T20 World Cup: 2007 ಟಿ20 ವಿಶ್ವಕಪ್ನಲ್ಲಿದ್ದ ಇಬ್ಬರು ಪ್ಲೇಯರ್ಸ್ 2022 ವಿಶ್ವಕಪ್ಗೂ ಆಯ್ಕೆ: ಯಾರು ಗೊತ್ತೇ?
India Squad for T20 World Cup 2022: 2007ರ ಟಿ20 ವಿಶ್ವಕಪ್ನ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಇಬ್ಬರು ಆಟಗಾರರು ಈ ಬಾರಿಯ ಟಿ20 ವಿಶ್ವಕಪ್ ತಂಡಕ್ಕೂ ಆಯ್ಕೆಯಾಗಿದ್ದಾರೆ. ಅವರೇ ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್.
ಅಕ್ಟೋಬರ್ನಲ್ಲಿ ಆರಂಭವಾಗಲಿರುವ ಎಂಟನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್‌ಗೆ (T20 World Cup) ವೇದಿಕೆ ಸಜ್ಜಾಗಿದೆ. ಕಾಂಗರೂಗಳ ನಾಡಿನಲ್ಲಿ ಈ ಚುಟುಕು ಸಮರ ಏರ್ಪಡಿಸಲಾಗಿದ್ದು ಭಾರತ ತಂಡ (India Team) ಪ್ರಕಟವಾಗಿದೆ. 15 ಸದಸ್ಯರ ಟೀಮ್ ಇಂಡಿಯಾವನ್ನು ಬಿಸಿಸಿಐ ಹೆಸರಿಸಿದ್ದು ಕೆಲವೊಂದು ಅಚ್ಚರಿಯ ಆಯ್ಕೆಗಳು ಕೂಡ ನಡೆದಿವೆ. ರೋಹಿತ್ ಶರ್ಮಾ (Rohit Sharma) ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದರೆ, ಕೆಎಲ್ ರಾಹುಲ್ ಉಪ ನಾಯಕನ ಜವಬ್ದಾರಿಗೆ ನಿರ್ವಹಿಸಲಿದ್ದಾರೆ. ಭಾರತಕ್ಕೆ ದೊಡ್ಡ ತಲೆನೋವಾಗಿದ್ದ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಇಂಜುರಿಯಿಂದ ಗುಣಮುಖರಾಗಿ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಆದರೆ, ರವೀಂದ್ರ ಜಡೇಜಾ ಗಾಯದ ಕಾರಣದಿಂದ ಸಂಪೂರ್ಣ ಟೂರ್ನಿಯಿಂದಲ ಹೊರಬಿದ್ದಿದ್ದಾರೆ.
ಟಿ20 ವಿಶ್ವಕಪ್ ಮೊದಲು ಆರಂಭವಾಗಿದ್ದು 2007 ರಲ್ಲಿ. ಮೊದಲ ಆವೃತ್ತಿಯಲ್ಲೇ ಭಾರತ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ವಿಶೇಷತೆ ಎಂದರೆ 2007ರ ಟಿ20 ವಿಶ್ವಕಪ್ನ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಇಬ್ಬರು ಆಟಗಾರರು ಈ ಬಾರಿಯ ಟಿ20 ವಿಶ್ವಕಪ್ ತಂಡಕ್ಕೂ ಆಯ್ಕೆಯಾಗಿದ್ದಾರೆ. ಅವರೇ ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್.
ರೋಹಿತ್ ಹಾಗೂ ಕಾರ್ತಿಕ್ 15 ವರ್ಷಗಳ ಹಿಂದೆ ನಡೆದ ಟಿ20 ವಿಶ್ವಕಪ್ನಲ್ಲೂ ಕಣಕ್ಕಿಳಿದಿದ್ದರು. ಇಲ್ಲಿ ಭಾರತ ತಂಡ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದು ಚೊಚ್ಚಲ ಸೀಸನ್ನಲ್ಲೇ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಆದರ, ಆ ಬಳಿಕ ನಡೆದ ಯಾವ ಟಿ20 ವಿಶ್ವಕಪ್ನಲ್ಲೂ ಭಾರತ ಕಪ್ ಗೆದ್ದಿಲ್ಲ. ಇದೀಗ ಟೀಮ್ ಇಂಡಿಯಾಕ್ಕೆ ಮತ್ತೊಂದು ಅವಕಾಶ ಒದಗಿಬಂದಿದ್ದು, ಮುಖ್ಯವಾಗಿ ಹಿರಿಯ ಆಟಗಾರರಾದ ರೋಹಿತ್–ಕಾರ್ತಿಕ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
2007 ಟಿ20 ವಿಶ್ವಕಪ್ನಲ್ಲಿ ಭಾರತ ಮೊದಲ ಪಂದ್ಯವನ್ನು ಸ್ಕಾಟ್ಲೆಂಡ್ ವಿರುದ್ಧ ಆಡಬೇಕಿತ್ತು. ಆದರೆ, ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ರದ್ದುಗೊಳಿಸಲಾಯಿತು. ಈ ಪಂದ್ಯಕ್ಕೆ ದಿನೇಶ್ ಕಾರ್ತಿಕ್ ಬ್ಯಾಟರ್ ಆಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದಿದ್ದರು. ಎರಡನೇ ಪಂದ್ಯ ಪಾಕಿಸ್ತಾನ ವಿರುದ್ಧ ಭಾರತ ಆಡಿ ಭರ್ಜರಿ ಗೆಲುವು ಸಾಧಿಸಿತ್ತು. ರಾಬಿನ್ ಉತ್ತಪ್ಪ ಅವರ ಅರ್ಧಶತಕದ ನೆರವಿನಿಂದ ಧೋನಿ ಪಡೆ 141 ರನ್ ಕಲೆಹಾಕಿತ್ತು. ಇದರಲ್ಲಿ ಕಾರ್ತಿಕ್ 9 ಎಸೆತಗಳಲ್ಲಿ 11 ರನ್ ಗಳಿಸಿದ್ದರೆ, ರೋಹಿತ್ಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ.
2022 ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿದ್ದಕ್ಕೆ ಖುಷಿ ವ್ಯಕ್ತಪಡಿಸಿರುವ ದಿನೇಶ್ ಕಾರ್ತಿಕ್ ಟ್ವಿಟರ್ನಲ್ಲಿ ‘ಕನಸುಗಳು ನನಸಾಗುತ್ತವೆ‘ ಎಂದು ಬರೆದು ಬ್ಲೂ ಹಾರ್ಟ್ ಎಮೋಜಿಯೊಂದಿಗೆ ಹಂಚಿಕೊಂಡಿದ್ದಾರೆ. ಇದು ದಿನೇಶ್ ಕಾರ್ತಿಕ್‌ಗೆ ಮಾತ್ರವಲ್ಲ ಅವರ ಆಟವನ್ನು ಮೆಚ್ಚಿಕೊಂಡ ಅಭಿಮಾನಿಗಳಿಗೂ ಖುಷಿ ನೀಡಿದೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷ್ದೀಪ್ ಸಿಂಗ್.
Published On - 10:09 am, Tue, 13 September 22