Dinesh Karthik: ಟಿ20 ವಿಶ್ವಕಪ್​ಗೆ ಆಯ್ಕೆಯಾದ ತಕ್ಷಣ ದಿನೇಶ್ ಕಾರ್ತಿಕ್ ಮಾಡಿದ ಟ್ವೀಟ್ ಏನು ನೋಡಿ

| Updated By: Vinay Bhat

Updated on: Sep 13, 2022 | 7:52 AM

India Squad for the 2022 T20 World cup: 2007 ರಲ್ಲಿ ನಡೆದ ಟಿ20 ವಿಶ್ವಕಪ್​ನ ಉದ್ಘಾಟನಾ ಟೂರ್ನಿಯಲ್ಲಿ ಭಾರತ ತಂಡದ ಭಾಗವಾಗಿದ್ದ ದಿನೇಶ್ ಕಾರ್ತಿಕ್ ಕೂಡ 2022 ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದ 15 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Dinesh Karthik: ಟಿ20 ವಿಶ್ವಕಪ್​ಗೆ ಆಯ್ಕೆಯಾದ ತಕ್ಷಣ ದಿನೇಶ್ ಕಾರ್ತಿಕ್ ಮಾಡಿದ ಟ್ವೀಟ್ ಏನು ನೋಡಿ
Dinesh Karthik
Follow us on

ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (ICC T20 World Cup)​ ಟೂರ್ನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಮ್ ಇಂಡಿಯಾವನ್ನು ಪ್ರಕಟ ಮಾಡಿದೆ. ರೋಹಿತ್ ಶರ್ಮಾ (Rohit Sharma) ತಂಡವನ್ನು ಮುನ್ನಡೆಸುತ್ತಿದ್ದು ಕೆಎಲ್ ರಾಹುಲ್ ಉಪ ನಾಯಕನಾಗಿದ್ದಾರೆ. ಕೆಲವೊಂದು ಅಚ್ಚರಿಯ ಆಯ್ಕೆಗಳು ಕೂಡ ನಡೆದಿದೆ. ಇಂಜುರಿಯಿಂದ ಜಸ್​ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಕಮ್​ಬ್ಯಾಕ್ ಮಾಡಿದ್ದು 15 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದರ ಜೊತೆಗೆ 2007 ರಲ್ಲಿ ನಡೆದ ಟಿ20 ವಿಶ್ವಕಪ್​ನ ಉದ್ಘಾಟನಾ ಟೂರ್ನಿಯಲ್ಲಿ ಭಾರತ ತಂಡದ ಭಾಗವಾಗಿದ್ದ ದಿನೇಶ್ ಕಾರ್ತಿಕ್ (Dinesh Karthik) ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಈ ಮೂಲಕ ಕಾರ್ತಿಕ್ ಬಹಳ ಸಮಯದ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಕಾರ್ತಿಕ್ ಟ್ವಿಟರ್​ನಲ್ಲಿ ಕನಸುಗಳು ನನಸಾಗುತ್ತವೆಎಂದು ಬರೆದು ಬ್ಲೂ ಹಾರ್ಟ್ ಎಮೋಜಿಯೊಂದಿಗೆ ಹಂಚಿಕೊಂಡಿದ್ದಾರೆ. ಇದು ದಿನೇಶ್ ಕಾರ್ತಿಕ್‌ಗೆ ಮಾತ್ರವಲ್ಲ ಅವರ ಆಟವನ್ನು ಮೆಚ್ಚಿಕೊಂಡ ಅಭಿಮಾನಿಗಳಿಗೂ ಖುಷಿ ನೀಡಿದೆ.

ಇದನ್ನೂ ಓದಿ
ICC Award: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ಜಿಂಬಾಬ್ವೆ ಆಟಗಾರ..!
ರಿಜ್ವಾನ್ ಬದಲಿಗೆ ಸರ್ಫರಾಜ್​ಗೆ ಅವಕಾಶ; ಪಾಕ್ ತಂಡದ ಅರ್ಧದಷ್ಟು ಆಟಗಾರರಿಗೆ ಕೋಕ್..!
ರಾಂಚಿ ಕ್ರಿಕೆಟ್ ಕ್ರೀಡಾಂಗಣದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಕೋಚ್; ಸ್ಥಿತಿ ಗಂಭೀರ
ENG vs SA: 3 ದಿನಗಳಲ್ಲೇ ಓವಲ್ ಟೆಸ್ಟ್ ಗೆದ್ದ ಇಂಗ್ಲೆಂಡ್; 2-1 ರಿಂದ ಸರಣಿ ಸೋತ ಸೌತ್ ಆಫ್ರಿಕಾ

 

ಟೀಮ್ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡಬೇಕು, 2022 ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಬೇಕು ಎಂಬುದು ನನ್ನ ಕನಸು ಎಂದು ಕಾರ್ತಿಕ್ ಈ ಹಿಂದೆಯೇ ಹೇಳಿದ್ದರು. ಇದಕ್ಕಾಗಿ ತರಬೇತಿಯನ್ನು ಕೂಡ ಪಡೆದುಕೊಂಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಆರ್​ಸಿಬಿ ತಂಡದ ಪರವಾಗಿ ಆಡಿದ್ದ ದಿನೇಶ್ ಕಾರ್ತಿಕ್‌ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ತಮಗೆ ನೀಡಿದ್ದ ಫಿನಿಶರ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಐಪಿಎಲ್​ 2022 ರಲ್ಲಿ ನೀಡಿದ ಅಮೋಘ ಪ್ರದರ್ಶನದಿಂದ ಬಿಸಿಸಿಐ ಇವರನ್ನು ಟೀಮ್ ಇಂಡಿಯಾಕ್ಕೆ ಮತ್ತೆ ಆಯ್ಕೆ ಮಾಡಿತು. ಈ ಮೂಲಕ ಮೂರು ವರ್ಷಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸ್ ಮರಳಿದರು. ರಾಷ್ಟ್ರೀಯ ತಂಡದಲ್ಲೂ ಕಾರ್ತಿಕ್ ಅಬ್ಬರಿಸಿದರು. ಇದೀಗ ಪಟ್ಟ ಶ್ರಮಕ್ಕೆ ಫಲ ಸಿಕ್ಕಿದ್ದು ಟಿ20 ವಿಶ್ವಕಪ್​ಗೆ ಆಯ್ಕೆ ಆಗಿದ್ದಾರೆ. ಇಲ್ಲಿ ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ನೋಡಬೇಕಿದೆ.

ಜಡೇಜಾ ಔಟ್:

ಏಷ್ಯಾ ಕಪ್ ಟೂರ್ನಿಯ ಮಧ್ಯೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆಲ್​ರೌಂಡರ್ ರವೀಂದ್ರ ಜಡೇಜಾ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದ್ದಾರೆ. ಸರ್ಜರಿಗೆ ಒಳಗಾಗಿರುವ ಜಡೇಜಾ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ವಿಶ್ವಕಪ್​ಗೆ ಇನ್ನೂ ಕೇವಲ 5 ವಾರಗಳು ಬಾಕಿ ಇರುವ ಕಾರಣ ಜಡೇಜಾ ಲಭ್ಯತೆ ಅನುಮಾನದ ಕಾರಣ ಅವರ ಬದಲಾಗಿ ಅಕ್ಷರ್ ಪಟೇಲ್​ಗೆ ಅವಕಾಶ ನೀಡಲಾಗಿದೆ. ಅಂತೆಯೆ ಅರ್ಷ್​ದೀಪ್​ ಸಿಂಗ್​ಗೆ ಅವಕಾಶ ನೀಡಲಾಗಿದ್ದು ಆವೇಶ್ ಖಾನ್ ಅವರನ್ನು ಹೊರಗಿಡಲಾಗಿದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್​ಪ್ರೀತ್ ತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷ್​ದೀಪ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು: ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ದೀಪಕ್ ಚಹಾರ್.

Published On - 7:52 am, Tue, 13 September 22