AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವ್ ವಿಚಾರಕ್ಕೆ 17ರ ಮಗಳನ್ನೇ ಕೊಂದ ಅಪ್ಪ: ಬಳಿಕ ನಾಟಕವಾಡಿದ್ದ ತಂದೆಯ ಅಸಲಿ ಮುಖ ಬಯಲು

ಲವ್ ವಿಚಾರಕ್ಕೆ 17ರ ಮಗಳನ್ನೇ ಕೊಂದ ಅಪ್ಪ: ಬಳಿಕ ನಾಟಕವಾಡಿದ್ದ ತಂದೆಯ ಅಸಲಿ ಮುಖ ಬಯಲು

ರಮೇಶ್ ಬಿ. ಜವಳಗೇರಾ
|

Updated on: May 17, 2026 | 6:26 PM

Share

ಮಗಳ  ಪಾಲಿಗೆ ತಂದೆಯೇ (Father) ಕಾಲಾಂತಕನಾದ ಘೋರ ಘಟನೆಯೊಂದು ತುಮಕೂರು (Tumakuru) ಜಿಲ್ಲೆಯ ಶಿರಾ ತಾಲ್ಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.  ಹೌದು.. ಪ್ರೀತಿಯ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ತಂದೆ, ತನ್ನ 17 ವರ್ಷದ ಮಗಳನ್ನು (daughter) ಹತ್ಯೆ ಮಾಡಿ ಹಳ್ಳದಲ್ಲಿ ಹೂತು ಹಾಕಿದ್ದ ಆತಂಕಕಾರಿ ವಿಷಯ ಬಯಲಾಗಿದೆ. ಕೊಲೆಯಾದ ಯುವತಿಯನ್ನು ಮೇಘನಾ (17) ಎಂದು ಗುರುತಿಸಲಾಗಿದೆ. ಈಕೆಯ ತಂದೆ ತಿಮ್ಮರಾಯಪ್ಪ (48) ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಹಂತಕ.

ತುಮಕೂರು (ಮೇ 17): ಮಗಳ  ಪಾಲಿಗೆ ತಂದೆಯೇ (Father) ಕಾಲಾಂತಕನಾದ ಘೋರ ಘಟನೆಯೊಂದು ತುಮಕೂರು (Tumakuru) ಜಿಲ್ಲೆಯ ಶಿರಾ ತಾಲ್ಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.  ಹೌದು.. ಪ್ರೀತಿಯ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ತಂದೆ, ತನ್ನ 17 ವರ್ಷದ ಮಗಳನ್ನು (daughter) ಹತ್ಯೆ ಮಾಡಿ ಹಳ್ಳದಲ್ಲಿ ಹೂತು ಹಾಕಿದ್ದ ಆತಂಕಕಾರಿ ವಿಷಯ ಬಯಲಾಗಿದೆ. ಕೊಲೆಯಾದ ಯುವತಿಯನ್ನು ಮೇಘನಾ (17) ಎಂದು ಗುರುತಿಸಲಾಗಿದೆ. ಈಕೆಯ ತಂದೆ ತಿಮ್ಮರಾಯಪ್ಪ (48) ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಹಂತಕ.

ಮೇಘನಾ ತನ್ನ ತಾಯಿಯ ಸಂಬಂಧಿಕರ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದ್ರೆ, ಇದಕ್ಕೆ ತಂದೆ ತಿಮ್ಮರಾಯಪ್ಪನ ತೀವ್ರ ವಿರೋಧವಿತ್ತು. ಈ ಸಂಬಂಧ ಮನೆಯಲ್ಲಿ ಹಲವು ಬಾರಿ ಗಲಾಟೆಗಳೂ ನಡೆದಿದ್ದವು. ಕೊನೆಗೆ ಮಗಳ ಹಠಕ್ಕೆ ಬೇಸತ್ತಿದ್ದ ತಿಮ್ಮರಾಯಪ್ಪ, ಕಳೆದ ಏಪ್ರಿಲ್ 16 ರಂದೇ ಮೇಘನಾಳನ್ನು ಕೊಲೆ ಮಾಡಿದ್ದು, ಯಾರಿಗೂ ಸಂಶಯ ಬಾರದಂತೆ ತನ್ನ ಜಮೀನಿನ ಪಕ್ಕದಲ್ಲೇ ಇರುವ ಹಳ್ಳವೊಂದರಲ್ಲಿ ಹೂತು ಹಾಕಿದ್ದ. ಮಗಳು ಮನೆಗೆ ಬಾರದೇ ಇದ್ದಾಗ ಏನೂ ಅರಿಯದವನಂತೆ ನಾಟಕವಾಡಿದ್ದ ಈತ, ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಮಗಳ ಮಿಸ್ಸಿಂಗ್ ಕೇಸ್ ದಾಖಲಿಸಿದ್ದ. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ತಿಮ್ಮರಾಯಪ್ಪನ ವರ್ತನೆ ಮೇಲೆ ಅನುಮಾನ ವ್ಯಕ್ತವಾಗಿತ್ತು. ಆದ್ರೆ, ಪೊಲೀಸರು ವಿಚಾರಣೆಗೆ ಕರೆದಾಗ ಗಾಬರಿಗೊಂಡ ನಾಪತ್ತೆಯಾಗಿದ್ದ ತಿಮ್ಮರಾಯಪ್ಪನನ್ನು ಪತ್ತೆ ಮಾಡಿದ್ದು, ಬಳಿಕ ವಿಚಾರಣೆಗೊಳಪಡಿಸಿದಾಗ ಮಗಳನ್ನು ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More