ಯವಿದೆ. ಅಂಬಟಿ ರಾಯುಡು ಮತ್ತು ಡೆವೊನ್ ಕಾನ್ವೇ ಕ್ರೀಸ್‌ನಲ್ಲಿದ್ದಾರೆ.
9ನೇ ಓವರ್ನ ಕೊನೆಯ ಎಸೆತದಲ್ಲಿ ರಹಾನೆ ಎಲ್ಬಿ ಬಲೆಗೆ ಬಿದ್ದರು. ಚೆನ್ನೈ 2ನೇ ವಿಕೆಟ್ ಕಳೆದುಕೊಂಡಿದೆ.
ಚಾವ್ಲಾ ಬೌಲ್ ಮಾಡಿದ 9ನೇ ಓವರ್ನ 2ನೇ ಎಸೆತದಲ್ಲೇ ರಹಾನೆ ಲಾಂಗ್ ಆನ್ನಲ್ಲಿ ಸಿಕ್ಸರ್ ಬಾರಿಸಿದರು.
ರಾಘವ್ ಬೌಲ್ ಮಾಡಿದ 8ನೇ ಓವರ್ನ 2ನೇ ಎಸೆತವನ್ನು ಎಕ್ಸ್ಟ್ರಾ ಕವರ್ನಲ್ಲಿ ಕಾನ್ವೇ ಬೌಂಡರಿಗಟ್ಟಿದರು.
6 ಓವರ್‌ಗಳ ಈ ಪವರ್ ಪ್ಲೇಯಲ್ಲಿ ಚೆನ್ನೈ ತಂಡ 1 ವಿಕೆಟ್ ಕಳೆದುಕೊಂಡು 54 ರನ್ ಕಲೆಹಾಕಿದೆ. ಕಾನ್ವೇ ಹಾಗೂ ರಹಾನೆ ಬ್ಯಾಟಿಂಗ್ನಲ್ಲಿದ್ದಾರೆ.
ಚಾವ್ಲಾ ಬೌಲ್ ಮಾಡಿದ 5ನೇ ಓವರ್ನ ಮೊದಲ ಎಸೆತದಲ್ಲೇ ರುತುರಾಜ್ ಕ್ಯಾಚಿತ್ತು ಔಟಾದರು.
4ನೇ ಓವರ್ ಬೌಲ್ ಮಾಡಿದ ಆರ್ಚರ್ ಕೂಡ ಕೊಂಚ ದುಬಾರಿಯಾದರು. ಈ ಓವರ್ನಲ್ಲಿ ಕಾನ್ವೇ 2 ಬೌಂಡರಿ ಹೊಡೆದರು.
3ನೇ ಓವರ್ ಬೌಲ್ ಮಾಡಿದ ಅರ್ಷದ್ ಅವರ ಓವರ್ನಲ್ಲಿ ಬರೋಬ್ಬರಿ 20 ರನ್ ಬಂದವು. ಈ ಓವರ್ನಲ್ಲಿ ರುತುರಾಜ್ 2 ಸಿಕ್ಸರ್ ಹಾಗೂ 2 ಬೌಂಡರಿ ಹೊಡೆದರು.
ಗ್ರೀನ್ ಬೌಲ್ ಮಾಡಿದ ಮೊದಲ ಓವರ್ನಲ್ಲೇ ರುತುರಾಜ್ 2 ಬೌಂಡರಿ ಹೊಡೆದರು.
ಚೆನ್ನೈ ಭಿಗಿ ಬೌಲಿಂಗ್ ಮುಂದೆ ಮಂಕಾದ ಮುಂಬೈ ನಿಗಧಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 139 ರನ್ ಕಲೆಹಾಕಿದೆ.
20ನೇ ಓವರ್ನ ಮೊದಲ ಎಸೆತದಲ್ಲಿ ಅರ್ಷದ್ ಕ್ಯಾಚಿತ್ತು ಔಟಾದರು.
19ನೇ ಓವರ್ನ ಕೊನೆಯ 2 ಎಸೆತಗಳಲ್ಲಿ ಸ್ಟಬ್ಸ್ ಬೌಂಡರಿ ಹೊಡೆದರು.
19ನೇ ಓವರ್ನ 3ನೇ ಎಸೆತದಲ್ಲಿ ದೇಶಪಾಂಡೆ, ಟಿಮ್ ಡೇವಿಡ್ ವಿಕೆಟ್ ಉರುಳಿಸಿದರು.
ಪತಿರಾನ ಬೌಲ್ ಮಾಡಿದ 18ನೇ ಓವರ್ನ 3ನೇ ಎಸೆತದಲ್ಲಿ ಅರ್ಧಶತಕ ಬಾರಿಸಿದ್ದ ವದೇರಾ ಕ್ಲೀನ್ ಬೌಲ್ಡ್ ಆದರು.
16ನೇ ಓವರ್ನ ಮೊದಲ ಎಸೆತದಲ್ಲಿ ಡಬಲ್ ರನ್ ಪಡೆದ ವದೇರಾ ಐಪಿಎಲ್ನ ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ. ಆ ನಂತರದ ಎಸೆತದಲ್ಲಿ ವದೇರಾ ಬ್ಯಾಟ್ನಿಂದ ಬೌಂಡರಿ ಕೂಡ ಬಂತು. ಈ ಓವರ್ನಲ್ಲಿ 3 ಬೌಂಡರಿ ಬಂದವು.
16ನೇ ಓವರ್ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ವದೇರಾ ಮುಂಬೈ ಮೊತ್ತವನ್ನು 100ರ ಗಡಿ ದಾಟಿಸಿದರು. ಹಾಗೆಯೇ ಓವರ್ನ 3ನೇ ಎಸೆತದಲ್ಲಿ ಸ್ಟಬ್ಸ್ ಬೌಂಡರಿ ಕೂಡ ಹೊಡೆದರು.
ತೀಕ್ಷಣ ಎಸೆದ 14ನೇ ಓವರ್ನ 4ನೇ ಎಸೆತವನ್ನು ವದೇರಾ ಶಾರ್ಟ್ ಫೈನ್ ಲೆಗ್ನಲ್ಲಿ ಬೌಂಡರಿಗಟ್ಟಿದರು.
11ನೇ ಓವರ್ನ 3ನೇ ಎಸೆತದಲ್ಲಿ ಜಡೇಜಾ, ಡೇಂಜರಸ್ ಬ್ಯಾಟರ್ ಸೂರ್ಯರನ್ನು ಕ್ಲೀನ್ ಬೌಲ್ಡ್ ಮಾಡಿದರು. ಮುಂಬೈ 71/4
ಮುಂಬೈ ಇನ್ನಿಂಗ್ಸ್ನ 10 ಓವರ್ ಮುಗಿದಿದ್ದು ಈ 10 ಓವರ್‌ಗಳಲ್ಲಿ ಮುಂಬೈ 3 ವಿಕೆಟ್ ಕಳೆದುಕೊಂಡು 64 ರನ್ ಬಾರಿಸಿದೆ. ತೀಕ್ಷಣ ಎಸೆದ ಈ ಓವರ್ನಲ್ಲಿ ಸೂರ್ಯ ಬೌಂಡರಿ ಹೊಡೆದರು.
8ನೇ ಓವರ್ ಬೌಲ್ ಮಾಡಿದ ಮೋಯಿನ್ ಅಲಿ 2 ಬೌಂಡರಿ ಸೇರಿದಂತೆ 11 ರನ್ ಬಿಟ್ಟುಕೊಟ್ಟರು. ಇದೇ ಓವರ್ನಲ್ಲಿ ಮುಂಬೈ 50 ರನ್ ಸಹ ಪುರ್ನಗೊಳಿಸಿತು.
ಪವರ್ ಪ್ಲೇಯ ಕೊನೆಯ ಓವರ್ನ 4ನೇ ಎಸೆತದಲ್ಲಿ ಸೂರ್ಯ ಬ್ಯಾಕ್ವರ್ಡ್ ಸ್ಕ್ವೇರ್ ಲೆಗ್ನಲ್ಲಿ ಬೌಂಡರಿ ಹೊಡೆದರು.
6 ಓವರ್ ಅಂತ್ಯಕ್ಕೆ 33/3
ಚಹರ್ ಬೌಲ್ ಮಾಡಿದ 5ನೇ ಓವರ್ನ 2ನೇ ಎಸೆತವನ್ನು ವದೇರಾ ಡೀಪ್ ಮಿಡ್ ವಿಕೆಟ್ ಮೇಲೆ ಬೌಂಡರಿ ಹೊಡೆದರು.
ಸತತ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ರೋಹಿತ್ ಈ ಪಂದ್ಯದಲ್ಲೂ ಸೊನ್ನೆ ಸುತ್ತಿ ವಿಕೆಟ್ ಒಪ್ಪಿಸಿದ್ದಾರೆ. ಚಹರ್ ಬೌಲ್ ಮಾಡಿದ 3ನೇ ಓವರ್ನಲ್ಲಿ 2 ವಿಕೆಟ್ ಉರುಳಿಸಿದರು.
2ನೇ ಓವರ್ನಲ್ಲಿ ಗ್ರೀನ್ ಔಟಾದರೆ, 3ನೇ ಓವರ್ನ 2ನೇ ಎಸೆತದಲ್ಲಿ ಕಿಶನ್ ಮಿಡ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು. ಚಹರ್ ಈ ವಿಕೆಟ್ ಉರುಳಿಸಿದರು.
ದೇಶಪಾಂಡೆ ಬೌಲ್ ಮಾಡಿದ 2ನೇ ಓವರ್ನ 4ನೇ ಎಸೆತದಲ್ಲಿ ಗ್ರೀನ್ ಬೌಲ್ಡ್ ಆದರು. ಮುಂಬೈ 13/1
ಮುಂಬೈ ಇನ್ನಿಂಗ್ಸ್ ಆರಂಭವಾಗಿದ್ದು, ಚಹರ್ ಬೌಲ್ ಮಾಡಿದ ಮೊದಲ ಓವರ್ನಲ್ಲಿ ಕಿಶನ್ ಡೀಪ್ ಸ್ಕ್ವೇರ್ ಲೆಗ್ನಲ್ಲಿ ಬೌಂಡರಿ ಹೊಡೆದರೆ, ಕೊನೆಯ ಎಸೆತದಲ್ಲಿ ಗ್ರೀನ್ ಕೂಡ ಬೌಂಡರಿ ಹೊಡೆದರು.
ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ (ನಾಯಕ), ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮತಿಶಾ ಪತಿರಾನ ಮತ್ತು ಮಹೇಶ್ ತೀಕ್ಷಣ.
ತಿಲಕ್ ವರ್ಮಾ ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಪರ ಆಡುತ್ತಿಲ್ಲ. ಟಾಸ್ ಬಳಿಕ ಈ ಬಗ್ಗೆ ಮಾತನಾಡಿದ ಮುಂಬೈ ತಂಡದ ನಾಯಕ ರೋಹಿತ್, ಗಾಯದ ಸಮಸ್ಯೆಯಿಂದ ತಿಲಕ್ ಇಂದು ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವದೇರಾ, ಟ್ರಿಸ್ಟಾನ್ ಸ್ಟಬ್ಸ್, ಅರ್ಷದ್ ಖಾನ್, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್.
ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 3:01 pm, Sat, 6 May 23