CSK vs RR Highlights IPL 2023: ಧೋನಿ ಏಕಾಂಗಿ ಹೋರಾಟ ವ್ಯರ್ಥ; ಚೆನ್ನೈಗೆ ರೋಚಕ ಸೋಲು

|

Updated on: Apr 12, 2023 | 11:35 PM

Chennai Super Kings vs Rajasthan Royals IPL 2023 Highlights in Kannada: ಚೆನ್ನೈ ಚೆಪಾಕ್ ಮೈದಾನದಲ್ಲಿ ನಡೆದ 17ನೇ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ತಂಡವನ್ನು 3 ರನ್​ಗಳಿಂದ ಸೋಲಿಸಿದ ರಾಜಸ್ಥಾನ್ ತಂಡ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ.

CSK vs RR Highlights IPL 2023: ಧೋನಿ ಏಕಾಂಗಿ ಹೋರಾಟ ವ್ಯರ್ಥ; ಚೆನ್ನೈಗೆ ರೋಚಕ ಸೋಲು
ಚೆನ್ನೈ- ರಾಜಸ್ಥಾನ್ ಮುಖಾಮುಖಿ

ಚೆನ್ನೈ ಚೆಪಾಕ್ ಮೈದಾನದಲ್ಲಿ ನಡೆದ 17ನೇ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ತಂಡವನ್ನು 3 ರನ್​ಗಳಿಂದ ಸೋಲಿಸಿದ ರಾಜಸ್ಥಾನ್ ತಂಡ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. 200ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವಹಿಸಿದ್ದ ಧೋನಿಗೆ ಸೋಲಿನ ಕಹಿ ಎದುರಾಗಿದೆ. ವಾಸ್ತವವಾಗಿ ಪಂದ್ಯ ಆರಂಭಕ್ಕೂ ಮುನ್ನ ಧೋನಿಗೆ ಗೆಲುವಿನ ಉಡುಗೊರೆ ನೀಡುವುದಾಗಿ ಜಡೇಜಾ ಹೇಳಿಕೊಂಡಿದ್ದರು. ಆದರೆ ರಾಜಸ್ಥಾನ್ ತಂಡದ ತ್ರಿವಳಿ ಸ್ಪಿನ್ನರ್​ಗಳ ದಾಳಿಗೆ ನಲುಗಿದ ಚೆನ್ನೈ ಸುಲಭವಾಗಿ ರನ್​ ಗಳಿಸಲು ಸಾಧ್ಯವಾಗಲಿಲ್ಲ. ಕೊನೆಯ ಹಂತದಲ್ಲಿ ಬ್ಯಾಟಿಂಗ್​ಗೆ ಬಂದ ಧೋನಿ 17 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ ಅಜೇಯ 35 ರನ್ ಸಿಡಿಸಿದರಾದರೂ, ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.

LIVE NEWS & UPDATES

The liveblog has ended.
  • 12 Apr 2023 11:34 PM (IST)

    ಕೊನೆಯ ಓವರ್‌ನ ರೋಚಕತೆ

    ಕೊನೆಯ ಓವರ್ ತುಂಬಾ ರೋಚಕವಾಗಿತ್ತು. ಈ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 21 ರನ್‌ಗಳ ಅಗತ್ಯವಿತ್ತು. ಸಂದೀಪ್ ಶರ್ಮಾ ರಾಜಸ್ಥಾನ ಪರ ಈ ಓವರ್ ಎಸೆದರು. ಮೊದಲು ಎರಡು ಎಸೆತಗಳನ್ನು ವೈಡ್ ಎಸೆದ ಸಂದೀಪ್, ನಂತರ ಧೋನಿ ಎರಡನೇ, ಮೂರನೇ ಎಸೆತದಲ್ಲಿ ಎರಡು ಸಿಕ್ಸರ್ ಬಾರಿಸಿದರು. ಇದರ ನಂತರ, ಸಂದೀಪ್ ಉತ್ತಮ ಪುನರಾಗಮನವನ್ನು ಮಾಡಿದ, ಮುಂದಿನ ಮೂರು ಎಸೆತಗಳಲ್ಲಿ ಕೇವಲ ಮೂರು ರನ್ ನೀಡಿದರು.

  • 12 Apr 2023 11:33 PM (IST)

    ಚೆನ್ನೈಗೆ ಸೋಲು

    ಕೊನೆಯ ಓವರ್‌ನಲ್ಲಿ ಚೆನ್ನೈ 21 ರನ್ ಗಳಿಸಬೇಕಿತ್ತು. ಆದರೆ ಈ ರನ್ ಗಳಿಸಲು ಚೆನ್ನೈಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ರಾಜಸ್ಥಾನ ಮೂರು ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. 2008ರ ನಂತರ ಚೆನ್ನೈನಲ್ಲಿ ರಾಜಸ್ಥಾನಕ್ಕೆ ಇದು ಮೊದಲ ಗೆಲುವು.

  • 12 Apr 2023 11:12 PM (IST)

    ಜಡೇಜಾ ಸಿಕ್ಸರ್

    19ನೇ ಓವರ್​ನ 3ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಜಡೇಜಾ 4 ಮತ್ತು 6ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಕೊನೆಯ ಒವರ್​ನಲ್ಲಿ ಚೆನ್ನೈಗೆ 21 ರನ್ ಬೇಕು

  • 12 Apr 2023 11:05 PM (IST)

    ಧೋನಿ ಸಿಕ್ಸರ್

    18ನೇ ಓವರ್​ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಧೋನಿ, 4ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಚೆನ್ನೈಗೆ 12 ಎಸೆತಗಳಲ್ಲಿ 40 ರನ್ ಬೇಕು

  • 12 Apr 2023 11:01 PM (IST)

    ಕ್ರೀಸ್​ನಲ್ಲಿ ಧೋನಿ

    ಕಾನ್ವೇ ವಿಕೆಟ್ ಬಳಿಕ ಧೋನಿ ಬ್ಯಾಟಿಂಗ್​ಗೆ ಬಂದಿದ್ದಾರೆ. ಇನ್ನು 18 ಎಸೆತಗಳಲ್ಲಿ ಚೆನ್ನೈಗೆ 53 ರನ್ ಬೇಕು. 2 ಓವರ್​ಗಳಲ್ಲಿ ಯಾವುದೇ ಬೌಂಡರಿ ಬಂದಿಲ್ಲ.

  • 12 Apr 2023 10:51 PM (IST)

    ಕಾನ್ವೇ ಅರ್ಧಶತಕ, ಔಟ್

    37 ಎಸೆತಗಳಲ್ಲಿ 50 ರನ್ ಬಾರಿಸಿ ತಂಡದ ಪರ ಏಕಾಂಗಿ ಹೋರಾಟ ನಡೆಸುತ್ತಿದ್ದ ಕಾನ್ವೇ, ಚಹಲ್ ಎಸೆದ 15ನೇ ಓವರ್ ಕೊನೆಯ ಎಸೆತದಲ್ಲಿ ಕ್ಯಾಚಿತ್ತು ಔಟಾದರು.

  • 12 Apr 2023 10:46 PM (IST)

    ರಾಯುಡು ಕೂಡ ಔಟ್

    ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಿಸಂಡಾ ಮಗಾಳಾ ಬದಲಿಯಾಗಿ ಬಂದಿದ್ದ ರಾಯುಡು ಕೂಡ 15ನೇ ಓವರ್​ನ ಮೊದಲ ಎಸೆತದಲ್ಲಿ ಕ್ಯಾಚಿತ್ತು ಔಟಾದರು.

  • 12 Apr 2023 10:45 PM (IST)

    ಅಲಿ ಔಟ್

    ಚೆನ್ನೈ ತಂಡದ ಬಿಗ್ ವಿಕೆಟ್ ಪತನವಾಗಿದೆ. ಸ್ಫೋಟಕ ಬ್ಯಾಟರ್ ಮೊಯಿನ್ ಅಲಿ ಝಂಪಾ ಎಸೆತದಲ್ಲಿ ಡೀಪ್ ಸ್ಕ್ವೈರ್​ನಲ್ಲಿ ಕ್ಯಾಚಿತ್ತು ಔಟಾಗಿದ್ದಾರೆ.

  • 12 Apr 2023 10:35 PM (IST)

    ದುಬೆ ಔಟ್

    12ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಶಿವಂ ದುಬೆ ಔಟಾದರು. ಅಶ್ವಿನ್ ಅವರ ವಿಕೆಟ್ ಪಡೆದರು.

  • 12 Apr 2023 10:34 PM (IST)

    10 ಓವರ್‌ ಮುಕ್ತಾಯ

    ಚೆನ್ನೈ ಇನಿಂಗ್ಸ್‌ನ 10 ಓವರ್‌ಗಳು ಮುಗಿದಿವೆ. ಈ 10 ಓವರ್‌ಗಳಲ್ಲಿ ಚೆನ್ನೈ 80 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿದೆ. ಈ ಸಮಯದಲ್ಲಿ ಶಿವಂ ದುಬೆ ಮತ್ತು ಡೆವೊನ್ ಕಾನ್ವೇ ಮೈದಾನದಲ್ಲಿದ್ದು, ಚೆನ್ನೈ ಗೆಲುವಿಗೆ 96 ರನ್‌ಗಳ ಅಗತ್ಯವಿದೆ.

  • 12 Apr 2023 10:20 PM (IST)

    ರಹಾನೆ ಔಟ್

    ಅಶ್ವಿನ್ ಎಸೆದ 10ನೇ ಓವರ್​ನ 3ನೇ ಎಸೆತದಲ್ಲಿ ರಹಾನೆ ಎಲ್​ಬಿ ಬಲೆಗೆ ಬಿದ್ದರು.

  • 12 Apr 2023 10:17 PM (IST)

    9ನೇ ಓವರ್​ನಲ್ಲಿ 16 ರನ್

    ಝಂಪಾ ಎಸೆದ 9ನೇ ಓವರ್​ನಲ್ಲಿ ಸಿಎಸ್​ಕೆ 16 ರನ್ ಕಲೆ ಹಾಕಿತು. ಈ ಓವರ್​ನ 5ನೇ ಎಸೆತದಲ್ಲಿ ರಹಾನೆ ಬೌಂಡರಿ ಕೂಡ ಬಾರಿಸಿದರು.

  • 12 Apr 2023 10:08 PM (IST)

    ಅರ್ಧಶತಕದ ಜೊತೆಯಾಟ

    8ನೇ ಓವರ್​ನಲ್ಲಿ ಒಟ್ಟು 9 ರನ್ ಬಂದವು. ಇದರೊಂದಿಗೆ ರಹಾನೆ ಹಾಗೂ ಕಾನ್ವೇ ಅವರ ಜೊತೆಯಾಟ ಅರ್ಧಶತಕ ದಾಟಿದೆ. ಈ ಓವರ್​ನಲ್ಲಿ ಕಾನ್ವೇ 1 ಬೌಂಡರಿ ಕೂಡ ಬಾರಿಸಿದರು.

  • 12 Apr 2023 09:57 PM (IST)

    ಪವರ್ ಪ್ಲೇ ಅಂತ್ಯ

    ಚೆನ್ನೈ ಇನ್ನಿಂಗ್ಸ್​ನ 6 ಓವರ್​ ಮುಗಿದಿದ್ದು, ಅಶ್ವಿನ್ ಎಸೆದ ಈ ಓವರ್​ನಲ್ಲಿ ರಹಾನೆ ಭರ್ಜರಿ ಸಿಕ್ಸರ್ ಬಾರಿಸಿದರು. 6 ಓವರ್​ಗಳ ಅಂತ್ಯಕ್ಕೆ ಚೆನ್ನೈ 1 ವಿಕೆಟ್ ಕಳೆದುಕೊಂಡು 45 ರನ್ ಬಾರಿಸಿದೆ.

  • 12 Apr 2023 09:53 PM (IST)

    ಕಾನ್ವೇ ಬೌಂಡರಿ

    ಝಂಪಾ ಎಸೆದ 5ನೇ ಓವರ್​ನಲ್ಲೂ ಕಾನ್ವೇ 2 ಬೌಂಡರಿ ಬಾರಿಸಿದರು. 5 ಓವರ್ ಅಂತ್ಯಕ್ಕೆ ಚೆನ್ನೈ 35/1

  • 12 Apr 2023 09:50 PM (IST)

    Karnataka Election Live: ಜೆಡಿಎಸ್​ನತ್ತ ಮುಖ ಮಾಡಿದ ಸವಿತಾಬಾಯಿ ಮಲ್ಲೇಶ್ ನಾಯ್ಕ್​

    ಕಾಂಗ್ರೆಸ್​ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಸವಿತಾಬಾಯಿ ಮಲ್ಲೇಶ್ ನಾಯ್ಕ್​ ಜೆಡಿಎಸ್​ ಸೇರಲು ನಿರ್ಧಾರ ಮಾಡಿದ್ದಾರೆ. ಇವರು ದಾವಣಗೆರೆ ಜಿಲ್ಲೆ ಮಾಯಕೊಂಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳೆದ ಹಲವು ದಿನಗಳಿಂದ ಕ್ಷೇತ್ರದಲ್ಲಿ ನಿರಂತರವಾಗಿ ಸಂಚರಿಸುತ್ತಿದ್ದರು. 2018ರಲ್ಲಿ ಸೋತಿದ್ದ ಬಸವಂತಪ್ಪಗೆ ಕಾಂಗ್ರೆಸ್​ ಮತ್ತೆ ಟಿಕೆಟ್ ಘೋಷಿಸಿದೆ.

  • 12 Apr 2023 09:49 PM (IST)

    ರಹಾನೆ ಬೌಂಡರಿ

    ಹೋಲ್ಡರ್ ಎಸೆದ 4ನೇ ಓವರ್​ನ 4ನೇ ಎಸೆತವನ್ನು ಬೌಂಡರಿಗಟ್ಟಿದರೆ, 6ನೇ ಎಸೆತವನ್ನು ಕಾನ್ವೇ ಬೌಂಡರಿ ಬಾರಿಸಿದರು.

  • 12 Apr 2023 09:40 PM (IST)

    ರುತುರಾಜ್ ಔಟ್

    3ನೇ ಓವರ್ ಎಸೆಯಲು ಬಂದ ಸಂದೀಪ್ ಶರ್ಮಾ ಬಿಗ್ ವಿಕೆಟ್ ಪಡೆದಿದ್ದಾರೆ. ಚೆನ್ನೈ ತಂಡದ ಪ್ರಮುಖ ಆಟಗಾರ ರುತುರಾಜ್​ರನ್ನು ಸಂದೀಪ್ ಔಟ್ ಮಾಡಿದ್ದಾರೆ.

  • 12 Apr 2023 09:32 PM (IST)

    ಚೆನ್ನೈ ಬ್ಯಾಟಿಂಗ್ ಆರಂಭ

    ಚೆನ್ನೈ ಬ್ಯಾಟಿಂಗ್ ಆರಂಭವಾಗಿದ್ದು, ಕಾನ್ವೇ ಹಾಗೂ ರುತುರಾಜ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಮೊದಲ ಓವರ್​ನಲ್ಲಿ ಬೌಂಡರಿ ಸೇರಿದಂತೆ 7 ರನ್ ಬಂದವು.

  • 12 Apr 2023 09:23 PM (IST)

    ಚೆನ್ನೈಗೆ 175 ರನ್ ಟಾರ್ಗೆಟ್

    ರಾಜಸ್ಥಾನದ ಇನಿಂಗ್ಸ್‌ನ 20 ಓವರ್‌ಗಳು ಪೂರ್ಣಗೊಂಡಿದ್ದು, 8 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿದೆ. ಕೊನೆಯ ಓವರ್‌ನಲ್ಲಿ ತುಷಾರ್ ದೇಶಪಾಂಡೆ ಕೇವಲ 8 ರನ್ ನೀಡಿ 2 ವಿಕೆಟ್ ಉರುಳಿಸಿದರು. ಮೊದಲು ಜೇಸನ್ ಹೋಲ್ಡರ್ ಬೌಂಡರಿಯಲ್ಲಿ ಕ್ಯಾಚ್ ನೀಡಿದರೆ, ನಂತರ ಕೊನೆಯ ಎಸೆತದಲ್ಲಿ ಆಡಮ್ ಝಂಪಾ ರನೌಟ್ ಆದರು. ಚೆನ್ನೈ ಪರ ಜಡೇಜಾ, ತುಷಾರ್ ದೇಶಪಾಂಡೆ ಮತ್ತು ಆಕಾಶ್ ಸಿಂಗ್ ತಲಾ 2 ವಿಕೆಟ್ ಪಡೆದರು.

  • 12 Apr 2023 09:10 PM (IST)

    ಧ್ರುವ್ ಔಟ್

    19ನೇ ಓವರ್‌ನ ಕೊನೆಯ ಎಸೆತದಲ್ಲಿ ರಾಜಸ್ಥಾನ ಆರನೇ ವಿಕೆಟ್ ಕಳೆದುಕೊಂಡಿತು. ಆಕಾಶ್ ಸಿಂಗ್ ಅವರ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಧ್ರುವ್ ಜುರೈಲ್ ಸಿಕ್ಸರ್ ಬಾರಿಸಲು ಯತ್ನಿಸಿ ಔಟಾದರು.

  • 12 Apr 2023 08:58 PM (IST)

    ಹೆಟ್ಮಾಯಿರ್ ಸಿಕ್ಸ್

    17ನೇ ಓವರ್​ನ 5ನೇ ಎಸೆತವನ್ನು ಹೆಟ್ಮಾಯಿರ್ ಲಾಂಗ್ ಆಫ್​ನಲ್ಲಿ ಸಿಕ್ಸರ್ ಬಾರಿಸಿದರು. ಹಾಗೆಯೇ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು.

  • 12 Apr 2023 08:53 PM (IST)

    ಬಟ್ಲರ್ ಔಟ್

    ಅರ್ಧಶತಕ ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಬಟ್ಲರ್ ಅಲಿ ಎಸೆದ 16ನೇ ಓವರ್​ನ ಮೊದಲ ಎಸೆತದಲ್ಲಿ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರು.

  • 12 Apr 2023 08:47 PM (IST)

    ಬಟ್ಲರ್ ಅರ್ಧಶತಕ

    16ನೇ ಓವರ್​ನ ಮೊದಲ ಎಸೆತದಲ್ಲಿ ಡಬಲ್ ಕದ್ದ ಬಟ್ಲರ್ ತಮ್ಮ ಅರ್ಧಶತಕ ಪೂರೈಸಿದರು.ಬಟ್ಲರ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

  • 12 Apr 2023 08:45 PM (IST)

    ಅಶ್ವಿನ್ ಔಟ್

    15ನೇ ಓವರ್​ನಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿದ ಅಶ್ವಿನ್, ಕೊನೆಯ ಎಸೆತದಲ್ಲಿ ಕ್ಯಾಚಿತ್ತು ಔಟಾದರು.

  • 12 Apr 2023 08:38 PM (IST)

    ಕೊನೆಗೂ ಬೌಂಡರಿ

    14ನೇ ಓವರ್​ನ 3ನೇ ಎಸೆತದಲ್ಲಿ ಅಶ್ವಿನ್ ಬೌಂಡರಿ ಬಾರಿಸಿದರು.

  • 12 Apr 2023 08:33 PM (IST)

    ರಾಜಸ್ಥಾನ್ ಶತಕ ಪೂರ್ಣ

    12ನೇ ಓವರ್​ನ 3ನೇ ಎಸೆತದಲ್ಲಿ ಡಬಲ್ ಕದ್ದ ಅಶ್ವಿನ್, ರಾಜಸ್ಥಾನ್ ತಂಡದ ಶತಕ ಪೂರ್ಣಗೊಳಿಸಿದರು. ಸದ್ಯ ರಾಜಸ್ಥಾನ್ ಸಿಂಗಲ್ ಮೊರೆ ಹೋಗಿದ್ದು, ಸಂಜು ವಿಕೆಟ್ ಬಳಿಕ 13ನೇ ಓವರ್​ವರೆಗೂ ಯಾವುದೇ ಬೌಂಡರಿ ಬಂದಿಲ್ಲ.

  • 12 Apr 2023 08:24 PM (IST)

    10 ಓವರ್ ಆಟ ಅಂತ್ಯ

    ರಾಜಸ್ಥಾನ್ ತಂಡ 10 ಓವರ್​ಗಳ ಆಟ ಮುಗಿಸಿದ್ದು, ಇದರಲ್ಲಿ 3 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿದೆ. ಬಟ್ಲರ್ ಮತ್ತು ಅಶ್ವಿನ್ ಬ್ಯಾಟಿಂಗ್​ನಲ್ಲಿದ್ದಾರೆ.

  • 12 Apr 2023 08:17 PM (IST)

    3ನೇ ವಿಕೆಟ್ ಕೂಡ ಪತನ

    ಪಡಿಕಲ್ ವಿಕೆಟ್ ಬಳಿಕ ಬಂದಿದ್ದ ನಾಯಕ ಸಂಜು ಸ್ಯಾಮ್ಸನ್ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ತೆರಳಿದ್ದಾರೆ.

  • 12 Apr 2023 08:11 PM (IST)

    ಪಡಿಕಲ್ ಔಟ್

    9ನೇ ಓವರ್​ನ 3ನೇ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಪಡಿಕಲ್ ಡೀಪ್​ನಲ್ಲಿ ಕಾನ್ವೇಗೆ ಕ್ಯಾಚಿತ್ತು ಔಟಾದರು.

  • 12 Apr 2023 08:08 PM (IST)

    ಬಟ್ಲರ್ ಬ್ಯಾಕ್​ ಟು ಬ್ಯಾಕ್ ಸಿಕ್ಸ್

    8ನೇ ಓವರ್ ಎಸೆಯಲು ಬಂದ ಅಲಿ ಅವರ 5 ಮತ್ತು 6ನೇ ಎಸೆತದಲ್ಲಿ ಬಟ್ಲರ್ ಡೀಪ್ ಮಿಡ್ ವಿಕೆಟ್ ಮೇಲೆ ಭರ್ಜರಿ ಸಿಕ್ಸರ್ ಬಾರಿಸಿದರು.

  • 12 Apr 2023 07:58 PM (IST)

    ಪವರ್ ಪ್ಲೇ ಮುಕ್ತಾಯ

    ರಾಜಸ್ತಾನ್ ಪಾಲಿನ 6 ಓವರ್ ಖೋಟಾ ಮುಗಿದಿದ್ದು, ಈ ಓವರ್​ನಲ್ಲಿ ಪಡಿಕಲ್ 2 ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದರು.

  • 12 Apr 2023 07:54 PM (IST)

    5 ಓವರ್ ಅಂತ್ಯ

    ತೀಕ್ಷಣ ಎಸೆದ 5ನೇ ಓವರ್​ನಲ್ಲಿ ಬಟ್ಲರ್ ಲಾಂಗ್ ಆಫ್​ನಲ್ಲಿ ಸಿಕ್ಸರ್ ಬಾರಿಸಿದರೆ, ಪಡಿಕಲ್ ಡೀಪ್ ಮಿಡ್ ವಿಕೆಟ್ ಕಡೆ ಬೌಂಡರಿ ಬಾರಿಸಿದರು.

  • 12 Apr 2023 07:49 PM (IST)

    ಪಡಿಕಲ್ ಬೌಂಡರಿ

    ಜೈಸ್ವಾಲ್ ವಿಕೆಟ್ ಬಳಿಕ ಬಂದ ಕನ್ನಡಿಗ ಪಡಿಕಲ್ 3ನೇ ಓವರ್​ನಲ್ಲಿ 2 ಬೌಂಡರಿ ಬಾರಿಸಿದರು.

  • 12 Apr 2023 07:41 PM (IST)

    ಜೈಸ್ವಾಲ್ ಔಟ್

    ರಾಜಸ್ಥಾನ್ ಮೊದಲ ವಿಕೆಟ್ ಪತನ; ಆರಂಭಿಕ ಜೈಸ್ವಾಲ್ ಶಾರ್ಟ್​ನಲ್ಲಿ ದುಬೆಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 12 Apr 2023 07:34 PM (IST)

    ರಾಜಸ್ಥಾನ್ ಬ್ಯಾಟಿಂಗ್ ಆರಂಭ

    ರಾಜಸ್ಥಾನ್ ಬ್ಯಾಟಿಂಗ್ ಆರಂಭಿಸಿದೆ. ತಂಡದ ಪರ ಜೈಸ್ವಾಲ್ ಹಾಗೂ ಬಟ್ಲರ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಮೊದಲ ಓವರ್​ನಲ್ಲಿ 2 ಬೌಂಡರಿಗಳಿಂದ 8 ರನ್ ಬಂತು.

  • 12 Apr 2023 07:22 PM (IST)

    ರಾಜಸ್ಥಾನ್ ತಂಡ

    ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ಧ್ರುವ ಜುರೈಲ್, ಆರ್ ಅಶ್ವಿನ್, ಜೇಸನ್ ಹೋಲ್ಡರ್, ಕುಲದೀಪ್ ಸೇನ್, ಸಂದೀಪ್ ಶರ್ಮಾ ಮತ್ತು ಯುಜ್ವೇಂದ್ರ ಚಾಹಲ್

  • 12 Apr 2023 07:12 PM (IST)

    ಚೆನ್ನೈ ತಂಡ

    ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ಸಿಸಂದ ಮಗಾಳಾ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಆಕಾಶ್ ಸಿಂಗ್

  • 12 Apr 2023 07:05 PM (IST)

    ಧೋನಿಗೆ ಗೌರವ

    ಚೆಪಾಕ್‌ನಲ್ಲಿ ಪಂದ್ಯದ ಆರಂಭಕ್ಕೂ ಮುನ್ನ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅವರನ್ನು ಸನ್ಮಾನಿಸಲಾಯಿತು. ಧೋನಿ ಇಂದು 200ನೇ ಬಾರಿಗೆ ಐಪಿಎಲ್‌ನಲ್ಲಿ ಚೆನ್ನೈ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ತಂಡದ ಮಾಲೀಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರಿಗೆ ವಿಶೇಷ ಸ್ಮರಣಿಕೆ ನೀಡಿ ಗೌರವಿಸಿದರು.

  • 12 Apr 2023 07:04 PM (IST)

    ಟಾಸ್ ಗೆದ್ದ ಚೆನ್ನೈ

    ಟಾಸ್ ಗೆದ್ದ ಚೆನ್ನೈ ನಾಯಕ ಎಂ ಎಸ್ ಧೋನಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ರಾಜಸ್ಥಾನ್ ಮೊದಲು ಬ್ಯಾಟಿಂಗ್ ಮಾಡಲಿದೆ.

Published On - 7:03 pm, Wed, 12 April 23

Follow us on