ಏಕದಿನ, ಟಿ20 ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ; ಆರ್​ಸಿಬಿ ಆಟಗಾರನಿಗೆ ತಂಡದ ನಾಯಕತ್ವ

England Announces Squads: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ವಿರುದ್ಧದ ವೈಟ್-ಬಾಲ್ ಸರಣಿಗಳಿಗೆ ತಮ್ಮ ತಂಡಗಳನ್ನು ಪ್ರಕಟಿಸಿದೆ. ಹ್ಯಾರಿ ಬ್ರೂಕ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಳಿಗೆ ನಾಯಕತ್ವ ವಹಿಸುವರು, ಆದರೆ ಜಾಕೋಬ್ ಬೆಥೆಲ್ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ನಾಯಕರಾಗಿದ್ದಾರೆ. ಬೆಥೆಲ್ ಅವರನ್ನು ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಯಕರನ್ನಾಗಿ ನೇಮಿಸಲಾಗಿದೆ.

ಏಕದಿನ, ಟಿ20 ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ; ಆರ್​ಸಿಬಿ ಆಟಗಾರನಿಗೆ ತಂಡದ ನಾಯಕತ್ವ
England Team

Updated on: Aug 15, 2025 | 10:21 PM

ಟೀಂ ಇಂಡಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿ ಮುಗಿಸಿರುವ ಇಂಗ್ಲೆಂಡ್ ತಂಡ ಇದೀಗ ಸೀಮಿತ ಓವರ್​ಗಳ ಸರಣಿಯನ್ನಾಡಲು ಸಜ್ಜಾಗಿದೆ. ಇದೀಗ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ದಕ್ಷಿಣ ಆಫ್ರಿಕಾ ವಿರುದ್ಧದ ವೈಟ್ -ಬಾಲ್ ಸರಣಿ ಮತ್ತು ಐರ್ಲೆಂಡ್ ವಿರುದ್ಧದ ಟಿ20ಸರಣಿಗೆ ಇಂಗ್ಲೆಂಡ್ ತಂಡವನ್ನು (England Team) ಪ್ರಕಟಿಸಿದೆ. ವೇಳಾಪಟ್ಟಿಯ ಪ್ರಕಾರ ಇಂಗ್ಲೆಂಡ್ ತಂಡವು ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ಏಕದಿನ ಮತ್ತು ಅಷ್ಟೇ ಸಂಖ್ಯೆಯ ಟಿ20 ಪಂದ್ಯಗಳನ್ನು ಆಡಬೇಕಾಗಿದೆ. ಸೆಪ್ಟೆಂಬರ್ 2 ರಿಂದ ಹೆಡಿಂಗ್ಲಿಯಲ್ಲಿ ಏಕದಿನ ಸರಣಿ ಆರಂಭವಾಗಲಿದೆ. ಆ ಬಳಿಕ ಇಂಗ್ಲೆಂಡ್ ತಂಡ ಈ ತಿಂಗಳು ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು , ಅಲ್ಲಿ 3 ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೊಸ ನಾಯಕನ ಹೆಸರನ್ನು ಸಹ ಪ್ರಕಟಿಸಿದೆ.

ಆರ್​ಸಿಬಿ ಆಟಗಾರನಿಗೆ ನಾಯಕತ್ವ

ದಕ್ಷಿಣ ಆಫ್ರಿಕಾ ವಿರುದ್ಧದ ಎರಡೂ ಸರಣಿಗಳಲ್ಲಿ ಹ್ಯಾರಿ ಬ್ರೂಕ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ಬೆನ್ ಡಕೆಟ್ ಮತ್ತು ಜೋ ರೂಟ್ ಅವರಂತಹ ಸ್ಟಾರ್ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದ್ದಾರೆ. ಆದರೆ ಐರ್ಲೆಂಡ್ ಪ್ರವಾಸದಲ್ಲಿ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಆಡುವ ಜಾಕೋಬ್ ಬೆಥೆಲ್ ಅವರಿಗೆ ತಂಡದ ನಾಯಕತ್ವ ನೀಡಲಾಗಿದೆ. 21 ವರ್ಷದ ಜಾಕೋಬ್ ಬೆಥೆಲ್ ಅವರನ್ನು ಮೊದಲ ಬಾರಿಗೆ ಇಂಗ್ಲೆಂಡ್ ತಂಡದ ನಾಯಕರನ್ನಾಗಿ ಮಾಡಲಾಗಿದೆ.

ದಕ್ಷಿಣ ಆಫ್ರಿಕಾ ಸರಣಿಗೆ ಇಂಗ್ಲೆಂಡ್ ತಂಡ

ಏಕದಿನ ತಂಡ- ಹ್ಯಾರಿ ಬ್ರೂಕ್ ( ನಾಯಕ ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಸೋನಿ ಬೇಕರ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಜೇಮೀ ಓವರ್ಟನ್, ಆದಿಲ್ ರಶೀದ್, ಜೋ ರೂಟ್, ಜೇಮೀ ಸ್ಮಿತ್.

ಟಿ20 ತಂಡ- ಹ್ಯಾರಿ ಬ್ರೂಕ್ ( ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಜೇಮೀ ಓವರ್ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೇಮೀ ಸ್ಮಿತ್, ಲ್ಯೂಕ್ ವುಡ್.

ಐರ್ಲೆಂಡ್ ಸರಣಿಗೆ ಇಂಗ್ಲೆಂಡ್ ತಂಡ

ಜಾಕೋಬ್ ಬೆಥೆಲ್ (ನಾಯಕ), ರೆಹಾನ್ ಅಹ್ಮದ್, ಸೋನಿ ಬೇಕರ್, ಟಾಮ್ ಬ್ಯಾಂಟನ್, ಜೋಸ್ ಬಟ್ಲರ್, ಲಿಯಾಮ್ ಡಾಸನ್, ಟಾಮ್ ಹಾರ್ಟ್ಲಿ, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಜೇಮೀ ಓವರ್ಟನ್, ಮ್ಯಾಥ್ಯೂ ಪಾಟ್ಸ್, ಆದಿಲ್ ರಶೀದ್, ಫಿಲ್ ಸಾಲ್ಟ್, ಲ್ಯೂಕ್ ವುಡ್ .

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:18 pm, Fri, 15 August 25