ENG vs WI: ಬಟ್ಲರ್ ಔಟ್… ಸಾಲ್ಟ್ ಅ್ಯಂಡ್ ಪೆಪ್ಪರ್ ಇನ್

|

Updated on: Oct 22, 2024 | 10:13 AM

ENG vs WI: ಇಂಗ್ಲೆಂಡ್ - ವೆಸ್ಟ್ ಇಂಡೀಸ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯು ಅಕ್ಟೋಬರ್ 31 ರಿಂದ ಶುರುವಾಗಲಿದೆ. ಕೆರಿಬಿಯನ್ ದ್ವೀಪದಲ್ಲಿ ನಡೆಯಲಿರುವ ಈ ಸರಣಿಯಿಂದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಹೊರಗುಳಿದಿದ್ದಾರೆ.

ENG vs WI: ಬಟ್ಲರ್ ಔಟ್... ಸಾಲ್ಟ್ ಅ್ಯಂಡ್ ಪೆಪ್ಪರ್ ಇನ್
Buttler - Salt - Pepper
Follow us on

ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಬಟ್ಲರ್ ವಿಂಡೀಸ್ ವಿರುದ್ಧದ ಸರಣಿಯ ಮೂಲಕ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದರು. ಆದರೆ ಈ ತಿಂಗಳಲ್ಲಿ ಅವರು ಸಂಪೂರ್ಣ ಫಿಟ್​ನೆಸ್ ಸಾಧಿಸುವುದು ಅಸಾಧ್ಯ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಇನ್ನು ಜೋಸ್ ಬಟ್ಲರ್ ಹೊರಗುಳಿದಿರುವ ಕಾರಣ ಬದಲಿಯಾಗಿ 26 ವರ್ಷದ ಯುವ ದಾಂಡಿಗ ಮೈಕಲ್ ಪೆಪ್ಪರ್ ಆಯ್ಕೆಯಾಗಿದ್ದಾರೆ. ಅಲ್ಲದೆ ಮೂರು ಪಂದ್ಯಗಳ ಸರಣಿಯಲ್ಲಿ ಫಿಲ್ ಸಾಲ್ಟ್ ಜೊತೆ ಪೆಪ್ಪರ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಅದರಂತೆ ವಿಂಡೀಸ್ ಸರಣಿಯಲ್ಲಿ ಸಾಲ್ಟ್-ಪೆಪ್ಪರ್ ಕಡೆಯಿಂದ ಹೊಸ ಆರಂಭವನ್ನು ನಿರೀಕ್ಷಿಸಬಹುದು.

ಇಂಗ್ಲೆಂಡ್ ತಂಡ ನಾಯಕ ಯಾರು?

ಜೋಸ್ ಬಟ್ಲರ್ ಹೊರಗುಳಿದ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಂಗಾಮಿ ನಾಯಕನಾಗಿ ಲಿಯಾಮ್ ಲಿವಿಂಗ್​ಸ್ಟೋನ್ ಅವರನ್ನು ಆಯ್ಕೆ ಮಾಡಿದೆ. ಅದರಂತೆ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಲಿವಿಂಗ್​ಸ್ಟೋನ್ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: RCB ಉಳಿಸಿಕೊಂಡ ಆರು ಆಟಗಾರರು ಯಾರೆಲ್ಲಾ ಗೊತ್ತಾ?

ಇಂಗ್ಲೆಂಡ್ ಏಕದಿನ ತಂಡ: ಲಿಯಾಮ್ ಲಿವಿಂಗ್‌ಸ್ಟೋನ್ (ನಾಯಕ), ಜಾಫರ್ ಚೋಹಾನ್, ಸ್ಯಾಮ್ ಕರನ್, ವಿಲ್ ಜಾಕ್ಸ್, ಸಾಕಿಬ್ ಮಹಮೂದ್, ಡಾನ್ ಮೌಸ್ಲಿ, ಜೇಮೀ ಓವರ್‌ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಜಾನ್ ಟರ್ನರ್, ಜೋಫ್ರಾ ಆರ್ಚರ್, ಜೇಕೊಬ್ ಬೆಥೆಲ್.

ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಸರಣಿ ವೇಳಾಪಟ್ಟಿ:

  • ಅಕ್ಟೋಬರ್ 31: ಮೊದಲ ಏಕದಿನ ಪಂದ್ಯ- ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್, ಆಂಟಿಗುವಾ – 11:30 PM IST
  • ನವೆಂಬರ್ 2: ಎರಡನೇ ಏಕದಿನ ಪಂದ್ಯ- ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್, ಆಂಟಿಗುವಾ – 7 PM IST
  • ನವೆಂಬರ್ 6: ಮೂರನೇ ಏಕದಿನ ಪಂದ್ಯ- ಕೆನ್ಸಿಂಗ್ಟನ್ ಓವಲ್, ಬ್ರಿಡ್ಜ್‌ಟೌನ್, ಬಾರ್ಬಡೋಸ್ – 11:30 PM IST