AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದು

Horoscope Today 18 May: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯ ಸೋಮವಾರದಂದು ಇಷ್ಟದ ಕಾರ್ಯ, ನಿರೀಕ್ಷೆ ಕಡಿಮೆ, ಕುಟುಂಬದ ಹಿತಚಿಂತನೆ, ಭವಿಷ್ಯಕ್ಕಾಗಿ ದೈವದ ಮೊರೆ ಇವೆಲ್ಲ ಈ ದಿನದ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದು
ದಿನ ಭವಿಷ್ಯImage Credit source: tv9 kannada
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: May 18, 2026 | 12:30 AM

Share

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ಮೇಷ, ಮಹಾನಕ್ಷತ್ರ : ಕೃತ್ತಿಕಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಅತಿಗಂಡ, ಕರಣ : ಬಾಲವ, ಸೂರ್ಯೋದಯ – 05 – 57 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:34 – 09:09, ಯಮಗಂಡ ಕಾಲ 10:45 – 12:21, ಗುಳಿಕ ಕಾಲ 13:57 – 15:33.

ಮೇಷ ರಾಶಿ: ಹತ್ತಿರದ ಸಂಬಂಧಿಗಳೊಂದಿಗೆ ಪ್ರಮುಖ ಚರ್ಚೆಯನ್ನು ಮಾಡುವಿರಿ. ಮಕ್ಕಳಿಂದ ಲಾಭ, ಹೆಮ್ಮೆ ಸಿಗಬಹುದು. ಸಮಯವನ್ನು ಸಮಾಜಮುಖಿ ಕಾರ್ಯಗಳಲ್ಲಿ ಬಳಸಿದರೆ ಒಳಿತು. ಪ್ರೀತಿಯಲ್ಲಿ ತಿಳಿವಳಿಕೆ ಹೆಚ್ಚಾಗುತ್ತದೆ. ಯಾರ ಸ್ನೇಹವನ್ನೂ ವೇಗವಾಗಿ ಒಪ್ಪಿಕೊಳ್ಳಲಾರಿರಿ. ನಿಮ್ಮ ಮನಸ್ಸಿಗೆ ಸರಿ ಎನಿಸಿದ್ದರೆ ಮುಂದುವರಿಯಿರಿ. ಉಡುಗೊರೆಯನ್ನು ಸ್ನೇಹಿತರಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಇಂದಿನ ಸಮಯವು ವ್ಯರ್ಥವಾಗುವುದು.

ವೃಷಭ ರಾಶಿ: ಹೊಸ ಸ್ನೇಹಿತರು ನಿಮ್ಮ ವ್ಯಕ್ತಿತ್ವದಿಂದ ಆಕರ್ಷಿತರಾಗುತ್ತಾರೆ. ಸಂಗಾತಿಯ ಭಾವನೆಗಳ ಬಗ್ಗೆ ನಿಮ್ಮ ನಿರ್ಲಕ್ಷ್ಯ ತೊಂದರೆ ಉಂಟುಮಾಡಬಹುದು. ನಿಮ್ಮನ್ನು ಕೆಟ್ಟವರ ಸಹವಾಸದಿಂದ ಮನೆಯವರು ದೂರಮಾಡುವರು. ಸಂಭಾಷಣೆಯ ಕೊರತೆ ಮದುವೆಯ ಸಂಬಂಧದಲ್ಲಿ ಬಿರುಕು ತರಬಹುದು. ಸಾಹಸ ಕಾರ್ಯಕ್ಕೆ ಒಮ್ಮೆಲೇ ಮುಂದಾಗುವುದು ಬೇಡ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು.

ಮಿಥುನ ರಾಶಿ: ಹಣಕಾಸಿನ ವಿಚಾರಕ್ಕೆ ಮನೆಯಲ್ಲಿ ಕಲಹದಿಂದ ಮನಸ್ಸು ಹಾಳಾಗಲಿದೆ. ಹಣದ ವಿಚಾರದಲ್ಲಿ ತ್ವರಿತ ನಿರ್ಧಾರದಿಂದ ದೂರವಿರಿ. ಮಕ್ಕಳು ನಿಮ್ಮನ್ನು ಪ್ರೀತಿಸುವರು. ಅತಿಥಿಗಳ ಬಳಿ ಉಗ್ರವಾಗಿ ವರ್ತಿಸದಿರಿ. ಸಂಬಂಧಗಳ ಕಾಳಜಿ ಇಟ್ಟುಕೊಳ್ಳಿ. ನಿಮ್ಮ‌ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ.

ಕರ್ಕಾಟಕ ರಾಶಿ: ಹಿರಿಯರ ಒತ್ತಡದಿಂದ ಕೆಲಸಕ್ಕೆ ಏಕಾಗ್ರತೆ ಕಡಿಮೆಯಾಗಬಹುದು. ಹಣದ ಬಗ್ಗೆ ತುರ್ತು ನಿರ್ಧಾರ ತೆಗೆದುಕೊಳ್ಳುವುದು ತೊಂದರೆ ತರಬಹುದು. ಅತಿಥಿಗಳಿಂದ ದೂರವಿರಲು ಶಿಸ್ತಿನಿಂದ ನಡೆದುಕೊಳ್ಳಿ. ಪ್ರೀತಿಯಲ್ಲಿ ತಾಳ್ಮೆ ಮತ್ತು ಸಹನಶೀಲತೆ ಮುಖ್ಯ. ನಿಮ್ಮದಲ್ಲದ್ದನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ಯಾವುದನ್ನೂ ಅನುಭವಿಸಲೂ ಯೋಗ್ಯವಾದ ಕಾಲವು ಬೇಕಾಗುವುದು. ಇಂದು ನೀವು ಯಾವುದಾದರೂ ವಿಚಾರವನ್ನು ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ.

ಸಿಂಹ ರಾಶಿ: ಪ್ರೀತಿಯಲ್ಲಿ ನಿಮಗೆ ಮನಸ್ಸಿನಲ್ಲಿ ಶೂನ್ಯತೆ ಇಂದು ಕಾಡಬಹುದು. ವೃತ್ತಿಜೀವನದಲ್ಲಿ ಹಡವಿಟ್ಟ ನಿರ್ಧಾರ ತಪ್ಪು ತರುವ ಸಾಧ್ಯತೆ. ಸಮಸ್ಯೆಗಳ ಪರಿಹಾರದಲ್ಲಿ ನಿಮ್ಮ ಬುದ್ಧಿಮತ್ತೆ ಸ್ಪಷ್ಟ ಸಂಗಾತಿಯ ಆರೋಗ್ಯ ಸಮಸ್ಯೆಯಿಂದ ಕೆಲಸದಲ್ಲಿ ಅಡಚಣೆ. ತಾಳ್ಮೆಯಿಂದ ದಿನ ಕಳೆಯಿರಿ. ಸಂತೃಪ್ತಿಯಿಂದ ಇರಲಿದ್ದೀರಿ. ವೃತ್ತಿಪರರು ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವರು. ಉದ್ಯೋಗದ ಅವಕಾಶಗಳ ನಿರೀಕ್ಷೆಯಲ್ಲಿ ಇರುವಿರಿ. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ.

ಕನ್ಯಾ ರಾಶಿ: ಪರಸ್ಪರ ಸಂವಹನದ ಮೂಲಕ ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಮನೆಯ ಕೆಲಸಗಳಲ್ಲಿ ಗಮನ ಹರಿಸಿ. ಪ್ರೇಮ ಸಂಬಂಧದಲ್ಲಿ ನಿರೀಕ್ಷೆಯಂತಿಲ್ಲದ ಪರಿಣಾಮ ಸಿಗಬಹುದು. ತಮಾಷೆಯ ಆಟದಲ್ಲಿ ಗೆಲುವಾಗದು. ಕಚೇರಿಯಲ್ಲಿ ಒಬ್ಬ ಮೋಸವಾಗಬಹುದು. ಕರಕುಶಲತೆಗಳಿಗೆ ಹೆಚ್ಚು ಸಮಯ ಕೊಡುವಿರಿ. ಕುಟುಂಬದ ಜೊತೆ ಸೌಹಾರ್ದತೆ ಉಂಟಾಗುವುದು. ಇತರರ ಜೊತೆ ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ.

ತುಲಾ ರಾಶಿ: ಸಮಾಜದಿಂದ ಗೌರವ ಸಮ್ಮಾನಗಳು ಸಿಗಲಿವೆ. ಆಸ್ತಿ ಖರೀದಿಸುವ ಯೋಚನೆ ಇದ್ದರೆ ಖರೀದಿಸಿ. ಇಂದು ಕಾಲ ಚೆನ್ನಾಗಿದೆ. ಕೋಪವನ್ನು ತೋರಿಸಲು ಹೋಗಬೇಡಿ. ಬಲವರ್ಧನೆಗೆ ಹೊಸ ಸಂಬಂಧದ ಮೂಲಕ ಅವಕಾಶ. ಮನೆಯ ಕಾರ್ಯಕ್ಕೆ ಆಪ್ತರನ್ನು ಆಮಂತ್ರಿಸುವಿರಿ. ನಿಮ್ಮ ಹೆಸರನ್ನು ಬಳಸಿ ಬೇರೆಯವರು ಕೆಲಸ ಮಾಡಿಕೊಳ್ಳಬಹುದು. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ. ಇನ್ನೊಬ್ಬರ ಬಗ್ಗೆ ಪ್ರೀತಿ ಇರಲಿ.

ವೃಶ್ಚಿಕ ರಾಶಿ: ಆತ್ಮವಿಶ್ವಾಸವು ಋಣಾತ್ಮಕ ಸಂದರ್ಭದಲ್ಲಿಯೂ ಧೈರ್ಯದಿಂದ ಇರುವಂತೆ ಮಾಡುತ್ತದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಇರಲಿ. ಇಂದಿನ ಸೋಲಿನಿಂದ ಪಾಠ ಕಲಿಯಬೇಕಾದೀತು. ಸಂಪತ್ತೇ ನಿಮಗೆ ಹೊರೆಯಾಗಬಹುದು. ಸ್ನೇಹಿತರ ಜೊತೆಗೆ ಸಂತೋಷದ ಸಮಯ. ಪ್ರೇಮ ಸಂಬಂಧದಲ್ಲಿ ಭರವಸೆ ಅಧಿಕವಾಗಲಿದೆ. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ.

ಧನು ರಾಶಿ: ಸಾಲ ಕೊಡಲಿಕ್ಕಾಗಿ ಬರುವ ದೂರವಾಣಿ ಕರೆಗಳನ್ನು ನಿರ್ಲಕ್ಷಿಸಲಿದ್ದೀರಿ. ಇಂದು ನೀವು ಪ್ರಮುಖ ನಿರ್ಧಾರಗಳನ್ನು ಸ್ವೀಕರಿಸುವ ಸಾಧ್ಯತೆ ಇದೆ. ನಿಮ್ಮ ಖಾಸಗಿ ವಿಷಯಗಳನ್ನು ಬಹಿರಂಗಪಡಿಸದಿರಿ. ಪ್ರೀತಿಯಲ್ಲಿ ತಾತ್ಕಾಲಿಕ ಸಂತೋಷವಿದ್ದರೂ ಭರವಸೆಯ ಕ್ಷಣ. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯಾದೀತು. ಅಧಿಕಾರದಿಂದ ಮಾತ್ರ ಎಲ್ಲವೂ ಸರಿಯಾಗುವುದು ಎಂಬ ಭ್ರಮೆ‌ ಬೇಡ. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು.

ಮಕರ ರಾಶಿ: ಅಪರಿಚಿತರು ಭೇಟಿಯಾಗಿ ನಿಮ್ಮ ಕಿವಿ ಹಿಂಡುವರು. ನೀವು ಮಾಡಲಿರುವ ಕೆಲಸದ‌ ಮೇಲೆ ನಿಮ್ಮ ಗಮನವಿರಲಿ. ಹೂಡಿಕೆಯಲ್ಲಿ ಜಾಣತನದಿಂದ ಲಾಭ ಸಿಗುವುದು ಖಚಿತ. ಕುಟುಂಬದ ಬೆಂಬಲದಿಂದ ನೈಜ ಸಮಾಧಾನ. ಪ್ರೀತಿಯಲ್ಲಿ ಶುಭ ಸೂಚನೆಗಳು ಸಿಗುತ್ತವೆ. ಉದ್ಯೋಗದಲ್ಲಿ ಉನ್ನತಿ ಸಾಧ್ಯ. ಹೊಸತರ ಕಲಿಕೆಯಲ್ಲಿ ಆಸಕ್ತಿಯು ಅಧಿಕವಾಗುವುದು. ಸಮಾರಂಭಗಳಿಗೆ ತೆರಳುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ‌.

ಕುಂಭ ರಾಶಿ: ಅನಗತ್ಯ ಖರ್ಚು ನಿಮಗೆ ವಿಷಾದ ತರಬಹುದು. ನಿಮಗೆ ಸಿಕ್ಕ ಸಮಯವನ್ನು ಸದುಪಯೋಗ ಮಾಡಿಕೊಳ್ಳುವಿರಿ. ಇಡೀ ಕುಟುಂಬಕ್ಕೆ ಸಂತೋಷವನ್ನು ತರುವ ಸುದ್ದಿ ಸಿಗುವುದು ಸಾಧ್ಯ. ಪ್ರೀತಿಯಲ್ಲಿ ಸ್ಪಂದನೆ. ಹೊಸ ವ್ಯವಹಾರಗಳಿಗೆ ಉತ್ತಮ ಸಮಯ. ಸಮಸ್ಯೆ ಪರಿಹಾರದಲ್ಲಿ ನಿಮ್ಮ ಪ್ರತಿಭೆ ಬೆಳಗಲಿದೆ. ಉದ್ಯಮದಲ್ಲಿ ಅಧಿಕ ಚಿಂತೆಯು ಇರಲಿದ್ದು ಪ್ರಯತ್ನವು ಅಧಿಕವಾಗಿ ಇರುವುದು. ಸಂಗಾತಿಯ ಮಾತನ್ನು ಇಂದು ಅನುಸರಿಸುವಿರಿ.

ಮೀನ ರಾಶಿ: ಪರಿಚಯ ಆತ್ಮೀಯವಾಗಿ ನಿಮಗೆ ಉತ್ತಮ ಅವಕಾಶಗಳನ್ನು ಕೊಡಿಸುವುದು. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಆರ್ಥಿಕ ಸಲಹೆ ನೀಡುವ ವ್ಯಕ್ತಿ ನಿಮ್ಮ ನೆರವಾಗಬಹುದು. ಮಕ್ಕಳ ಸಾಧನೆ ಸಂತೋಷ ತರುತ್ತದೆ. ಉದ್ಯೋಗ ನಿರ್ಧಾರದಲ್ಲಿ ಸ್ವತಂತ್ರತೆ ಉತ್ತಮ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿ ಕುಟುಂಬದೊಂದಿಗೆ ಕಾಲ ಕಳೆಯಿರಿ. ಆಸ್ತಿಯನ್ನು ಖರೀದಿಸುವ ಕುರಿತು ಮನೆಯಲ್ಲಿ ಚರ್ಚೆಗಳು ನಡೆಯುವುದು.

ಲೋಹಿತ ಹೆಬ್ಬಾರ್-8762924271 (what’s app only)

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More