‘ಅಯ್ಯೋ.. ದುರ್ವಿದಿಯೆ’..: ಧನಶ್ರೀ ಮಾಡಿದ ಕೆಲಸಕ್ಕೆ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾದ ಚಹಾಲ್

|

Updated on: Mar 03, 2024 | 7:21 PM

Dhanashree Verma- Yuzvendra Chahal: ಟೀಂ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮಡದಿ, ಡ್ಯಾನ್ಸರ್ ಧನಶ್ರೀ ವರ್ಮಾ ತಮ್ಮ ಸಹ ನೃತ್ಯಗಾರನೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಇದೀಗ ಟ್ರೋಲಿಗರ ಬಾಯಿಗೆ ಮತ್ತೊಮ್ಮೆ ಆಹಾರವಾಗಿದ್ದಾರೆ.

‘ಅಯ್ಯೋ.. ದುರ್ವಿದಿಯೆ’..: ಧನಶ್ರೀ ಮಾಡಿದ ಕೆಲಸಕ್ಕೆ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾದ ಚಹಾಲ್
ಧನಶ್ರೀ ವರ್ಮಾ, ಯುಜ್ವೇಂದ್ರ ಚಹಾಲ್
Follow us on

ಒಂದಿಲ್ಲೊಂದು ವಿಚಾರಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಾಗುವ ಟೀಂ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ (Yuzvendra Chahal) ಮಡದಿ, ಡ್ಯಾನ್ಸರ್ ಧನಶ್ರೀ ವರ್ಮಾ (Dhanashree Verma) ತಮ್ಮ ಸಹ ನೃತ್ಯಗಾರನೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಇದೀಗ ಟ್ರೋಲಿಗರ ಬಾಯಿಗೆ ಮತ್ತೊಮ್ಮೆ ಆಹಾರವಾಗಿದ್ದಾರೆ. ವಾಸ್ತವವಾಗಿ ಧನಶ್ರೀ ಸೋನಿ ಟಿವಿಯ ಡ್ಯಾನ್ಸ್ ರಿಯಾಲಿಟಿ ಶೋ ‘ಝಲಕ್ ದಿಖ್ಲಾ ಜಾ’ ನಲ್ಲಿ ಭಾಗವಹಿಸಿದ್ದರು. ಆ ನಂತರ ತಮ್ಮ ಇನ್ಸ್​ಟ್ರಾಗ್ರಾಮ್ (Instagram) ಖಾತೆಯಲ್ಲಿ ಪ್ರಸಿದ್ಧ ನೃತ್ಯ ಸಂಯೋಜಕ ಪ್ರತೀಕ್ ಉತೆರ್ಕರ್ ಅವರೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿದ್ದರು. ಇದನ್ನು ನೋಡಿದ ನೆಟ್ಟಿಗರು ತರಹೆವಾರಿ ಕಾಮೆಂಟ್ ಮಾಡುವ ಮೂಲಕ ಮತ್ತೊಮ್ಮೆ ಧನಶ್ರೀ ಅವರ ಕಾಲೆಳೆಯುವ ಕೆಲಸ ಮಾಡಿದ್ದಾರೆ.

ಹೊಸ ಫೋಟೋ ವೈರಲ್

ಧನಶ್ರೀ ವರ್ಮಾ ಹಂಚಿಕೊಂಡಿರುವ ಫೋಟೋದಲ್ಲಿ ಧನಶ್ರೀ ಹಾಗೂ ಪ್ರತೀಕ್ ಉತೆರ್ಕರ್ ಇಬ್ಬರು ಕಪ್ಪು ಬಣ್ಣದ ಬಟ್ಟೆಯನ್ನು ತೊಟ್ಟಿದ್ದು, ಧನಶ್ರೀ ಅವರನ್ನು ಪ್ರತೀಕ್ ಹಿಂದಿನಿಂದ ತಬ್ಬಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಇಬ್ಬರು ಡ್ಯಾನ್ಸ್ ರಿಯಾಲಿಟಿ ಶೋ ‘ಝಲಕ್ ದಿಖ್ಲಾ ಜಾ’ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಈ ಇಬ್ಬರ ನಡುವೆ ಆತ್ಮೀಯತೆ ಮೂಡಿತ್ತು. ಹೀಗಾಗಿ ಈ ಇಬ್ಬರು ಜೊತೆಗಿರುವ ಫೋಟೋವನ್ನು ಧನಶ್ರೀ ವರ್ಮಾ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇದನ್ನು ನೋಡಿದ ಟ್ರೋಟಿಗರು, ಧನಶ್ರೀ ಪತಿ, ಯುಜ್ವೇಂದ್ರ ಚಹಾಲ್ ಅವರಿಗೆ ಸಂಬಂಧಿಸಿದ ಮೀಮ್‌ಗಳನ್ನು ಹಂಚಿಕೊಳ್ಳುವ ಮೂಲಕ ಅವರ ಕಾಲೆಳೆದಿದ್ದಾರೆ.

ಈ ಹಿಂದೆಯೂ ಸುದ್ದಿಯಾಗಿದ್ದ ಧನಶ್ರೀ

ಇದಕ್ಕೂ ಮುನ್ನ ಧನಶ್ರೀ ವರ್ಮಾ ಇಂತಹದ್ದೇ ವಿಚಾರಗಳಿಂದ ಹಲವು ಬಾರಿ ಸುದ್ದಿಯಾಗಿದ್ದಾರೆ. ಈ ಹಿಂದೆ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರೊಂದಿಗೆ ಆತ್ಮೀಯತೆ ಹೆಚ್ಚಿಸಿಕೊಂಡಿದ್ದ ಧನಶ್ರೀ, ಅವರೊಂದಿಗೆ ಪಾರ್ಟಿ, ಸುತ್ತಾಟ, ಹಾಗೂ ಡ್ಯಾನ್ಸ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಸಾಕಷ್ಟು ಚರ್ಚೆಯಾಗಿದ್ದರು. ಅಲ್ಲದೆ ಧನಶ್ರೀ ಹಾಗೂ ಶ್ರೇಯಸ್ ನಡುವೆ ಇಲ್ಲ ಸಲ್ಲದ ಸಂಬಂಧ ಕಟ್ಟಿದ್ದರು. ಹಾಗೆಯೇ ಚಹಾಲ್ ಹಾಗೂ ಧನಶ್ರೀ ನಡುವೆ ಏನೂ ಸರಿಯಿಲ್ಲ ಎಂಬಂತೆಯೂ ಬಿಂಬಿಸಿದ್ದರು. ಆದರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಈ ಜೋಡಿ ನಮ್ಮಿಬ್ಬರ ನಡುವೆ ಎಲ್ಲವೂ ಚೆನ್ನಾಗಿದೆ ಎಂಬುದನ್ನು ಜಗಜ್ಜಾಹೀರು ಮಾಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Sun, 3 March 24