RCB vs CSK: ಆರ್​ಸಿಬಿ ವಿರುದ್ಧ ಬಲಿಷ್ಠ ತಂಡ ಆಡಿಸಲು ಧೋನಿ ಮಾಸ್ಟರ್ ಪ್ಲಾನ್: ಆ ಪ್ಲೇಯರ್ ಇಂದು ಕಣಕ್ಕೆ?

|

Updated on: May 18, 2024 | 9:34 AM

CSK Playing XI vs RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯಕ್ಕಾಗಿ, ಆಡುವ XI ನಲ್ಲಿ ಸ್ಟಾರ್ ವೇಗಿ ದೀಪಕ್ ಚಹಾರ್ ಮರಳುವುದು ಬಹುತೇಕ ಖಚಿತವಾಗಿದೆ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ರೂ. 14 ಕೋಟಿಗೆ ಸಹಿ ಮಾಡಿದ ಚಹಾರ್, ಮೇ 1 ರಿಂದ ಸಿಎಸ್‌ಕೆ ಪರ ಆಡಿಲ್ಲ.

RCB vs CSK: ಆರ್​ಸಿಬಿ ವಿರುದ್ಧ ಬಲಿಷ್ಠ ತಂಡ ಆಡಿಸಲು ಧೋನಿ ಮಾಸ್ಟರ್ ಪ್ಲಾನ್: ಆ ಪ್ಲೇಯರ್ ಇಂದು ಕಣಕ್ಕೆ?
CSK Playing XI vs RCB
Follow us on

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಮೇ 18) ನಡೆಯಲಿರುವ ಐಪಿಎಲ್ 2024 ರ ಪಂದ್ಯ ನಂ. 68 ರಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ತಂಡವನ್ನು ಎದುರಿಸಲಿದೆ. ಈ ಪಂದ್ಯವು ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಸಿಎಸ್​ಕೆ ಈ ಪಂದ್ಯದಲ್ಲಿ ಯಾವುದೇ ಅಂತರದಿಂದ ಗೆಲುವು ಸಾಧಿಸಿದರೆ ಪ್ಲೇ ಆಫ್​ಗೆ ಪ್ರವೇಶ ಪಡೆಯಲಿದೆ. ಆದರೆ, ಆರ್​ಸಿಬಿ 18 ರನ್‌ಗಳಿಗಿಂತ ಹೆಚ್ಚು ಅಂತರದಲ್ಲಿ ಅಥವಾ 18.1 ಓವರ್‌ಗಳಿಗಿಂತ ಒಳಗೆ ಗೆಲ್ಲಬೇಕು. ಇಂದಿನ ಪಂದ್ಯಕ್ಕೆ ಚೆನ್ನೈ ಮಾಸ್ಟರ್ ಪ್ಲಾನ್ ಕೂಡ ರೂಪಿಸಿಕೊಂಡಿದ್ದು, ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ತಯಾರು ನಡೆಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯಕ್ಕಾಗಿ, ಆಡುವ XI ನಲ್ಲಿ ಸ್ಟಾರ್ ವೇಗಿ ದೀಪಕ್ ಚಹಾರ್ ಮರಳುವುದು ಬಹುತೇಕ ಖಚಿತವಾಗಿದೆ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ರೂ. 14 ಕೋಟಿಗೆ ಸಹಿ ಮಾಡಿದ ಚಹಾರ್, ಮೇ 1 ರಿಂದ ಸಿಎಸ್‌ಕೆ ಪರ ಆಡಿಲ್ಲ. ಇಂಜುರಿಗೆ ತುತ್ತಾದ ಪರಿಣಾಮ ಅವರು ಪಂದ್ಯದಿಂದ ಹೊರಗುಳಿದಿದ್ದರು. ಆದರೆ, ಒಂದೆರಡು ವಾರಗಳಿಗಿಂತ ಹೆಚ್ಚು ಕಾಲ ವಿಶ್ರಾಂತಿ ಕಳೆದುಕೊಂಡ ನಂತರ, ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಇವರಿಂದ ಆಡುವ ಸಾಧ್ಯತೆ ಹೆಚ್ಚಿದೆ.

ಮೈದಾನದಲ್ಲೇ ಸ್ಟಾಯಿನಿಸ್​ರ ಮೈಚಳಿ ಬಿಡಿಸಿದ ಅರ್ಜುನ್ ತೆಂಡೂಲ್ಕರ್: ರೋಚಕ ವಿಡಿಯೋ ನೋಡಿ

ಚಹಾರ್ ಲಭ್ಯತೆಯಿಂದಾಗಿಪವರ್‌ಪ್ಲೇ ಓವರ್‌ಗಳಲ್ಲಿ ಬೌಲಿಂಗ್‌ನ ಹೊರತಾಗಿ, ಬ್ಯಾಟ್‌ನಿಂದಲೂ ಚೆನ್ನೈಗೆ ಲಾಭ ಸಿಗಲಿದೆ. ಐಪಿಎಲ್ 2024 ರ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಮುಸ್ತಫಿಜುರ್ ರೆಹಮಾನ್ ಮತ್ತು ಶ್ರೀಲಂಕಾದ ವೇಗಿ ಮಥೀಶ ಪತಿರಾನಾ, ತುಷಾರ್ ದೇಶಪಾಂಡೆ ಮತ್ತು ಶಾರ್ದೂಲ್ ಠಾಕೂರ್ ಅನುಪಸ್ಥಿತಿಯಲ್ಲಿ ಸೂಪರ್ ಕಿಂಗ್ಸ್‌ನ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಇವರ ಜೊತೆ ರವೀಂದ್ರ ಜಡೇಜಾ, ಮೊಯಿನ್ ಅಲಿ ಮತ್ತು ಮಹೇಶ್ ತೀಶಾನ ಮೂವರು ಸ್ಪಿನ್ನರ್‌ಗಳಾಗಿದ್ದಾರೆ.

ಬ್ಯಾಟಿಂಗ್‌ನಲ್ಲಿ, ಅಜಿಂಕ್ಯ ರಹಾನೆ ಆಡುವ XI ನಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿಲ್ಲ, ಅಂದರೆ ನಾಯಕ ರುತುರಾಜ್ ಗಾಯಕ್ವಾಡ್ ನ್ಯೂಝಿಲೆಂಡ್ ಸ್ಟಾರ್ ರಚಿನ್ ರವೀಂದ್ರ ಅವರೊಂದಿಗೆ ಇನ್ನಿಂಗ್ಸ್ ತೆರೆಯಲಿದ್ದಾರೆ. ರಿಚಿನ್ ಐಪಿಎಲ್ ಚೊಚ್ಚಲ ಪಂದ್ಯದಲ್ಲಿ, ಆರ್​ಸಿಬಿ ವಿರುದ್ಧ 15 ಎಸೆತಗಳಲ್ಲಿ 37 ರನ್ ಗಳಿಸಿದ್ದರು. ಗಾಯಕ್ವಾಡ್ ಐಪಿಎಲ್ 2024 ರಲ್ಲಿ 583 ರನ್‌ಗಳೊಂದಿಗೆ ಪ್ರಮುಖ ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಶಿವಂ ದುಬೆ ಮತ್ತು ಎಂಎಸ್ ಧೋನಿ ಐಪಿಎಲ್ 2024 ರಲ್ಲಿ ಮಧ್ಯಮ ಮತ್ತು ಡೆತ್ ಓವರ್‌ಗಳಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಸದ್ದು ಮಾಡಿದ್ದಾರೆ. ಬ್ಯಾಟಿಂಗ್ ಪಿಚ್ ಆಗಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇವರಿಬ್ಬರು ಅಬ್ಬರಿಸುವುದು ಖಚಿತ.

ಇಂದು ಬೆಂಗಳೂರಿನಲ್ಲಿ ಆರ್​ಸಿಬಿ-ಸಿಎಸ್​ಕೆ ಪಂದ್ಯ: ಸಂಜೆ ವೇಳೆ ಹವಾಮಾನ ಹೇಗಿರಲಿದೆ?

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ XI:

ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಡೇರಿಲ್ ಮಿಚೆಲ್, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್-ಕೀಪರ್), ಮುಖೇಶ್ ಚೌಧರಿ, ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮಹೇಶ ತೀಕ್ಷಣ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:33 am, Sat, 18 May 24